ಬದಿಯಡ್ಕ: ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಕೋವಿಡ್ ಪ್ರತಿರೋಧ ಚಟುವಟಿಕೆಗಳ ಭಾಗವಾಗಿ ವಾರ್ಡು ಮಟ್ಟದಲ್ಲಿ ಲಸಿಕೆ ನೀಡಲು ಪ್ರಾರಂಭಿಸಲಾಗಿದೆ.
ಬದಿಯಡ್ಕ ಗ್ರಾಮಪಂಚಾಯಿತಿಯ 1 ಹಾಗೂ 2ನೇ ವಾರ್ಡುಗಳಲ್ಲಿ ಸೋಮವಾರ, ಬುಧವಾರಗಳಂದು 400ಕ್ಕೂ ಹೆಚ್ಚು ಮಂದಿಗೆ ಡೋಸ್‍ಗಳನ್ನು ನೀಡಲಾಯಿತು. 3ನೇ ವಾರ್ಡು ಕುಂಟಿಕಾನದಲ್ಲಿ ಗುರುವಾರ ಕೋವಿಶೀಲ್ಡ್ 2ನೇ ಹಂತದವರಿಗೆ ನೀಡಲಾಯಿತು. ವಿವಿಧ ವಾರ್ಡುಗಳಿಂದ ಜನರು ಆಗಮಿಸಿದ್ದರು. ಒಟ್ಟು 224 ಮಂದಿಗೆ ಲಸಿಕೆ ಹಾಕಲಾಗಿತ್ತು. ಬೆಳಗ್ಗೆ 6.30ಕ್ಕೆ ಜನರು ಆಗಮಿಸಿ ತಮ್ಮ ಲಸಿಕೆಗಳನ್ನು ಕಾಯ್ದಿರಿಸಿಕೊಳ್ಳುತ್ತಿರುವುದು ಕಂಡುಬಂತು. ಸರಿಯಾದ ಮಾಹಿತಿಯಿಲ್ಲದೆ ಕೆಲವೊಂದು ಮಂದಿ ಮೊದಲ ಡೋಸ್‍ಗಾಗಿ ಆಗಮಿಸಿ ಹಿಂತಿರುಗಿದ್ದರು. ಮುಂದಿನ ದಿನಗಳಲ್ಲಿ ಇತರ ವಾರ್ಡುಗಳಲ್ಲಿಯೂ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಇಲಾಖೆಯ ಅಧಿಕೃತರು ತಿಳಿಸಿದ್ದಾರೆ.





