ಕುಂಬಳೆ: ತಮಿಳುನಾಡು ನಾಗಪಟ್ಟಿನಂನ ಯೋಗ ಓರ್ಗನೈಸೇಶನ್ ಆಫ್ ಇಂಡಿಯಾ ಆ್ಯಂಡ್ ಎಡಿಎಂ ಕಾಲೇಜು ಫಾರ್ ವುಮೆನ್‍ನ ದೈಹಿಕ ಶಿಕ್ಷಣ ವಿಭಾಗ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಆಯೋಜಿಸಿದ ರಾಷ್ಟ್ರ ಮಟ್ಟದ ವೈವಿಧ್ಯ ಯೋಗಾಸನ ಸ್ಪರ್ಧೆಯಲ್ಲಿ ಕಾಸರಗೋಡಿನ ಬಾಲ ಪ್ರತಿಭೆಗಳಾದ ಅಭಿಜ್ಞಾ ಮತ್ತು ಕೌಸ್ತುಭ ಪ್ರಥಮ ಸ್ಥಾನ ಪಡೆದಿದ್ದಾರೆ.
ಈ ಇಬ್ಬರು ಕಾಸರಗೋಡಿನ ಶ್ರೀ ಲಕ್ಷ್ಮೀ ವೆಂಕಟೇಶ ವಿದ್ಯಾಲಯದ ಆರನೇ ತರಗತಿ ವಿದ್ಯಾರ್ಥಿಗಳಾಗಿದ್ದಾರೆ. ಈ ವಿದ್ಯಾರ್ಥಿಗಳು ಕರಂದಕ್ಕಾಡ್‍ನ ಯೋಗ ಫಾರ್ ಕಿಡ್ಸ್ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅಭಿಜ್ಞಾ ಯೋಗ ಶಿಕ್ಷಕಿ ತೇಜ ಕುಮಾರಿ-ಹರೀಶ್ ದಂಪತಿ ಪುತ್ರಿ, ಕೌಸ್ತುಭ ಕೆ.ಯು. ತಾಳಿಪಡ್ಪಿನ ಉಪೇಂದ್ರ ಆಚಾರ್ಯ ಹಾಗು ಮಮತಾ ಆಚಾರ್ಯ ದಂಪತಿಗಳ ಪುತ್ರ.





