ಕಾಸರಗೋಡು: ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಪ್ರಥಮ ಚಾತುರ್ಮಾಸ್ಯದ ಅಂಗವಾಗಿ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಶನಿವಾರ ಶ್ರೀಮಠದ ಆವರಣದಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಮೊದಲ ಕಾರ್ಯಕ್ರಮವಾಗಿ ಸುರತ್ಕಲ್ಲಿನ ಶ್ರೀನಾಟ್ಯಾಂಜಲಿ ಕಲಾ ಅಕಾಡೆಮಿಯ ನಿರ್ದೇಶಕ ವಿದ್ವಾನ್ ಚಂದ್ರಶೇಖರ ನಾವಡ ಅವರ ಶಿಷ್ಯವೃಂದದವರಿಂದ ಭರತನಾಟ್ಯ ಮತ್ತು ದಶಾವತಾರ ನೃತ್ಯ ರೂಪಕ ಪ್ರದರ್ಶನ ನಡೆಯಿತು. ವಿದಿಶಾ ಬೈಕಂಪಾಡಿ, ನಂದಿತಾ ಉಡುಪಿ., ರಮೈಶ್ರಿ ಉಡುಪಿ., ಪ್ರಜ್ಞಾ ಸುರತ್ಕಲ್, ಸ್ವಸ್ತಿ ಹೆಗಡೆ ಕೆರೆಮನೆ, ಭಾವನಾ ಡಿ ಜೆ ಸುರತ್ಕಲ್, ರಿಯಾ ಸುರತ್ಕಲ್, ದಿವ್ಯ ಸುರತ್ಕಲ್ ಭಾಗವಹಿಸಿದರು.
ಭಾನುವಾರ ಬಳ್ಳಪದವಿನ ಯೋಗೀಶ ಶರ್ಮ ಬಳಗದವರಿಂದ ಸಂಗೀತಾರ್ಚನೆ ನೆರವೇರಿತು. ಇಂದಿನಿಂದ (ಸೋಮವಾರ) ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕøತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ ನಡೆಯಲಿದೆ. ಸಂಜೆ 6ಕ್ಕೆ ನಡೆಯಲಿರುವ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ದೀಪ ಪ್ರಜ್ವಲನೆಗೊಳಿಸಿ ಚಾಲನೆ ನೀಡುವರು. ಹಿರಿಯ ವೈದ್ಯ, ಕವಿ, ಯಕ್ಷಗಾನ ಅರ್ಥಧಾರಿ ಡಾ.ರಮಾನಂದ ಬನಾರಿ, ಹಿರಿಯ ಯಕ್ಷಗಾನ ಕಲಾವಿದ ಕೆ.ಗೋವಿಂದ ಭಟ್ ಸೂರಿಕುಮೇರಿ ಉಪಸ್ಥಿತರಿರುವರು. ಕೆ.ಶ್ರೀಕರ ಭಟ್ ಮುಂಡಾಜೆ ಅವರನ್ನು ಈ ಸಂದರ್ಭ ಸನ್ಮಾನಿಸಲಾಗುವುದು. ಬಳಿಕ ಕೃಷ್ಣ ಸಾರಥ್ಯ ಪ್ರಸಂಗದ ತಾಳಮದ್ದಳೆ ನಡೆಯಲಿದ್ದು, ಪುತ್ತಿಗೆ ರಘುರಾಮ ಹೊಳ್ಳ, ಪದ್ಯಾಣ ಶಂಕರನಾರಾಯಣ ಭಟ್, ಎಂ.ಲಕ್ಷೀಶ ಅಮ್ಮಣ್ಣಾಯ ಹಾಗೂ ಮುಮ್ಮೇಳದಲ್ಲಿ ಡಾ.ರಮಾನಂದ ಬನಾರಿ, ಕೆ.ಗೋವಿಂದ ಭಟ್, ಶಂಭು ಶರ್ಮ ವಿಟ್ಲ, ಕೆ.ಶ್ರೀಕರ ಭಟ್ ಭಾಗವಹಿಸುವರು.






