HEALTH TIPS

ಕನ್ನಡ ಕಾವ್ಯಗಳಲ್ಲಿ ಹುದುಗಿರುವ ರಂಗಭೂಮಿಯ ಚಹರೆಗಳನ್ನು ಹುಡುಕಬೇಕು - ಡಾ.ಕೆ.ವೈ ನಾರಾಯಣ ಸ್ವಾಮಿ

 

            ಕಾಸರಗೋಡು: ಸಮುದಾಯ  ಜೀವಂತವಾಗಿರುವಲ್ಲಿ  ಕಲೆಗಳು ಜೀವಂತವಾಗಿರುತ್ತವೆ. ಜನರ ಬದುಕೇ ಕ್ರಿಯಾಶೀಲವಾದುದು. ಕ್ರಿಯಾಶೀಲತೆಯು ಸದಾ ಹೊಸತರ ಅನ್ವೇಷಣೆಯಲ್ಲಿರುತ್ತದೆ. ಆಧುನಿಕ ಕನ್ನಡ ನಾಟಕ ಪರಂಪರೆಯು ಕಾವ್ಯಪರಂಪರೆಯಷ್ಟು ವ್ಯಾಪಕವಾಗಿ ಕಂಡು ಬರದೇ ಇದ್ದರೂ ಕ್ವಚಿತ್ತಾಗಿ ಬಂದಿದೆ. ಕನ್ನಡದಲ್ಲಿ ಜನಪದ ರಂಗಭೂಮಿಯ ದೊಡ್ಡದೊಂದು ಪರಂಪರೆ ಇದೆ. ಆದರೆ ಅದನ್ನು ಆಧುನಿಕ ರಂಗಭೂಮಿಯ ರೀತಿಯಲ್ಲಿ ಖಚಿತವಾದ ಕಾಲನಿರ್ಣಯದೊಂದಿಗೆ ಹೇಳಲು ಸಾಧ್ಯವಿಲ್ಲ ಎಂದು ಖ್ಯಾತ ನಾಟಕಕಾರ ಡಾ.ಕೆ.ವೈ ನಾರಾಯಣ ಸ್ವಾಮಿ ಅಭಿಪ್ರಾಯಪಟ್ಟರು.

            ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಪೆರಿಯ, ಕಾಸರಗೋಡಿನ ಕನ್ನಡ ವಿಭಾಗವು ಆಯೋಜಿಸಿದ ಸರಣಿ ಉಪನ್ಯಾಸ 'ಸಾಹಿತ್ಯಯಾನ'ದ ಹತ್ತನೆಯ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು  'ಕನ್ನಡ ನಾಟಕ ಪರಂಪರೆಯ ಶೋಧ' ಎಂಬ ವಿಷಯದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು

                ಕನ್ನಡದಲ್ಲಿ ಬೆಳೆದು ಬಂದಿರುವ ಹವ್ಯಾಸಿ ಮತ್ತು ವೃತ್ತಿರಂಗಭೂಮಿಯ ಪರಂಪರೆಯೂ ಬಹಳ ವ್ಯಾಪಕವಾದುದು. ಆರಂಭಿಕ ಕನ್ನಡದ ನಾಟಕಕಾರರು ಈ ನೆಲೆಯಲ್ಲಿ ವಿಶೇಷವಾದ ಕೆಲಸವನ್ನು ಮಾಡಿದ್ದಾರೆ. ಅವರು ಪ್ರಯೋಗಶೀಲವಾದ ಅನೇಕ ಹೊಸ ನಾಟಕಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಆಧುನಿಕ ರಂಗಭೂಮಿಯ ಈ ಪ್ರಯೋಗಗಳು  ಬೇರೆ ಭಾಷೆಗಳ ಅನುವಾದ ಪ್ರಕ್ರಿಯೆಯ ಮೂಲಕ ನಡೆದಿರುವುದಾಗಿದೆ. ಮೊದಲ ಹಂತದ ಅನೇಕ ನಾಟಕಗಳು ಸಂಸ್ಕøತ ಮತ್ತು ಇಂಗ್ಲಿಷ್ ಭಾಷೆಯಿಂದ ಕನ್ನಡಕ್ಕೆ ರೂಪಾಂತರಗೊಂಡಿರುವವು.    ಆದರೆ ಕನ್ನಡದ ರಂಗಪರಂಪರೆಯ ಶೋಧವು ಕನ್ನಡ ಸಾಹಿತ್ಯ ಸಂಸ್ಕೃತಿಯ ಒಳಗಿನಿಂದ ನಡೆಯಬೇಕಾಗಿದೆ. ಕನ್ನಡದ ಪ್ರಾಚೀನ ಕವಿಗಳಾದ ಪಂಪ, ರನ್ನ, ಜನ್ನ, ರತ್ನಾಕರವರ್ಣಿ ಮೊದಲಾದ ಕವಿಗಳ ಕಾವ್ಯದೊಳಗಿನ ರಂಗರೂಪಕಗಳನ್ನು ಶೋಧಿಸುವ ಕಾರ್ಯ ಅಗತ್ಯವಾಗಿ ನಡೆಯಬೇಕು. ಇದರಿಂದ ಪ್ರಾಚೀನ ಕವಿಗಳನ್ನು ಹೊಸದಾಗಿ ಪರಿಚಯಿಸಲು ಸಾಧ್ಯವಾಗುವುದರ ಜೊತೆಗೆ ನಾಟಕದ ಒಳಗಿನ ವರ್ತಮಾನವನ್ನು ಶೋಧಿಸಲು ಸಾಧ್ಯ ಎಂದು ಅವರು ತಿಳಿಸಿದರು. 

              ಕೇಂದ್ರೀಯ ವಿ.ವಿ.ಯ ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥರಾದ ಡಾ.ಮೋಹನ್ ಎ.ಕೆ., ಪ್ರಸ್ತಾವನೆಯ ಮಾತುಗಳನ್ನಾಡಿ, ಸಾಹಿತ್ಯಯಾನ ಕಾರ್ಯಕ್ರಮವು ಸಾಹಿತ್ಯ ಪ್ರಿಯರನ್ನು ಯಶಸ್ವಿಯಾಗಿ ತಲುಪುತ್ತಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಬದುಕಿನ ಏಕತಾನತೆಯನ್ನು ಹೋಗಲಾಡಿಸಿ ಸಮಾಜದಲ್ಲಿ ಸಮೃದ್ಧತೆಯನ್ನು ತರಲು ಸಾಧ್ಯ. ನಾಟಕ ಮತ್ತು ಬದುಕು ಬೇರೆ ಬೇರೆಯಲ್ಲ. ಸಮಾಜದೊಳಗಿನ ನೈತಿಕ ಮೌಲ್ಯಗಳು ಕುಸಿದಾಗ ಸ್ವಸ್ಥ ಸಮಾಜವನ್ನು ರೂಪಿಸುವಲ್ಲಿ ನಾಟಕಗಳು ಬಹಳ ಮುಖ್ಯಪಾತ್ರವಹಿಸುತ್ತವೆ. ನಾಟಕಗಳಲ್ಲಿ ಪ್ರಸ್ತುತಗೊಳ್ಳುವ ಜೀವನವು ನೈಜ ಸಮಾಜದ ಪ್ರತಿಬಿಂಬವಾಗಿರುತ್ತದೆ. ಈ ಮುಖೇನ ಸಮಾಜವನ್ನು ತಿದ್ದುವ, ಮನೋರಂಜನೆಯನ್ನು ಒದಗಿಸುವ ಕಾರ್ಯವನ್ನೂ ನಿರ್ವಹಿಸುತ್ತದೆ. ಅರಿವನ್ನು ವಿಸ್ತರಿಸುವ ಕೆಲಸವೂ ಕಾರ್ಯಕ್ರಮದಿಂದ ನಡೆಯುತ್ತಿದೆ ಎಂದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries