ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಬಾಧಿತರ ಸಂಖ್ಯೆ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರಕಾರ ನೇಮಿಸಿರುವ ವಿಶೇಷ ಅಧಿಕಾರಿ, ಲೈಫ್ ಮಿಷನ್ ಸಿ.ಇ.ಒ. ಪಿ.ಬಿ.ನೂಹ್ ಅವರು ಪ್ರತಿರೋಧ ಚಟುವಟಿಕೆಗಳ ಅವಲೋಕನ ಸಭೆ ಆನ್ ಲೈನ್ ರೂಪದಲ್ಲಿ ನಡೆಸಿದರು.
ಕೋವಿಡ್ ತಪಾಸಣೆ ಕಡಿಮೆಗೊಳ್ಳುತ್ತಿರುವುದು ಪ್ರಧಾನ ಸಮಸ್ಯೆಯಾಗುತ್ತಿದೆ ಎಂದು ಸಭೆ ಅಭಿಪ್ರಾಯಪಟ್ಟಿದೆ. ಕೋವಿಡ್ ಬಾಧಿತರ ಪ್ರಾಥಮಿಕ ಸಂಪರ್ಕ ಹೊಂದಿರುವ ಎಲ್ಲರೂ ಕಡ್ಡಾಯವಾಗಿ ಕೋವಿಡ್ ತಪಾಸಣೆಗೆ ಒಳಗಾಗಬೇಕು ಎಂದು ತಿಳಿಸಲಾಗಿದೆ.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಅಧ್ಯಕ್ಷತೆ ವಹಿಸಿದ್ದರು.
ಪ್ರತಿರೋಧ ಚಟುವಟಿಕೆಗಳು ಬಿಗಿಗೊಳಿಸುವಂತೆ ಪೆÇಲೀಸರು ಮತ್ತು ಸೆಕ್ಟರ್ ಮೆಜಿಸ್ಟ್ರೇಟ್ ಗಳಿಗೆ ಆದೇಶ ನೀಡಲಾಗಿದೆ.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಬಿ.ರಾಜೀವ್, ಹೆಚ್ಚುವರಿ ದಂಡನಾಧಿಕಾರಿ ಎ.ಕೆ.ರಮೇಂದ್ರನ್, ಎ.ಎಸ್.ಪಿ. ಹರಿಶ್ಚಂದ್ರ ನಾಯ್ಕ್, ಜಿಲ್ಲಾ ವೈದ್ಯಾಧಿಕಾರಿ ಆರ್.ರಾಜನ್, ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ವಲಯ ಕಂದಾಯಾಧಿಕಾರಿ ಅತುಲ್ ಎಸ್.ನಾಥ್ ಮೊದಲಾದವರು ಉಪಸ್ಥಿತರಿದ್ದರು.

