ಕಾಸರಗೋಡು: ಕೇರಳದ ಏಕೈಕ ಶ್ರೀಆಚಾರ್ಯ ಶಂಕರರ ಪೀಠ, ಶಂಕರರ ಶಿಷ್ಯರಲ್ಲಿ ಓರ್ವರಾದ ತೋಟಕಾಚಾರ್ಯ ಪರಂಪರೆಯ ಎಡನೀರು ಮಠದ ಯತಿವರ್ಯ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಪ್ರಥಮ ಚಾತುರ್ಮಾಸ್ಯ ವ್ರತಾನುಷ್ಠಾನ ಶನಿವಾರ ಶ್ರೀಮಠದಲ್ಲಿ ಆರಂಭಗೊಂಡಿತು.
ಬೆಳಿಗ್ಗೆ ವ್ಯಾಸಪೂಜೆ, 108 ತೆಂಗಿನಕಾಯಿ ಗಣಪತಿ ಹೋಮ, ದಕ್ಷಿಣಾಮೂರ್ತಿ ಹೋಮ, ಗೋಪಾಲಕೃಷ್ಣ ಮಂತ್ರ ಹೋಮ, ಶ್ರೀ ಸೂಕ್ತ ಹೋಮ, ತ್ರಿಕಾಲ ಪೂಜೆ ಮೊದಲಾದ ವಿಧಿವಿಧಾನಗಳು ನೆರವೇರಿತು.
ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಜು.26 ರಿಂದ ಆ.1ರ ವರೆಗೆ ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕøತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ ನಡೆಯಲಿದೆ.
ಚಾತುರ್ಮಾಸ್ಯ ವ್ರತಾನುಷ್ಠಾನ ಸೆ.20. ರ ವರೆಗೆ ಶ್ರೀಮದ್ ಎಡನೀರು ಮಠದಲ್ಲಿ ನಡೆಯಲಿದೆ.

