ಕಾಸರಗೋಡು: ವಿಶ್ವ ಹೆಪಿಟೈ ಟಿಸ್ ದಿನಾಚರಣೆ ಅಂಗವಾಗಿ ಕಾಸರಗೋಡು ಜಿಲ್ಲಾ ಮಟ್ಟದ ವೆಬಿನಾರ್ ಜರುಗಿತು.
ಜಿಲ್ಲಾ ವೈದ್ಯಕೀಯ ಕಾರ್ಯಾಲಯ, ದೇಶೀಯ ಆರೋಗ್ಯ ದೌತ್ಯ ಜಂಟಿ ವತಿಯಿಂದ ಕಾರ್ಯಕ್ರಮ ನಡೆಯಿತು. ಜಿಲ್ಲಾ ವೈದ್ಯಾಧಿಕಾರಿ ಡಾ.ಕೆ.ಆರ್.ರಾಜನ್ ಉದ್ಘಾಟಿಸಿದರು. ದೇಶೀಯ ಆರೋಗ್ಯ ದೌತ್ಯ ಜಿಲ್ಲಾ ಕಾರ್ಯಕ್ರಮ ಪ್ರಭಾರ ಪ್ರಬಂಧಕ ಡಾ.ಎ.ವಿ.ರಾಮದಾಸ್ ಅಧ್ಯಕ್ಷತೆ ವಹಿಸಿದ್ದರು. ಜ್ಯೂನಿಯರ್ ಕನ್ಸ ಲ್ಟೆಂಟ್ ಜನರಲ್ ಡಾ.ರಜಿತ್ ಕೃಷ್ಣನ್ ತರಗತಿ ನಡೆಸಿದರು. ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಡಾ.ಮುರಳೀಧರ ನಲ್ಲೂರಾಯ, ಜಿಲ್ಲಾ ಆಶಾ ಸಂಚಾಲಕ ಶಶಿಕಾಂತ್ ಉಪಸ್ಥಿತರಿದ್ದರು. ಮಾಸ್ ಮೀಡಿಯಾ ಅಧಿಕಾರಿ ಅಬ್ದುಲ್ ಲತೀಫ್ ಸ್ವಾಗತಿಸಿದರು. ಸಹಾಯಕ ಮಾಸ್ ಮೀಡಿಯಾ ಅಧಿಕಾರಿ ಸಯನಾ ಎಸ್. ವಂದಿಸಿದರು.





