HEALTH TIPS

ಕೆ ಸುರೇಂದ್ರನ್ ಮತ್ತು ಪುತ್ರ ಸಾಕ್ಷಿಗಳು; ಕೊಡಕರ ಮನಿ ಲಾಂಡರಿಂಗ್ ಪ್ರಕರಣದ ಚಾರ್ಜ್‍ಶೀಟ್ ದಾಖಲು

             ತಿರುವನಂತಪುರ: ಬಿಜೆಪಿ ರಾಜ್ಯ ಸಮಿತಿಯ ಮುಖಂಡರ ಬಗ್ಗೆ ಕಳವಳಕ್ಕೆ ಕಾರಣವಾದ ಕೊಡಕರ ಮನಿ ಲಾಂಡರಿಂಗ್ ಪ್ರಕರಣದ ಚಾರ್ಜ್‍ಶೀಟ್ ದಾಖಲಿಸಲಾಗಿದೆ. ತನಿಖಾ ತಂಡ ಇರಿಂಞಲಕುಡ ನ್ಯಾಯಾಲಯದಲ್ಲಿ 625 ಪುಟಗಳ ಚಾರ್ಜ್‍ಶೀಟ್ ಸಲ್ಲಿಸಿದೆ. ಚಾರ್ಜ್‍ಶೀಟ್‍ನಲ್ಲಿ 22 ಆರೋಪಿಗಳು ಮತ್ತು 216 ಸಾಕ್ಷಿಗಳಿದ್ದಾರೆ. ಈ ಪ್ರಕರಣದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಏಳನೇ ಸಾಕ್ಷಿಯಾಗಿದ್ದಾರೆ.

                ಕೆ ಸುರೇಂದ್ರನ್ ಮತ್ತು ಅವರ ಪುತ್ರ ಹರಿಕೃಷ್ಣನ್ ಸೇರಿದಂತೆ ಹತ್ತೊಂಬತ್ತು ಬಿಜೆಪಿ ನಾಯಕರು ಈ ಪ್ರಕರಣದ ಸಾಕ್ಷಿಗಳಾಗಿದ್ದಾರೆ. ಚಾರ್ಜ್‍ಶೀಟ್ ನ ಪ್ರಕಾರ, ಲೂಟಿ ಮಾಡಿದ 3.5 ಕೋಟಿ ರೂ. ಬಿಜೆಪಿಯ ಚುನಾವಣಾ ನಿಧಿಯಾಗಿದೆ. ಹಣ ಕರ್ನಾಟಕದಿಂದ ಹರಿದು ಬಂದಿದೆ. ಬಿಜೆಪಿ ಮುಖಂಡರು ಹಣವನ್ನು ದೂರುದಾರ ಧರ್ಮರಾಜನ್‍ಗೆ ಹಸ್ತಾಂತರಿಸಿರುವರು.

                ಹಣವನ್ನು ತಲುಪಿಸುವ ಮೂಲಕ ಚುನಾವಣಾ ನಿಯಮಗಳನ್ನು ಉಲ್ಲಂಘಿಸಿದೆಯೇ ಎಂದು ಬಿಜೆಪಿ ತನಿಖೆ ನಡೆಸಬೇಕು ಮತ್ತು ಹಣದ ಮೂಲದ ಬಗ್ಗೆ ಕೇಂದ್ರ ಸಂಸ್ಥೆ ತನಿಖೆ ನಡೆಸಬೇಕು ಎಂದು ಚಾರ್ಜ್‍ಶೀಟ್‍ನಲ್ಲಿ ತಿಳಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿಯಲಿದೆ ಎಂದು ತನಿಖಾ ತಂಡ ತಿಳಿಸಿದೆ. ಮನಿ ಲಾಂಡರಿಂಗ್‍ಗೆ ಸಂಬಂಧಿಸಿದ ಪ್ರಕರಣಗಳನ್ನು ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಲಿದೆ. ಆದ್ದರಿಂದ ಚಾರ್ಜ್‍ಶೀಟ್‍ನ ಪ್ರತಿಯನ್ನು ಇಡಿ ಮತ್ತು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಪೋಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.

              ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡವು ಈ ಹಿಂದೆ ಸುರೇಂದ್ರನ್ ಮತ್ತು ಇತರರನ್ನು ಪ್ರಶ್ನಿಸಿತ್ತು. ಆದರೆ ಅವರನ್ನು ಶಿಕ್ಷಿಸಲು ಯಾವುದೇ ಪುರಾವೆಗಳಿಲ್ಲ ಎಂದು ತನಿಖಾ ತಂಡ ತಿಳಿಸಿದೆ. ವಂಚಿಸಲಾದ ಎಲ್ಲಾ ಹಣವನ್ನು ಕಂಡುಹಿಡಿಯುವುದು ಕಷ್ಟ ಎಂದು ತನಿಖಾ ತಂಡ ತಿಳಿಸಿತ್ತು. ಈ ಪ್ರಕರಣದಲ್ಲಿ ಹೈಕೋರ್ಟ್‍ನ ಕೆಲವು ಉಲ್ಲೇಖಗಳ ಬಗ್ಗೆಯೂ ಚರ್ಚಿಸಲಾಯಿತು. ದರೋಡೆ ಆಕಸ್ಮಿಕವಲ್ಲ ಆದರೆ ನಿಖರವಾಗಿ ಯೋಜಿಸಲಾಗಿದೆ ಎಂದು ನ್ಯಾಯಾಲಯ ಗಮನಿಸಿದೆ. ಇನ್ನೂ ಸಾಕಷ್ಟು ರಹಸ್ಯಗಳು ಹೊರಬರಬೇಕಾಗಿದೆ ಎಂದು ಹೈಕೋರ್ಟ್ ಹೇಳಿದೆ.

                    ಏಪ್ರಿಲ್ 3 ರಂದು, ರಾಜ್ಯದ ವಿಧಾನಸಭಾ ಚುನಾವಣೆಗೆ ಕೆಲವು ದಿನಗಳ ಮೊದಲು, ಕೊಡಕರ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಗ್ಯಾಂಗ್ 3.5 ಕೋಟಿ ರೂ. ದರೋಡೆಗೈದಲ್ಲಿಂದ ಪ್ರಕರಣಗಳು ಬೆಳಕಿಗೆ ಬಂದಿತ್ತು. ಇದರಲ್ಲಿ ತನಿಖಾ ತಂಡ 1 ಕೋಟಿ 45 ಲಕ್ಷ ರೂ.ಈಗಾಗಲೇ ವಶಪಡಿಸಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries