ನವದೆಹಲಿ: ಕೇರಳ ವಿಧಾನಸಭೆ ಗಲಭೆ ಪ್ರಕರಣದಲ್ಲಿ ರಾಜ್ಯ ಸರ್ಕಾರವನ್ನು ಸುಪ್ರೀಂ ಕೋರ್ಟ್ ಇಂದು ಮತ್ತೊಮ್ಮೆ ಟೀಕಿಸಿದೆ. ಸರ್ಕಾರ ಯಾವ ಸಮರ್ಥನೆಯನ್ನು ಬಯಸುತ್ತಿದೆ ಎಂದು ಸುಪ್ರೀಂ ಕೋರ್ಟ್ ಕೇಳಿದೆ. ಶಾಸಕಾಂಗ ಸಭೆಗಳು ಪ್ರಜಾಪ್ರಭುತ್ವದ ಮೇರು ಮೌಲ್ಯಗಳು ಮತ್ತು ಹೃದಯ ಕೇಂದ್ರವಾಗಿದೆ. ವಿಧಾನಸಭೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂಬುದರಲ್ಲಿ ಯಾವುದೇ ವಿವಾದಗಳಿಲ್ಲ. ಆದರೆ ಶಾಸಕರು ಸ್ವತಃ ವಸ್ತುಗಳನ್ನು ನಾಶಮಾಡಲು ಪ್ರಯತ್ನಿಸುವುದರ ಹಿಂದೆ ಸಾರ್ವಜನಿಕ ಹಿತಾಸಕ್ತಿ ಏನು ಎಂದು ನ್ಯಾಯಾಲಯ ಸರ್ಕಾರವನ್ನು ಕೇಳಿದೆ.
ಬಂದೂಕು ಧಾರಿಗಳಾಗಿ ವಿಧಾನಸಭೆಗೆ ಆಗಮಿಸುವುದರಿಂದ ಸಾರ್ವಭೌಮತ್ವವನ್ನು ಪಡೆಯಲು ಸಾಧ್ಯವೇ ಎಂದು ನ್ಯಾಯಾಲಯ ಸರ್ಕಾರವನ್ನು ಕೇಳಿತು. ಈ ಬಗ್ಗೆ ಸರ್ಕಾರ ವಿವರಣೆ ನೀಡಬೇಕು ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದರು. ನ್ಯಾಯಾಲಯದಲ್ಲಿ ಕಾವೇರಿದ ಚರ್ಚೆಗಳು ನಡೆಯುವುದು ಸಹಜ. ಹಾಗೆಂದು ನ್ಯಾಯಾಲಯದ ವಸ್ತುಗಳನ್ನು ನಾಶಪಡಿಸುತ್ತಾರೆಯೇ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಅವರು ಕೇಳಿದರು.




