HEALTH TIPS

ಕಡಲಕಿನಾರೆಗಳ ಸಂರಕ್ಷಣೆ ಸಹಿತ ವಿವಿಧ ವಲಯಗಳ ಸಮಸ್ಯೆಗಳಿಗೆ ಪರಿಹಾರ: ಸಚಿವ ಸಜಿ ಚೆರಿಯಾನ್

             ಕಾಸರಗೋಡು: ಕಾಸರಗೋಡು ಕರಾವಳಿ ವಲಯ ಎದುರಿಸುತ್ತಿರುವ ಕಡಲಕಿನಾರೆಗಳ ಸಂರಕ್ಷಣೆ ಸಂಬಂಧ ಸಹಿತ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದು ಮೀನುಗಾರಿಕೆ-ಸಂಸ್ಕøತಿ-ಯುವಜನಕಲ್ಯಾಣ ಸಚಿವ ಸಜಿ ಚೆರಿಯಾನ್ ತಿಳಿಸಿದರು. 

                  ಜಿಲ್ಲೆಯ ವಿವಿಧ ಕರಾವಳಿ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿದ ಅವರು ಈ ವಿಚಾರ ಪ್ರಕಟಿಸಿದರು. 

            ಕರಾವಳಿ ವಲಯಗಳ ಸಮಸ್ಯೆ ಬಗೆಹರಿಕೆಗೆ ರಾಜ್ಯ ಸರಕಾರ ಆದ್ಯತೆ ನೀಡುತ್ತಿದೆ. ವಿವಿಧ ಇಲಾಖೆಗಳ ಜಂಟಿ ಚಟುವಟಿಕೆಗಳು ಈ ನಿಟ್ಟಿನಲ್ಲಿ ಜರುಗಲಿವೆ. ಅಜಾನೂರು ಮೀನುಗಾರಿಕೆ ಹಾರ್ಬರ್ ನ ನೂತನ ಅಧ್ಯಯನ ವರದಿ ಸಿದ್ಧಪಡಿಸಲು ಏಜೆನ್ಸಿಗೆ ಹೊಣೆ ನೀಡಲಾಗಿದೆ. ಮೂರು ತಿಂಗಳ ಅವಧಿಯಲ್ಲಿ ವರದಿ ನೀಡಲು ಆದೇಶಿಸಲಾಗಿದೆ. ಅಧ್ಯಯನದ ಜೊತೆಗೆ ಸಮಗ್ರ ಯೋಜನೆ ವರದಿ, ಎಸ್ಟಿಮೇಟ್ ಸಿದ್ಧಪಡಿಸಲೂ ಹಾರ್ಬರ್ ಇಂಜಿನಿಯರಿಂಗ್ ವಿಭಾಗದ ಕಾರ್ಯಕಾರಿ ಇಂಜಿನಿಯರ್ ಅವರಿಗೆ ಸಚಿವ ಆದೇಶ ನೀಡಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ನಿರ್ಮಾಣ ಚಟುವಟಿಕೆಗಳ ಸಂಬಂಧ ಕ್ರಮ ಆರಂಭಿಸಲಾಗುವುದು. 


                 ಕಾಸರಗೋಡು ಹಾರ್ಬರ್ ನಿರ್ಮಾಣದಲ್ಲಿ ತಲೆದೋರಿರುವ ಲೋಪದೋಷಗಳ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು. ಮಂಜೇಶ್ವರ ಹಾರ್ಬರ್ ಅಂಗವಾಗಿ ನಡೆಸಲಾಗುತ್ತಿರುವ ಚಟುವಟಿಕೆಗಳು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸಚಿವ ಹೇಳಿದರು. ಮಂಜೇಶ್ವರ ಹಾರ್ಬರ್ ಬ್ರಿಜಿಂಗ್ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು. ಕೋಟಿಕುಳಂ ಹಾರ್ಬರ್ ನಿರ್ಮಾಣದ ಶಿಫಾರಸು ಕೂಡ ಪರಿಶೀಲನೆಯಲ್ಲಿದೆ. ಎಸ್ಟಿಮೇಟ್ ಸಿದ್ಧಗೊಳಿಸಲು ಆದೇಶ ನೀಡಲಾಗಿದೆ. ಕಡಲ್ಕೊರೆತದಿಂದ ಸಮಸ್ಯೆಗೀಡಾಗುತ್ತಿರುವ ಮೀನುಗಾರರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅರ್ಹರಾದ ಎಲ್ಲರಿಗೂ ವಸತಿಸೌಲಭ್ಯ ಒದಗಿಸಲಾಗುವುದು ಎಂದು ನುಡಿದರು. 

        ಕಾಸರಗೋಡು ಜಿಲ್ಲೆಯ ಕರಾವಳಿ ವಲಯದಲ್ಲಿ, ಮಂಜೇಶ್ವರ, ಕಾಸರಗೋಡು, ಅಜಾನೂರು ಹಾರ್ಬರ್ ಗಳಿಗೆ ಅವರು ಭೇಟಿ ನೀಡಿದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಎ.ಕೆ.ಎಂ.ಅಶ್ರಫ್, ಎನ್.ಎ.ನೆಲ್ಲಿಕುನ್ನು, ನ್ಯಾಯವಾದಿ ಸಿ.ಎಚ್. ಕುಂಞಂಬು, ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಕೃಷ್ಣನ್, ಮತ್ಸ್ಯ ಮಂಡಳಿ ಅಧ್ಯಕ್ಷ ಪಿ.ಕುಂuಟಿಜeಜಿiಟಿeಜರಾಮನ್, ಹಾರ್ಬರ್ ಇಂಜಿನಿಯರಿಂಗ್ ವಿಭಾಗ ಪ್ರಧಾನ ಇಂಜಿನಿಯರ್ ಜೋಮೋನ್ ಜಾರ್ಜ್, ಸೂಪ್ರಂಡಿಂಗ್ ಇಂಜಿನಿಯರ್ ಕುಂuಟಿಜeಜಿiಟಿeಜ ಮಮ್ಮು ವರವತ್, ಮೀನುಗಾರಿಕೆ ಇಲಾಖೆ ನಿರ್ದೇಶಕ ಸುರೇಂದ್ರನ್ ಮೊದಲಾದವರು ಈ ವೇಳೆ ಜತೆಗಿದ್ದರು.   


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries