ಕಾಸರಗೋಡು: ಕೋವಿಡ್ 19 ನ ದ್ವಿತೀಯ ಅಲೆಯ ವೇಳೆ ಮಕ್ಕಳ ಮಾನಸಿಕ-ದೈಹಿಕ ವಿಕಾಸ ನಡೆಸುವ ಉದ್ದೇಶದಿಂದ ಪ್ರತ್ಯೇಕ ಪರಿಶೀಲನೆ ನಡೆಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ನಡೆಸಲಾಗುವ ಇ-ಕೂಟಂ ಆನ್ ಲೈನ್ ಮನ್ಸೂನ್ ಶಿಬಿರ ಶನಿವಾರ ಆರಂಭಗೊಂಡಿದೆ.
ಜಿಲ್ಲಾ ಶಿಶು ಸಂರಕ್ಷಣೆ ಯೂನಿಟ್ ಶಿಬಿರದ ಸಂಘಟನಾ ಹೊಣೆಹೊತ್ತಿದೆ. ಮಹಿಳಾ ಶಿಶು ಅಭಿವೃದ್ಧಿ ಇಲಾಖೆ, ಯೂನಿಸೆಫ್ ಜಂಟಿ ವತಿಯಿಂದ "ಸರ್ಗ ವಸಂತಂ" ಎಂಬ ಹೆಸರಿನಲ್ಲಿ ಶಿಬಿರ ನಡೆಯುತ್ತಿದೆ. 3 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ರಾಜ್ಯ ಮಟ್ಟದಲ್ಲಿ ಸುಮಾರು 5 ಸಾವಿರ ಮಂದಿ ಮಕ್ಕಳು ಭಾಗವಹಿಸುತ್ತಿದ್ದಾರೆ.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಶಿಬಿರವನ್ನು ಉದ್ಘಾಟಿಸಿದರು. ಜಿಲ್ಲಾ ಶಿಕ್ಷಣ ಉಪನಿರ್ದೇಶಕಿ ಕೆ.ವಿ.ಪುಷ್ಪಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ ಬಿಂದು ಸಿ.ಎ., ಸಂರಕ್ಷಣೆ ಅಧಿಕಾರಿ ಫೈಝಲ್ ಮೊದಲಾದವರು ಉಪಸ್ಥಿತರಿದ್ದರು. ನಿರ್ಮಲ್ ಕುಮಾರ್ ಕಾಡಗಂ, ಷೈಜಿತ್ ಕರುವಾಕೋಡ್, ಜಿತೇಶ್ ಕಂಬಲ್ಲೂರು, ಇರ್ಫಾದ್ ಮಾಯಿಪ್ಪಾಡಿ, ಬಾಲಚಂದ್ರನ್ ಎರಿಯಾಲ್, ಅಹಮ್ಮದ್ ಶೆರಿನ್, ಯತೀಶ್ ಬಲ್ಲಾಳ್ ಮೊದಲಾದವರು ಶಿಬಿರದ ನೇತೃತ್ವ ವಹಿಸಿದ್ದಾರೆ.

