HEALTH TIPS

ವಿಧಾನ ಸಭೆ ಅಧಿವೇಶನ: ಕರಿವಣ್ಣೂರ್ ಹಗರಣದ ಬಗ್ಗೆ ಇಂದು ಚರ್ಚಿಸುವ ಸಾಧ್ಯತೆ


        ತಿರುವನಂತಪುರ: ಸಿಪಿಎಂ ಅಂಗಸಂಸ್ಥೆ ಐಎನ್ ಎಲ್ ವಿವಾದ, ಕರಿವಣ್ಣೂರ್ ಕೋ-ಆಪರೇಟಿವ್ ಬ್ಯಾಂಕ್ ಹಗರಣ ಸೇರಿದಂತೆ ಗಮನಾರ್ಹ ಸಮಸ್ಯೆಗಳು ಇಂದಿನ ವಿಧಾನಸಭೆ ಅಧಿವೇಶನದಲ್ಲಿ ಕಾವೇರುವ ಸಾಧ್ಯತೆಗಳಿವೆ. ಸದನದಲ್ಲಿ ಈ ರೀತಿಯ ವಿಷಯಗಳಲ್ಲಿ ಪ್ರತಿಪಕ್ಷಗಳು ಆಡಳಿತ ಪಕ್ಷಕ್ಕೆ ಸಹಾಯ ಮಾಡುತ್ತಿವೆ ಎಂಬ ಆರೋಪ ಬಲವಾಗಿದೆ.
      ಉನ್ನತ ನಾಯಕರ ನೇತೃತ್ವದಲ್ಲಿ ಸಿಪಿಎಂ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದೆ ಆದರೆ ಪ್ರತಿಪಕ್ಷಗಳು ಅದನ್ನು ರಾಜಕೀಯ ಅಸ್ರ್ತವಾಗಿ ಸಮರ್ಥತೆಯಿಂದ  ಬಳಸಲಿಲ್ಲ ಎಂದು ಆರೋಪಿಸಲಾಗಿದೆ.  ಈ ಪರಿಸ್ಥಿತಿಯಲ್ಲಿ, ಈ ವಿಷಯವನ್ನು ಮತ್ತೆ ಸದನದಲ್ಲಿ ಮೊಳಗಿಸಲು  ಪ್ರತಿಪಕ್ಷಗಳಲ್ಲಿ ಬಲವಾದ ಬೇಡಿಕೆಯಿದೆ.
      ಇದೇ ವೇಳೆ, ವಿಧಾನಸಭೆಯಲ್ಲಿ ಎಡ-ಬಲ ಹೊಂದಾಣಿಕೆ ಇದೆ ಎಂದು ಬಿಜೆಪಿ ಆರೋಪಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries