ತಿರುವನಂತಪುರ: ಲಾಕ್ ಡೌನ್ ನಿರ್ಬಂಧಗಳನ್ನು ರಾಜ್ಯದಲ್ಲಿ ಹೆಚ್ಚುಕಾಲ ವಿಸ್ತರಿಸಲಾಗದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕೋವಿಡ್ ಪ್ರಕರಣಗಳಲ್ಲಿ ಗಮನಾರ್ಹವಾದ ಕಡಿತ ಕಂಡುಬಂದಿಲ್ಲವಾದರೂ, ರಾಜ್ಯವು ಸಾಮಾನ್ಯ ಸ್ಥಿತಿಗೆ ಮರಳಬೇಕಾಗಿದೆ. ರಿಯಾಯಿತಿಗಳನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಸಿಎಂ ಹೇಳಿದರು.
ಲಾಕ್‍ಡೌನ್ ವಿನಾಯಿತಿಗಳ ದುರುಪಯೋಗವನ್ನು ಅನುಮತಿಸಲಾಗುವುದಿಲ್ಲ. ಕೋವಿಡ್À ಎರಡನೇ ತರಂಗದ ಪರಿಣಾಮಗಳು ಅನೇಕ ರಾಜ್ಯಗಳಲ್ಲಿ ಕಡಿಮೆಯಾಗಿದ್ದರೂ, ಕೇರಳದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗಿಲ್ಲ ಎಂದು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಅತಿಯಾಗಿ ಭಯಪಡುವ ಅಗತ್ಯವಿಲ್ಲ. ಸ್ಥತಿ ನಿಯಂತ್ರಣದಲ್ಲಿವೆ ಎಂದರು.
ನಿನ್ನೆ ಸಂಜೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಡೆಲ್ಟಾ ರೂಪಾಂತರವು ಎರಡನೇ ತರಂಗದಲ್ಲಿ ಕೇರಳವನ್ನು ತಲುಪಿತು. ಕೋವಿಡ್ ಎರಡನೇ ಹಂತವು ಇತರ ರಾಜ್ಯಗಳಲ್ಲಿ ಮಾರ್ಚ್ ಮಧ್ಯದಲ್ಲಿ ಪ್ರಾರಂಭವಾಗಿತ್ತು. ಆದರೆ ಕೇರಳದಲ್ಲಿ ಮೇ ತಿಂಗಳಲ್ಲಿ ಪ್ರಾರಂಭವಾಯಿತು. ಟಿಪಿಆರ್ 29 ಶೇ. ಹೆಚ್ಚಾಗಿದೆ ಮತ್ತು ದಿನಕ್ಕೆ ರೋಗಿಗಳ ಸಂಖ್ಯೆ 40,000 ಕ್ಕೆ ಏರಿತ್ತು. ಟಿಪಿಆರ್ ಸುಮಾರು 10 ಪ್ರತಿಶತದಷ್ಟು ಹಲವು ದಿನಗಳಿಂದ ಕಂಡುಬಂದಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ, ಕೋವಿಡ್ ಕೇರಳದಲ್ಲಿ ನಿನ್ನ 14,087 ಮಂದಿಯಲ್ಲಿ ಪಾಸಿಟಿವ್ ಆಗಿತ್ತು. ಕೋವಿಡ್‍ನಿಂದ 109 ಮಂದಿ ಮೃತರಾಗಿದ್ದರು. ಈ ಮೂಲಕ ರಾಜ್ಯಾದ್ಯಂತ ಈವರೆಗೆ ಕೋವಿಡ್ ನಿಂದ 14,489 ಮಂದಿ ಮೃತಪಟ್ಟಿದ್ದಾರೆ. 1,15,226 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 29,22,921 ಮಂದಿ ಈವರೆಗೆ ಕೋವಿಡ್‍ನಿಂದ ಮುಕ್ತರಾಗಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 3,84,493 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ರಾಜ್ಯದಲ್ಲಿ ಪರೀಕ್ಷಾ ಸಕಾರಾತ್ಮಕತೆ ಪ್ರಮಾಣ ನಿನ್ನೆ 10.7 ಆಗಿತ್ತು.





