HEALTH TIPS

ಕೊರೊನಾ ಲಸಿಕೆಯಿಂದ ಉಂಟಾಗುವ ಅಡ್ಡಪರಿಣಾಮಗಳು ದೀರ್ಘಾವಧಿಯರೆಗೆ ಇರುವುದೇ?

                 ಕೊರೊನಾ ಲಸಿಕೆಯ ಮೇಲಿದ್ದ ಅನುಮಾನ ದೂರಾಗಿ ಈಗೀಗ ಜನರು ಲಸಿಕೆ ತೆಗೆದುಕೊಳ್ಳುವ ಆಸಕ್ತಿ ತೋರುತ್ತಿದ್ದಾರೆ. ಈ ಲಸಿಕೆ ಪಡೆದವರು ಅಡ್ಡಪರಿಣಾಮಗಳನ್ನು ಎದುರಿಸುವುದು ಸಾಮಾನ್ಯವಾಗಿದೆ. ಅದು ಕೆಲವರಲ್ಲಿ ಸಣ್ಣ ಮಟ್ಟದ್ದಾಗಿರುತ್ತದ, ಕೆಲವರಿಗೆ ತೀವ್ರವಾಗಿರುತ್ತದೆ. ಆದರೆ ಈ ಅಡ್ಡಪರಿಣಾಮಗಳು ದೀರ್ಘಕಾಲದವರೆಗೆ ಕಾಡಬಹುದೇ ಎಂಬ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. ಈ ಗೊಂದಲವನ್ನು ನಾವಿಂದ ಪರಿಹಾರ ಮಾಡುತ್ತೇವೆ.

                 ಲಸಿಕೆಗಳು ಯಾವುದೇ ಅಪಾಯ ಅಥವಾ ದೀರ್ಘಕಾಲೀನ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದೇ? ಎಂಬುದರ ಕುರಿತು ಈ ಕೆಳಗೆ ಮಾಹಿತಿ ನೀಡಲಾಗಿದೆ:


              ಪ್ರಾಯೋಗಿಕ ಪರೀಕ್ಷೆಯ ಮೂಲಕ ಪರಿಣಾಮಕಾರತ್ವ ಸಾಬೀತು: ಕೊರೊನಾ ಲಸಿಕೆಗಳು, ಇತರ ಲಸಿಕೆಗಳಂತೆಯೇ ಅನೇಕ ಸುತ್ತಿನ ಅಧ್ಯಯನ, ಅಭಿವೃದ್ಧಿ ಮತ್ತು ಕ್ಲಿನಿಕಲ್ ಪರೀಕ್ಷೆಗೆ ಒಳಪಟ್ಟಿವೆ. ಈ ಲಸಿಕೆಗಳು ದೇಹದ ರೋಗನಿರೋಧಕ ರಕ್ಷಣೆಯನ್ನು ಬಲಪಡಿಸಲು ಮತ್ತು ಸೋಂಕಿನ ಅಪಾಯಗಳನ್ನು ತಗ್ಗಿಸಲು ಕೆಲಸ ಮಾಡುತ್ತದೆ. ಜೊತೆಗೆ ದೀರ್ಘಕಾಲೀನ ರಕ್ಷಣೆಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ವಿವಿಧ ದೇಶಗಳು ವಿವಿಧ ಲಸಿಕೆಗಳನ್ನು ಅಭಿವೃದ್ಧಿ ಪಡಿಸಿದ್ದು, ಪ್ರತಿಯೊಂದು ಲಸಿಕೆಯು ತನ್ನದೇ ಆದ ಪರಿಣಾಮಕಾರತ್ವವನ್ನು ಸಾಬೀತು ಪಡಿಸಿವೆ. ಸದ್ಯ ಎಲ್ಲಾ ಕೊರೊನಾವೈರಸ್ ರೂಪಾಂತರಗಳ ವಿರುದ್ಧ ಕಾರ್ಯನಿರ್ವಹಿಸುವ ಆಲ್ ರೌಂಡರ್ ಲಸಿಕೆಯನ್ನು ಹೊರತರುವ ಯೋಜನೆಗಳನ್ನು ಮಹತ್ವಾಕಾಂಕ್ಷೆಯಿಂದ ಮಾಡಲಾಗುತ್ತಿದ್ದು, ಪ್ರಸ್ತುತ ಇರುವ ಲಸಿಕೆಗಳು ಸಾಕಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ಮರೆಯಬಾರದು.

                 ಲಸಿಕೆ ಪಡೆದ ದೀರ್ಘಕಾಲದ ನಂತರ ಅಡ್ಡಪರಿಣಾಮಗಳು ಬರುವುದೇ?: ಗಿಲ್ಲನ್-ಬಾರ್ರೆ ಸಿಂಡ್ರೋಮ್, ರಕ್ತ ಹೆಪ್ಪುಗಟ್ಟುವಿಕೆ, ಮಯೋಕಾರ್ಡಿಟಿಸ್ ಅಥವಾ ಅನಾಫಿಲ್ಯಾಕ್ಸಿಸ್ ಮೊದಲಾದ ಅಡ್ಡಪರಿಣಾಮಗಳು ಕೊರೊನಾ ಲಸಿಕೆಯೊಂದಿಗೆ ಸೇರಿಕೊಂಡಿವೆ. ಆದರೆ ಈ ಎಲ್ಲವೂ ಲಸಿಕೆ ಪಡೆದ ವಾರಗಳ ನಂತರ ಕಂಡುಬರಬಹುದು. ಆದರೆ ಲಸಿಕೆ ಪಡೆದ ತಿಂಗಳಗಟ್ಟಲೇ ನಂತರ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಹಾಗೆಯೇ ಈ ಅಡ್ಡಪರಿಣಾಮಗಳು ತುಂಬಾ ಸಮಯದವರೆಗೆ ಇರುವುದಿಲ್ಲ. ಹೆಚ್ಚೆಂದರೆ ಸುಮಾರು ಒಂದು ತಿಂಗಳ ನಂತರ ಈ ಅಡ್ಡಪರಿಣಾಮಗಳ ತೀವ್ರತೆ ಕಡಿಮೆಯಾಗುತ್ತಾ ಬರುತ್ತವೆ. ಅದಕ್ಕಿಂತ ಹೆಚ್ಚು ಕಾಲ, ದೀರ್ಘಾವಧಿಯವರೆಗೆ ಅಡ್ಡಪರಿಣಾಮಗಳು ಇರುವುದಿಲ್ಲ. ಆದ್ದರಿಂದ, ಸಮಯಕ್ಕೆ ರೋಗನಿರ್ಣಯ ಮಾಡಿದರೆ ಅಡ್ಡಪರಿಣಾಮಗಳನ್ನು ನಿರ್ವಹಿಸುವುದು ಮಾತ್ರವಲ್ಲ, ನಮ್ಮ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆಗುವ ಹಾನಿ ತಡೆಯಬಹುದು.


                ಲಸಿಕೆಗಳು ಔಷಧಿಗಳಿಗಿಂತ ಬಳಸಲು ಸುರಕ್ಷಿತ: ಕೆಲವರ ವಾದವೆಂದರೆ, ಇಂಜೆಕ್ಷನ್ ಆನುವಂಶಿಕ ಡಿಎನ್‌ಎಯನ್ನು ತಿರುಚುತ್ತದೆ ಅಥವಾ ನಮ್ಮ ಮೇಲೆ ಪರಿಣಾಮ ಬೀರುವ ಗಮನಾರ್ಹ ಬದಲಾವಣೆಗಳಿಗೆ ಕಾರಣವಾಗುವುದರಿಂದ ಕೊರೊನಾ ಲಸಿಕೆಗಳು ದೀರ್ಘಾವಧಿಯಲ್ಲಿ ಬಳಕೆಗೆ ಅಸುರಕ್ಷಿತವಾಗಬಹುದು ಎಂದು. ಆದರೆ ಈ ಲಸಿಕೆ, ಔಷಧಿಗಳಿಗಿಂತ ಸುರಕ್ಷಿತವಾಗಿದೆ. ಏಕೆಂದರೆ ಲಸಿಕೆಗಳನ್ನು ಒಮ್ಮೆ ಚುಚ್ಚಲಾಗುತ್ತದೆ. ಅದೇ ಔ‍ಷಧಿಗಳನ್ನು ನಿಯಮಿತವಾಗಿ ತೆಗೆದುಕೊಳ್ಳಲೇಬೇಕು. ಆಗ ಅಡ್ಡಪರಿಣಾಮಗಳು ದೀರ್ಘಾವಧಿವರೆಗೆ ಬರಬಹುದು. ಲಸಿಕೆ ಒಮ್ಮೆ ಪಡೆದ ಮೇಲೆ ಒಂದು ಬಾರಿಯಷ್ಟೇ ಅಡ್ಡಪರಿಣಾಮ ಉದ್ಭವಿಸಿ, ಸಮಯ ಹೋದಂತೆ ಕಡಿಮೆಯಾಗುವುದು. ಹೀಗಾಗಿ, ದೀರ್ಘಕಾಲೀನ ಅಡ್ಡಪರಿಣಾಮಗಳ ಅಪಾಯವು ಬರುವ ಸಾಧ್ಯತೆಯಿಲ್ಲ.
                ಕೊರೊನಾ ಸೋಂಕಿನ ದೀರ್ಘಕಾಲಿನ ಅಡ್ಡಪರಿಣಾಮಗಳು ಹೆಚ್ಚು ಪರಿಣಾಮಕಾರಿ: ಕೊರೊನಾ ಲಸಿಕೆಯ ದೀರ್ಘಕಾಲಿನ ಅಡ್ಡಪರಿಣಾಮಗಳ ಬಗ್ಗೆ ಹೆಚ್ಚು ಪ್ರಕರಣಗಳು ವರಿದಯಾಗಿಲ್ಲ. ಆದರೆ ಕೊರೊನಾ ಸೋಂಕಿನ ದೀರ್ಘಕಾಲದ ಅಡ್ಡಪರಿಣಾಮಗಳನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಇವು ಹೆಚ್ಚು ಪರಿಣಾಮಕಾರಿಯಾಗಿದ್ದು, ಮಾನಸಿಕ ಸಮಸ್ಯೆ, ಒತ್ತಡ, ಹೃದಯದ ಆರೋಗ್ಯ, ಜೀರ್ಣಕ್ರಿಯೆಯ ತೊಂದರೆಗಳು, ಆಯಾಸ ಮೊದಲಾದ ಅಡ್ಡಪರಿಣಾಮಗಳನ್ನು ಹೊಂದಿದೆ. ಈ ಎಲ್ಲಾ ತೊಂದರೆಗಳನ್ನು ಲಸಿಕೆ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ.
            ಕೊರೊನಾ ವಿರುದ್ಧ ವ್ಯಾಕ್ಸಿನೇಷನ್ ಕಾರ್ಯನಿರ್ವಹಿಸುತ್ತದೆ ಎಂಬುದಕ್ಕೆ ಪುರಾವೆಗಳು: ಯುಕೆ ಮತ್ತು ಯುಎಸ್ ನಂತಹ ದೇಶಗಳು ಡಿಸೆಂಬರ್ 2020 ರಲ್ಲಿ ಚುಚ್ಚುಮದ್ದು ನೀಡಲು ಪ್ರಾರಂಭಿಸಿದರೆ, ಭಾರತವು 2021 ರ ಜನವರಿಯಲ್ಲಿ ತನ್ನ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಪ್ರಾರಂಭಿಸಿತು. ನಾವು 6 ತಿಂಗಳ ಗಡಿ ದಾಟಿದ್ದೇವೆ. ಲಸಿಕೆಗಳು ಪರಿಣಾಮಕಾರಿ ಎಂದು ಸಾಬೀತುಪಡಿಸಲು ನಮಲ್ಲಿ ಸಾಕಷ್ಟು ಪುರಾವೆಗಳಿವೆ. ಇದರಿಂದ ಉಂಟಾಗುವ ಅಡ್ಡಪರಿಣಾಮಗಳು ಮತ್ತು ಪ್ರಯೋಜನಗಳ ಬಗ್ಗೆ ತುಲಾನಾತ್ಮಕವಾಗಿ ಸಂಶೋಧನೆ ನಡೆದಿದ್ದು, ಬಳಕೆಗೆ ಯೋಗ್ಯವಾಗಿವೆ. ಆದ್ದರಿಂದ ಭಯ ಮತ್ತು ಹಿಂಜರಿಕೆಯನ್ನು ದೂರವಿಟ್ಟು ಲಸಿಕೆ ಪಡೆದುಕೊಳ್ಳುವುದು ತುಂಬಾ ಮುಖ್ಯ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries