ಕುಂಬಳೆ: ಈದ್ ದಿನಾಚರಣೆಯಂದು ಮೊಗ್ರಾಲ್ ತಕ್ವಾ ಮಸೀದಿ ಆವರಣದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ಮೊಗ್ರಾಲ್ ಪೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳನ್ನು ತಕ್ವಾ ಯೂತ್ ಗ್ರೂಪ್ ಅಭಿನಂದಿಸಿತು.
ಮುರ್ಷಿದ್ ಅಧ್ಯಕ್ಷತೆ ವಹಿಸಿದ್ದರು. ಸಾಧಕ ವಿದ್ಯಾರ್ಥಿಗಳನ್ನು ತಖ್ವಾ ಮಸೀದಿ ಸಮಿತಿ ಅಧ್ಯಕ್ಷ ಅಬ್ದುಲ್ ರಹಮಾನ್, ಕಾರ್ಯದರ್ಶಿ ಮುಹಮ್ಮದ್ ಎಂ.ಎ, ಖಜಾಂಚಿ ಎಂ.ಕೆ.ಹಮ್ಜಾ, ಯುವ ಸಮುದಾಯ ಪ್ರತಿನಿಧಿಗಳಾದ ಎ.ಕೆ.ಲತೀಫ್ ಅರಮನ, ಅಬ್ದುಲ್ಲಾ ಮತ್ತು ಕೆ.ವಿ.ಅಶ್ರಫ್ ಪ್ರಶಸ್ತಿಪತ್ರ, ಫಲಕಗಳನ್ನು ನೀಡಿ ಅ|ಭಿನಂದಿಸಿದರು. ಮುನೀರ್ ಕೆ.ವಿ, ರಶೀದ್, ದಿಲ್ಖುಷ್, ಎ.ಕೆ.ನಸೀರ್, ಮುಬಶೀರ್, ಅಬ್ದುಲ್ ಖಾದಿರ್, ಅಫಾನ್, ಸಿನಾನ್ ಮತ್ತು ಶಿಹಾಬ್ ನೇತೃತ್ವ ವಹಿಸಿದ್ದರು. ಕೆ.ವಿ.ಅಶ್ರಫ್ ಸಭೆಯನ್ನು ಸ್ವಾಗತಿಸಿ, ವಂದಿಸಿದರು.





