ಕುಂಬಳೆ: ಅಫ್ಘಾನಿಸ್ತಾನದಲ್ಲಿ ಕರ್ತವ್ಯದಲ್ಲಿದ್ದು, ಉಗ್ರರಿಂದ ಕೊಲ್ಲಲ್ಪಟ್ಟ ಪತ್ರಿಕಾ ಛಾಯಾಗ್ರಾಹಕ ಡೇನಿಯಲ್ ಸಿದ್ದಿಕಿ ಅವರ ಹತ್ಯೆ ಖಂಡಿಸಿ ಕೇರಳ ಜರ್ನಲಿಸ್ಟ್ ಯೂನಿಯನ್(ಕೆಜೆಯು) ಕುಂಬಳೆ ವಲಯ ಸಮಿತಿ ಪ್ರತಿಭಟಿಸಿದೆ.
ಕೆಜೆಯು ಜಿಲ್ಲಾ ಸಮಿತಿಯ ಕರೆಯ ಮೇರೆಗೆ ಕುಂಬಳೆ ಪ್ರೆಸ್ ಪೋರಂ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್ ಉಳುವಾರ್ ಉದ್ಘಾಟಿಸಿದರು. ಪ್ರೆಸ್ ಫೆÇೀರಂ ಅಧ್ಯಕ್ಷ ಲತೀಫ್ ಉಪ್ಪಳ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪುರುಷೋತ್ತಮ ಭಟ್ ಮುಖ್ಯ ಭಾಷಣ ಮಾಡಿದರು. ರಫೀಕ್, ಧನರಾಜ್ ಐಲ, ಮತ್ತು ಅಶ್ರಫ್ ಉಪಸ್ಥಿತರಿದ್ದರು. ಅಬ್ದುಲ್ಲಾ ಕುಂಬಳೆ ಸ್ವಾಗತಿಸಿ, ಅಬ್ದುಲ್ ಲತೀಫ್ ಕುಂಬಳೆ ವಂದಿಸಿದರು.





