ತಿರುವನಂತಪುರ: ಕೇರಳದಲ್ಲಿ ಹೆಚ್ಚುತ್ತಿರುವ ಝಿಕಾ ವೈರಸ್ ಸೋಂಕನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಮತ್ತು ಸ್ಥಳೀಯಾಡಳಿತ ಇಲಾಖೆ ಒಟ್ಟಾಗಿ ಕೆಲಸ ಮಾಡಲಿವೆ. ಸ್ಥಳೀಯಾಡಳಿತ ಸಚಿವ ಎಂ.ವಿ. ಗೋವಿಂದನ್ ಮಾಸ್ಟರ್ ಮತ್ತು ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪ್ರಸ್ತುತ ರೋಗ ಹೆಚ್ಚುತ್ತಿರುವ ತಿರುವನಂತಪುರದಲ್ಲಿ ಮಾತ್ರವಲ್ಲದೆ ರಾಜ್ಯದ ಎಲ್ಲಾ ಭಾಗಗಳಲ್ಲಿಯೂ ಜಾಗರೂಕರಾಗಿರಿ ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಝಿಕಾ ವೈರಸ್‍ಗೆ ಜೊತೆಗೆ ಡೆಂಗ್ಯೂ ಜ್ವರ ವರದಿಯ ಹಿನ್ನೆಲೆಯಲ್ಲಿ ಎರಡು ಇಲಾಖೆಗಳ ಸಭೆ ಕರೆಯಲಾಗಿದೆ ಎಂದು ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ತಿರುವನಂತಪುರದÀಲ್ಲಿ ಈ ರೋಗ ವರದಿಯಾಗಿದ್ದರೂ, ಎಲ್ಲಾ ಜಿಲ್ಲೆಗಳು ಜಾಗರೂಕರಾಗಿರಬೇಕು. ಸೊಳ್ಳೆ ಮೂಲ ನಿರ್ಮೂಲನೆ ಚಟುವಟಿಕೆಗಳಿಗೆ ಮತ್ತು ಫಾಗಿಂಗ್‍ಗೆ ಒತ್ತು ನೀಡಬೇಕು. ಇದಕ್ಕಾಗಿ ಔಷಧಿಗಳನ್ನು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಆಸ್ಪತ್ರೆಗಳ ಮೂಲಕ ಲಭ್ಯವಾಗಲಿದೆ.
ರಾಜ್ಯದಲ್ಲಿ ಒಟ್ಟು 28 ಜನರಿಗೆ ಗುರುವಾರ ಸಂಜೆಯ ವರೆಗಿನ ವರದಿಯಂತೆ ಝಿಕಾ ವೈರಸ್ ಪತ್ತೆಯಾಗಿದೆ. ಪ್ರಸ್ತುತ 8 ಮಂದಿ ಗಂಭೀರ ಸ್ವರೂಪದಲ್ಲಿದ್ದಾರೆ. ಅವರಲ್ಲಿ 3 ಮಂದಿ ಗರ್ಭಿಣಿಯರು. ಎಲ್ಲರ ಆರೋಗ್ಯ ತೃಪ್ತಿಕರವಾಗಿದೆ. ಝಿಕಾ ವೈರಸ್ ಪರೀಕ್ಷೆಗಳನ್ನು ಹೆಚ್ಚಿಸಲಾಗುವುದು. ಸೂಕ್ಷ್ಮ ಯೋಜನೆಯನ್ನು ಸಿದ್ಧಪಡಿಸುವ ಮೂಲಕ ತಡೆಗಟ್ಟುವ ಚಟುವಟಿಕೆಗಳನ್ನು ತೀವ್ರಗೊಳಿಸಲಾಗುತ್ತದೆ.
ಝಿಕಾ ವೈರಸ್ ಮತ್ತು ಡೆಂಗ್ಯೂ ಈಡಿಸ್ ಸೊಳ್ಳೆಗಳಿಂದ ಹರಡುತ್ತದೆ, ಇದು ಸೊಳ್ಳೆ ನಿರ್ಮೂಲನೆ ಚಟುವಟಿಕೆಗಳಿಳ ಮೂಲಕ ನಿಯಂತ್ರಿಸಲು ಸಾಧ್ಯವಿದೆ. ಸಿಫಿಲಿಸ್ ವೈರಸ್ ಜೊತೆಗೆ, ಡೆಂಗ್ಯೂ ಜ್ವರದ ಅಪಾಯಕಾರಿ. ಆದ್ದರಿಂದ ಇದನ್ನು ಈಗ ಪರಿಣಾಮಕಾರಿಯಾಗಿ ತಡೆಗಟ್ಟುವುದು ತುರ್ತು ಅಗತ್ಯ. ಹಾಟ್‍ಸ್ಪಾಟ್‍ಗಳು ರೋಗ ಹರಡುವ ಅಪಾಯವಿರುವ ಸ್ಥಳೀಯ ಪ್ರದೇಶಗಳ ಬಗ್ಗೆ ಡಿಎಂಒಗಳು ಮಾಹಿತಿಯನ್ನು ಒದಗಿಸಬೇಕು. ಅದರಂತೆ ಸ್ಥಳೀಯಾಡಳಿತ ಸಂಸ್ಥೆಗಳು ತಮ್ಮ ಚಟುವಟಿಕೆಗಳನ್ನು ತೀವ್ರಗೊಳಿಸಬೇಕು. ಆರೋಗ್ಯ ಇಲಾಖೆ ಸ್ಥಳೀಯ ಸಂಸ್ಥೆಗಳಿಗೆ ಎಲ್ಲ ಸಹಕಾರ ನೀಡಲಿದೆ ಎಂದು ಸಚಿವೆ ವೀಣಾ ಜಾರ್ಜ್ ಹೇಳಿದರು.
ಸ್ಥಳೀಯಾಡಳಿತ ಇಲಾಖೆ ಈಗಾಗಲೇ ತನ್ನ ರಕ್ಷಣಾ ಚಟುವಟಿಕೆಗಳನ್ನು ಬಲಪಡಿಸುತ್ತಿದೆ ಎಂದು ಸಚಿವ ಗೋವಿಂದನ್ ಮಾಸ್ಟರ್ ಹೇಳಿದರು. ಹೊಸ ಸವಾಲನ್ನು ಎದುರಿಸಲು ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ವಿಶೇಷ ಕಾರ್ಯಪಡೆ ರಚಿಸಕಲಾಗುತ್ತಿದೆ. ಈ ನಿಟ್ಟಿನಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸೂಚನೆ ನೀಡಲಾಗುವುದು. ಸಿಕಾ ವೈರಸ್ ಪೀಡಿತ ಪ್ರದೇಶಗಳಲ್ಲಿ ಸೊಳ್ಳೆ ನಿರ್ನಾಮ ಮತ್ತು ಫಾಗಿಂಗ್‍ಗೆ ಒತ್ತು ನೀಡಲಾಗುತ್ತಿದೆ. ಇದಲ್ಲದೆ, ಪ್ರತಿ ಮನೆಯಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ. ವಾರ್ಡ್ ಮಟ್ಟದಿಂದ ಚಟುವಟಿಕೆಗಳನ್ನು ಸಂಘಟಿಸಲಾಗುವುದು. ಎರಡು ಇಲಾಖೆಗಳು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಝಿಕಾ ವೈರಸ್ ನ್ನು ನಿಭಾಯಿಸಬಹುದು ಎಂದರು. ಸಚಿವ ಗೋವಿಂದನ್ ಮಾಸ್ಟರ್ ಅವರು ಸ್ಥಳೀಯಾಡಳಿತ ಇಲಾಖೆಯ ಎಲ್ಲ ಬೆಂಬಲವನ್ನು ಆರೋಗ್ಯ ಇಲಾಖೆಗೆ ನೀಡಲಾಗುತ್ತಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಶಿಕ್ಷಣ ಇಲಾಖೆಯೊಂದಿಗೆ ಸಮಾಲೋಚಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಆನ್‍ಲೈನ್ ಅಧ್ಯಯನದ ಭಾಗವಾಗಿ ಜಾಗೃತಿ ಮನೆ-ಮನೆಗಳಿಗೆ ದಾಟಿಸುವುದು ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಕುಟುಂಬಶ್ರೀ ಮೂಲಕವೂ ಜಾಗೃತಿ ಮೂಡಿಸಲು ಸಭೆ ನಿರ್ಧರಿಸಿದೆ.





