HEALTH TIPS

ಇಂದೋರ್ ಪೊಲೀಸ್ ವೆಬ್‌ಸೈಟ್ ಹ್ಯಾಕ್, ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟ್

             ಇಂದೋರ್ಇಂದೋರ್ ಪೊಲೀಸ್ ವೆಬ್‌ಸೈಟ್ ಹ್ಯಾಕ್ ಮಾಡಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡಲಾಗಿದೆ. ಅಲ್ಲದೆ 'ಮುಕ್ತ ಕಾಶ್ಮೀರ' ಎಂಬ ಘೋಷಣೆಗಳೊಂದಿಗೆ ಪಾಕಿಸ್ತಾನವನ್ನು ಪ್ರಶಂಸಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


           ಮಧ್ಯಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಗಳ ವಿವರಗಳು, ಹುದ್ದೆಗಳು ಮತ್ತು ದೂರವಾಣಿ ಸಂಖ್ಯೆಗಳಿರುವ 'ನಮ್ಮನ್ನು ಸಂಪರ್ಕಿಸಿ' ವೆಬ್ ಸೈಟ್ ಮೇಲೆ ಹ್ಯಾಕರ್ಸ್ ದಾಳಿ ನಡೆಸಿದ್ದಾರೆ. ಇದರಲ್ಲಿ ಪೊಲೀಸ್ ಮಹಾನಿರ್ದೇಶಕರು, ಇಂದೋರ್ ಶ್ರೇಣಿಯ ಇನ್ಸ್‌ಪೆಕ್ಟರ್ ಜನರಲ್ ಮತ್ತು ಇತರ ಸಿಬ್ಬಂದಿ ಸೇರಿದ್ದಾರೆ ಎಂದು ಅವರು ಹೇಳಿದರು.

         'ಮುಹಮ್ಮದ್ ಬಿಲಾಲ್ ಟೀಮ್ ಪಿಸಿಇ' ವೆಬ್‌ಸೈಟ್‌ನಲ್ಲಿ ಈ ರೀತಿಯ ಸಂದೇಶ ಬರೆಯುವ ಮೂಲಕ ಅದನ್ನು ಹ್ಯಾಕ್ ಮಾಡಿರುವುದಾಗಿ ಹೇಳಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

        ಇಂದೋರ್ ಪೊಲೀಸ್ ವೆಬ್‌ಸೈಟ್ ಅನ್ನು ನಗರ ಅಪರಾಧ ವಿಭಾಗವು ನಿರ್ವಹಿಸುತ್ತದೆ. ತಾಂತ್ರಿಕ ತಜ್ಞರ ಸಹಾಯದೊಂದಿಗೆ ವೆಬ್‌ಸೈಟ್ ಅನ್ನು ಅದರ ಮೂಲ ಸ್ವರೂಪಕ್ಕೆ ಮರುಸ್ಥಾಪಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗುರುಪ್ರಸಾದ್ ಪರಾಶರ್ ತಿಳಿಸಿದ್ದಾರೆ.

      ಹ್ಯಾಕರ್ಸ್ ಬಗ್ಗೆ ಹೆಚ್ಚು ಮಾಹಿತಿ ಪಡೆಯಲು ನಾವು ಆಳವಾದ ತನಿಖೆ ನಡೆಸುತ್ತಿದ್ದೇವೆ. ಅದಕ್ಕೆ ತಕ್ಕಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಪರಾಶರ್ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries