HEALTH TIPS

ಕೋವಿಡ್‌ ನಿರ್ಬಂಧ ಸಡಿಲಿಕೆ ಬೆನ್ನಲ್ಲೇ ಮಾಸ್ಕ್‌ ಬಳಕೆ ತೀವ್ರ ಕುಸಿತ!: ಆರೋಗ್ಯ ಸಚಿವಾಲಯ

            ನವದೆಹಲಿ: ಕೋವಿಡ್ ಸಂಬಂಧಿತ ನಿರ್ಬಂಧಗಳನ್ನು ಸಡಿಲಿಸಿದಾಗಿನಿಂದ ಭಾರತದಲ್ಲಿ ಮಾಸ್ಕ್‌ ಬಳಕೆಯು ಒಟ್ಟಾರೆಯಾಗಿ ತೀವ್ರ ಕುಸಿತ ಕಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ. ಲಾಕ್ ಡೌನ್ ನಂತರ ದೇಶದಲ್ಲಿ ಮಾಸ್ಕ್‌ ಬಳಕೆಯಲ್ಲಿ ಶೇ. 74 ರಷ್ಟು ಕುಸಿತವಿದೆ ಎಂದು ಹೇಳಿದೆ.

          "ನಾವು ಚಟುವಟಿಕೆಗಳನ್ನು ಪುನರಾರಂಭಿಸುವಾಗ ಮಾಸ್ಕ್‌ಗಳ ಬಳಕೆಯಲ್ಲಿನ ಕುಸಿತವನ್ನು ವಿಶ್ಲೇಷಣೆಯು ತೋರಿಸುತ್ತದೆ. ನಮ್ಮ ಜೀವನದಲ್ಲಿ ಮಾಸ್ಕ್‌ ಬಳಕೆಯನ್ನು ನಾವು ಜೀವನ ಅಭ್ಯಾಸವಾಗಿ ಅನುಸರಿಸಬೇಕಾಗಿದೆ," ಎಂದು ಜಂಟಿ ಕಾರ್ಯದರ್ಶಿ (ಆರೋಗ್ಯ) ಲವ್ ಅಗರ್ವಾಲ್ ನವದೆಹಲಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.

          "ಮಾಸ್ಕ್‌ ಬಳಕೆಯಲ್ಲಿ ಶೇಕಡ 74 ರಷ್ಟು ಕುಸಿತವನ್ನು ನಾವು ನೋಡುತ್ತಿದ್ದೇವೆ. ಕೋವಿಡ್ ಹರಡುವಿಕೆಯನ್ನು ತಡೆಯಬೇಕಾದರೆ, ನಾವು ಈ ಮಾಸ್ಕ್‌ ಧರಿಸದಿರುವ ಅಭ್ಯಾಸವನ್ನು ಬಿಟ್ಟು ಮಾಸ್ಕ್‌ ಧರಿಸುವುದನ್ನು ಜೀವನ ಕ್ರಮವನ್ನಾಗಿಸಬೇಕಿದೆ. ಮಾಸ್ಕ್‌ ಧರಿಸುವುದು ಕೋವಿಡ್‌ನ ಈ ಸಂದರ್ಭದಲ್ಲಿ ಬಹಳ ಮುಖ್ಯ," ಎಂದು ಹೇಳಿದ್ದಾರೆ.

            ಕೋವಿಡ್‌ ಸಡಿಲಿಕೆ ಸಂದರ್ಭದಲ್ಲಿ ಜಾಗರೂಕರಾಗಿರುವಂತೆ ಲವ್‌ ಅಗರ್ವಾಲ್‌ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಹಾಗೆಯೇ ಗೂಗಲ್‌ನ ಚಲನಶೀಲತೆ ಸೂಚ್ಯಂಕ ದತ್ತಾಂಶವು ಮೇ ಮತ್ತು ಜುಲೈ ನಡುವೆ ಸಾರ್ವಜನಿಕ ಚಲನಶೀಲತೆ ಹೆಚ್ಚಾಗಿದೆ ಎಂದು ತೋರಿಸುತ್ತದೆ ಎಂದು ಉಲ್ಲೇಖ ಮಾಡಿದ್ದಾರೆ.

"ಜನರ ಈ ಹೆಚ್ಚಳದ ಚಲನೆಯು ಈ ಪ್ರದೇಶಗಳಲ್ಲಿ ವೈರಲ್ ಸೋಂಕಿನ ಹರಡುವಿಕೆಯ ಮೇಲೆ ಪರಿಣಾಮ ಬೀರಬಹುದು. ನಾವು ಹೆಚ್ಚಿದ ಚಲನಶೀಲತೆಯತ್ತ ಸಾಗುತ್ತಿರುವಾಗ, ಮಾಸ್ಕ್‌ಗಳನ್ನು ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಮುಂತಾದ ಅಭ್ಯಾಸಗಳನ್ನು ಅನುಸರಿಸಬೇಕು," ಎಂದರು.

         ಎರಡನೇ ಕೋವಿಡ್‌ ಅಲೆಯಿದ್ದರೂ ಕೂಡಾ ಶೇಕಡಾ 50 ರಷ್ಟು ಭಾರತೀಯರು ಮಾಸ್ಕ್‌ ಧರಿಸಿಲ್ಲ ಎಂದು ಮೇ ತಿಂಗಳಲ್ಲಿ ಸಚಿವಾಲಯ ತಿಳಿಸಿತ್ತು. ಕೆಲವು ಜನರು ಮಾಸ್ಕ್‌ ಏಕೆ ಧರಿಸುವುದಿಲ್ಲ ಎಂದು ತಿಳಿಯಲು ನಡೆಸಿದ ಸಮೀಕ್ಷೆಯ ಆವಿಷ್ಕಾರಗಳನ್ನು ಜುಲೈನಲ್ಲಿ ಸಚಿವಾಲಯ ಹಂಚಿಕೊಂಡಿತ್ತು. ಮಾಸ್ಕ್‌ಗಳನ್ನು ಧರಿಸಿಲ್ಲದ ಜನರು ಸಾಮಾನ್ಯವಾಗಿ ಮೂರು ಕಾರಣಗಳನ್ನು ನೀಡಿದ್ದಾರೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ.

         ಜನರು ಉಸಿರಾಟದ ತೊಂದರೆ ಉಂಟಾಗುವ ಕಾರಣ, ಮಾಸ್ಕ್‌ ಅನುಕೂಲವಾಗಿರುವುದಿಲ್ಲ ಎಂಬ ಕಾರಣಕ್ಕೆ, ಸಾಮಾಜಿಕ ಅಂತರ ಕಾಯ್ದುಕೊಂಡಿರುವಾಗ ಮಾಸ್ಕ್‌ ಧರಿಸಬೇಕಾಗಿಲ್ಲ ಎಂಬ ಕಾರಣಕ್ಕೆ ಮಾಸ್ಕ್‌ ಧರಿಸಿಲ್ಲ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries