ತಿರುವನಂತಪುರ: ಕೇರಳ ಸರ್ಕಾರದ ಇಂಟರ್ನೆಟ್ ರೇಡಿಯೊ ' ರೇಡಿಯೊ ಕೇರಳ' ಮೂಲಕ ಎಲ್ ಪಿ-ಯುಪಿ ತರಗತಿಗಳ ಪಾಠಗಳನ್ನು ಆಧರಿಸಿ ವಿಶೇಷ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಕೋವಿಡ್ ವಿಶೇಷ ಸನ್ನಿವೇಶದಲ್ಲಿ ಆನ್‌ಲೈನ್‌ನಲ್ಲಿ ಕಲಿಕೆ ವ್ಯವಸ್ಥೆ ಮಾಡಿದಂತೆ,ಇದೀಗ ಆರಂಭದ ಹಂತದಲ್ಲಿ, ಮೊದಲಿಗೆ ರೇಡಿಯೊ ಕೇರಳವು ಐದು ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಅಧ್ಯಯನ ನೆರವಿಗೆ 'ಪಾಠಂ' ಎಂಬ ದೈನಂದಿನ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದೆ.
ಜುಲೈ 19 ರಿಂದ, ನೀವು www.radio.kerala.gov.in ಮೂಲಕ ಮತ್ತು ರೇಡಿಯೋ ಕೇರಳ ಆ್ಯಪ್ ಮೂಲಕ (ಗೂಗಲ್ ಪ್ಲೇನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು) ಕಾರ್ಯಕ್ರಮವನ್ನು ಕೇಳಬಹುದು. ಪಾಠದ ಸಮಯ ಮತ್ತು ಇತರ ಮಾಹಿತಿಯನ್ನು ರೇಡಿಯೋ ಮತ್ತು ಫೇಸ್‌ಬುಕ್‌ನಲ್ಲಿ (www.facebook.com/prdradiokerala) ನೀಡಲಾಗುತ್ತದೆ.
ಅಧ್ಯಯನ ಸಹಾಯ ಕಾರ್ಯಕ್ರಮ ಪ್ರಸಾರ ಸಮಯ: (ಸೋಮವಾರದಿಂದ ಶುಕ್ರವಾರದವರೆಗೆ).
ತರಗತಿ 5, 6 ಪ್ರಸಾರ ಸಮಯ 1:05 ಕ್ಕೆ ಮರು ಪ್ರಸಾರ ಸಂಜೆ 6 ಗಂಟೆಗೆ. ತರಗತಿ .7 ಪ್ರಸಾರ ಸಮಯ ಮಧ್ಯಾಹ್ನ 2:05 ಕ್ಕೆ ಮರು ಪ್ರಸಾರ ಸಂಜೆ 7 ಗಂಟೆ. ತರಗತಿ 8 ಪ್ರಸಾರ ಸಮಯ ಮಧ್ಯಾಹ್ನ 3:05 ಕ್ಕೆ ಮರು ಪ್ರಸಾರ ರಾತ್ರಿ 8 ಗಂಟೆ. ತರಗತಿ 9 ಪ್ರಸಾರ ಸಮಯ ಸಂಜೆ 4:05 ಕ್ಕೆ ಮರು ಪ್ರಸಾರ ರಾತ್ರಿ 9 ಗಂಟೆ. ತರಗತಿ 10 ಕ್ಕೆ ಪ್ರಸಾರ ಸಮಯ ಸಂಜೆ 5:05 ಮರು ಪ್ರಸಾರ ರಾತ್ರಿ10 ಆಗಿರುತ್ತದೆ.




