ತಿರುವನಂತಪುರ: ವರದಕ್ಷಿಣೆ ಕಾರಣ ಮಹಿಳೆಯರ ಜೀವನ ತುಳಿತಕ್ಕೊಳಗಾಗುತ್ತಿದೆ ಎಂದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ. ಕೇರಳzಲ್ಲಿರುವ ಈÀ ಸಮಸ್ಯೆಗೆ ಸಾಮಾಜಿಕ ಜಾಗೃತಿಯ ಕೊರತೆ ಕಾರಣವಾಗಿದೆ. ವರದಕ್ಷಿಣೆ ರಾಜ್ಯಕ್ಕೆ ಮಾಡಿದ ಅಪಮಾನ ಮತ್ತು ಅದಕ್ಕೆ ಸ್ಪಂದಿಸಲು ಹೊಸ ಪೀಳಿಗೆಗೆ ತರಬೇತಿ ನೀಡಬೇಕು ಎಂದು ರಾಜ್ಯಪಾಲರು ಹೇಳಿದರು. ರಾಜ್ಯದಲ್ಲಿ ಹೆಚ್ಚುತ್ತಿರುವ ವರದಕ್ಷಿಣೆ ಹಗರಣದ ವಿರುದ್ಧ ನಿನ್ನೆ ರಾಜ್ಯಪಾಲರು ಸ್ವತಃ ನಡೆಸಿದ ಉಪವಾಸ ಸತ್ಯಾಗ್ರಹದ ತರುವಾಯ ಅವರು ಈ ಘೋಷಣೆ ಮಾಡಿದ್ದಾರೆ.
ಇದು ಯಾವುದೇ ರಾಜಕೀಯ ಪಕ್ಷದ ವಿರುದ್ದವಲ್ಲ. ವರದಕ್ಷಿಣೆ ವಿರುದ್ಧ ಎಲ್ಲರೂ ಕೈ ಜೋಡಿಸಬೇಕು. ಕಾಲೇಜಿನಿಂದ ಪದವಿ ಪಡೆಯುವ ಸಮಯದಲ್ಲಿ ವರದಕ್ಷಿಣೆ ಪಡೆಯುವುದಿಲ್ಲ ಅಥವಾ ನೀಡುವುದಿಲ್ಲ ಎಂದು ಹೇಳುವ ಬಾಂಡ್‍ಗೆ ವಿದ್ಯಾರ್ಥಿಗಳು ಸಹಿ ಹಾಕಬೇಕೆಂದು ರಾಜ್ಯಪಾಲರು ಸೂಚಿಸಿದರು. ಅದನ್ನು ಉಲ್ಲಂಘಿಸಿರುವುದು ಕಂಡುಬಂದಲ್ಲಿ ಅವರ ಪದವಿಗಳನ್ನು ವಿಶ್ವವಿದ್ಯಾಲಯಗಳು ರದ್ದುಗೊಳಿಸಬೇಕು ಎಂದು ರಾಜ್ಯಪಾಲರು ಒತ್ತಾಯಿಸಿದರು.
ಸರ್ಕಾರದ ಪ್ರತಿನಿಧಿಗಳು ಕೂಡ ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಯುವ ಪೀಳಿಗೆ ಕೂಡ ವರದಕ್ಷಿಣೆ ವಿರುದ್ಧ ಪ್ರತಿಕ್ರಿಯಿಸಬೇಕು. ಹುಡುಗಿಯರು ವರದಕ್ಷಿಣೆ ನೀಡಿ ವಿವಾಹವಾಗುವುದಿಲ್ಲ ಎಂದು ಹೇಳಲು ಕಲಿಯಬೇಕು. ವರದಕ್ಷಿಣೆ ಕೋರಿದರೆ ಹುಡುಗಿಯರು ಮದುವೆಯಿಂದ ಹಿಂದೆ ಸರಿಯಬೇಕು ಎಂದು ರಾಜ್ಯಪಾಲರು ಹೇಳಿದರು.
ರಾಜ್ಯಪಾಲರು ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಿದಾಗ, ಉಮ್ಮನ್ ಚಾಂಡಿ, ಕುಮ್ಮನಂ ರಾಜಶೇಖರನ್ ಮತ್ತು ಕೇಂದ್ರ ಸಚಿವ ವಿ.ಮುರಳೀಧರನ್, ಬಿಜೆಪಿ ಮುಖಂಡ ಮತ್ತು ಮಾಜಿ ಶಾಸಕ ಒ ರಾಜಗೋಪಾಲ್, ಗಾಂಧೀಜಿಯವರ ಮೊಮ್ಮಗ ಮುರಲೀಧರ್ ತನ್ನನ್ನು ಸಂಪರ್ಕಿಸಿ ಬೆಂಬಲ ಘೋಷಿಸಿದ್ದಾರೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ. ರಾಜ್ಯದಲ್ಲಿ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗಳು ಹೆಚ್ಚುತ್ತಿರುವುದನ್ನು ವಿರೋಧಿಸಿ ರಾಜ್ಯಪಾಲರು ಉಪವಾಸ ಕೈಗೊಂಡಿದ್ದರು.


