HEALTH TIPS

ಮಳೆಗಾಲದಲ್ಲಿ ಎಣ್ಣೆಯುಕ್ತ ತ್ವಚೆಯ ಆರೈಕೆ ಹೀಗಿರಲಿ...

            ಬದಲಾಗುವ ಋತುಮಾನಕ್ಕೆ ತಕ್ಕಂತೆ ನಮ್ಮ ತ್ವಚೆ ರಕ್ಷಣೆಯ ದಿನಚರಿಯನ್ನು ಬದಲಾಯಿಸಿಕೊಳ್ಳುವುದು ತುಂಬಾ ಮುಖ್ಯ. ಇಲ್ಲವಾದಲ್ಲಿ ಹಲವಾರು ಸಮಸ್ಯೆಗಳು ಉದ್ಭವಿಸುತ್ತವೆ. ಅದರಲ್ಲೂ ಎಣ್ಣೆಯುಕ್ತ ತ್ವಚೆ ಹೊಂದಿರುವವರ ಸಮಸ್ಯೆ ಕೇಳಲಾಗುವುದಿಲ್ಲ. ಈಗಾಗಲೇ ಮಳೆಆಲ ಶುರುವಾಗಿದೆ, ಈ ಸಮಯದಲ್ಲಿ ಕಾಂತಿಯುತ ತ್ವಚೆ ಪಡೆಯುವುದು ಸವಾಲೇ ಸರಿ. ಏಕೆಂದರೆ ಮಳೆಗಾಲದಲ್ಲಿನ ಹೆಚ್ಚಿನ ತೇವಾಂಶವು ನಿರಂತರ ಚರ್ಮದ ಉರಿಯೂತ ಮತ್ತು ಹೆಚ್ಚುವರಿ ತೈಲ ಸೃಷ್ಟಿಗೆ ಕಾರಣವಾಗುವುದು.



             ಈ ಲೇಖನದಲ್ಲಿ ಮಳೆಗಾಲದಲ್ಲಿ ಎಣ್ಣೆಯುಕ್ತ ತ್ವಚೆಯನ್ನು ಹೇಗೆ ರಕ್ಷಣೆ ಮಾಡುವುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

               1) ಎಕ್ಸ್‌ಫೋಲಿಯೆಟ್ ಕಡ್ಡಾಯ: ಚರ್ಮದ ರಂಧ್ರಗಳನ್ನು ತೆರೆಯಲು ಮತ್ತು ಡೆಡ್ ಸೆಲ್ ಗಳನ್ನು ತೆಗೆಯಲು ನಿಮ್ಮ ತ್ವಚೆಯನ್ನು ಎಫ್ಫೋಲಿಯೇಟ್ ಮಾಡಿ. ಇತರ ಚರ್ಮದ ಪ್ರಕಾರಗಳಿಗೆ ಹೋಲಿಸಿದರೆ ಎಣ್ಣೆಯುಕ್ತ ತ್ವಚೆಯು ಹೆಚ್ಚುವರಿ ಕೊಳಕು ಮತ್ತು ಮಾಲಿನ್ಯಗಳನ್ನು ಆಕರ್ಷಿಸುತ್ತದೆ. ಆದ್ದರಿಂದ ಸೌಮ್ಯವಾದ ಸ್ಕ್ರಬ್ ನಿಮ್ಮ ಚರ್ಮದಿಂದ ಎಲ್ಲಾ ಕೊಳೆಯನ್ನು ತೆಗೆದುಹಾಕಲು ಸಹಾಯ ಮಾಡುವುದು.
              2) ಕ್ಲೆನ್ಸಿಂಗ್ ತುಂಬಾ ಮುಖ್ಯ: ಸೌಮ್ಯ ಮತ್ತು ಪರಿಣಾಮಕಾರಿಯಾದ ಕ್ಲೆನ್ಸರ್ ಮೂಲಕ ನಿಮ್ಮ ತ್ವಚೆಯನ್ನು ಸ್ವಚ್ಛಗೊಳಿಸಲು ಮರೆಯಬೇಡಿ. ಆದರ ಜೊತೆಗೆ ನಿಮ್ಮ ಚರ್ಮದ ಪ್ರಕಾರಕ್ಕೆ ಸೂಕ್ತವಾಗಿರುವ ಉತ್ಪನ್ನವನ್ನು ಬಳಸಲು ಮರೆಯದಿರಿ. ಎಣ್ಣೆಯುಕ್ತ ಚರ್ಮ ಹೊಂದಿದವರು ಜೆಲ್ಲಿ ಅಥವಾ ಜೆಲ್- ಆಧಾರಿತ ಉತ್ಪನ್ನಗಳು ಬಳಸಬಹುದು. ಆದರೆ ಕೆನೆ ಆಧಾರಿತ ಉತ್ಪನ್ನಗಳು ನಿಮ್ಮ ತ್ವಚೆಯ ರಂಧ್ರಗಳನ್ನು ಮುಚ್ಚಿಹಾಕುವ ಕಾರಣ ಬಳಸುವುದನ್ನು ತಪ್ಪಿಸಿ.


                3) ಉತ್ತಮ ಟೋನರ್ ಬಳಸಿ: ನಿಮ್ಮ ತ್ವಚೆಗೆ ಆಲ್ಕೋಹಾಲ್ ಮುಕ್ತ ಟೋನರ್ ಬಳಸಿ. ಅದು ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಉತ್ತಮವಾಗಿ ಹೊಂದಿರುತ್ತದೆ. ಚರ್ಮದ ಮೇಲಿನ ಯಾವುದೇ ಹೆಚ್ಚುವರಿ ಕೊಳಕು ಮತ್ತು ಬ್ಯಾಕ್ಟೀರಿಯಾವನ್ನು ಒಣಗಿಸದೆ ಬೇರ್ಪಡಿಸಲು ಮತ್ತು ಚರ್ಮವನ್ನು ಪ್ರಮುಖ ಪೋಷಕಾಂಶಗಳೊಂದಿಗೆ ಪುನಃ ಸ್ಥಾಪಿಸಲು ಇದು ಸಹಾಯ ಮಾಡುತ್ತದೆ.
                 4) ಆಯಿಲ್ ಫ್ರೀ ಲೋಷನ್ ಹಚ್ಚಿ: ಮಳೆಗಾಲದಲ್ಲಿ ನಿಮ್ಮ ತ್ವಚೆಯನ್ನು ಒಣಗಲು ಬಿಡಬೇಡಿ. ಆದ್ದರಿಂದ ಈ ಕಾಲದಲ್ಲಿ ತೈಲ ಮುಕ್ತ ಲೋಷನ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ನೀವು ಮನೆಯೊಳಗೆ ಇರಿ ಅಥವಾ ಹೊರಗೆ ಹೋಗಿ ನಿಮ್ಮ ಚರ್ಮವನ್ನು ಸೂರ್ಯನ ಬೆಳಕು ಮತ್ತು ಹಾನಿಕಾರಕ ಕಿರಣಗಳಿಂದ ರಕ್ಷಿಸಿಕೊಳ್ಳಲು ಎಸ್‌ಪಿಎಫ್ 50 ಅಥವಾ ಹೆಚ್ಚಿರುವ ಸನ್ ಸ್ಕ್ರೀನ್ ಬಳಸುವುದು ಉತ್ತಮ.
               5) ಸಾಕಷ್ಟು ನೀರು ಕುಡಿಯಿರಿ: ಈ ಋತುವಿನಲ್ಲಿ ಒಣ ಚರ್ಮವು ಸಾಮಾನ್ಯವಾಗಿರುವುದರಿಂದ ಮಾನ್ಸೂನ್ ಸಮಯದಲ್ಲಿ ನಿಮ್ಮ ದೇಹವನ್ನು ಹೈಡ್ರೀಕರಿಸುವುದು ಬಹಳ ಮುಖ್ಯ. ಹೀಗಾಗಿ, ನಿಮ್ಮ ಚರ್ಮವನ್ನು ಹೈಡ್ರೀಕರಿಸುವುದಕ್ಕಾಗಿ ಮತ್ತು ವಿಷವನ್ನು ಹೊರಹಾಕಲು ಬಹಳಷ್ಟು ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಹಣ್ಣುಗಳನ್ನು ಸೇವಿಸುವುದನ್ನು ಹೊರತುಪಡಿಸಿ ಕನಿಷ್ಠ 7-8 ಗ್ಲಾಸ್ಗಳನ್ನು ಕುಡಿಯಿರಿ. ಅವು ನಿಮ್ಮ ದೇಹವನ್ನು ರೋಗಗಳಿಗೆ ನಿರೋಧಕವಾಗಿರಿಸುವುದರ ಜೊತೆಗೆ ನಿಮಗೆ ಹೊಳಪನ್ನು ನೀಡುತ್ತದೆ.
            6) ಮಲಗುವ ಮುನ್ನ ಮೇಕಪ್ ತೆಗೆಯಿರಿ: ಮಲಗುವ ಮುನ್ನ ಮೇಕಪ್ ತೆಗೆದುಹಾಕುವುದು ಅತ್ಯಂತ ಅವಶ್ಯಕವಾಗಿದೆ ಏಕೆಂದರೆ ಇದು ರಾತ್ರಿಯ ಸಮಯದಲ್ಲಿ ಚರ್ಮಕ್ಕೆ ವ್ಯಾಪಕ ಹಾನಿಯನ್ನುಂಟು ಮಾಡುತ್ತದೆ. ನೀವು ವಿಶ್ರಾಂತಿ ಪಡೆಯುವಾಗ ಚರ್ಮವು ಪುನಃಸ್ಥಾಪನೆಯಾಗುತ್ತದೆ, ಆ ಸಮಯದಲ್ಲಿ ನೀವು ಸೌಂದರ್ಯವರ್ಧಕಗಳನ್ನು ಬಿಟ್ಟಾಗ, ಈ ಪ್ರಕ್ರಿಯೆಗೆ ಅಡ್ಡಿಯಾಗುವುದು. ಆಗ ಚರ್ಮವು ಉಸಿರಾಡುವುದನ್ನು ನಿಲ್ಲಿಸುವುದು. ಇದರಿಂದ ಆಯಾಸದ ಚಿಹ್ನೆಗಳು ಶೀಘ್ರದಲ್ಲೇ ಕಾಣಿಸಿಕೊಳ್ಳುತ್ತವೆ ಮತ್ತು ಮೊಡವೆಗಳಿಗೆ ಕಾರಣವಾಗಬಹುದು.


        

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries