ಕಾಸರಗೋಡು: ಕುಟುಂಬಶ್ರೀ ಜಿಲ್ಲಾ ಮಿಷನ್ ವತಿಯಿಂದ ಜರುಗುವ ಕೋವಿಡ್ ವಿಶೇಷ ಆಷಾಡ ಮಾಸ ಗಂಜಿ ಉತ್ಸವದ ಜಿಲ್ಲಾ ಮಟ್ಟದ ಸರಣಿ ಜು.19ರಂದು ಆರಂಭಗೊಳ್ಳಲಿದೆ.
ಕಾಸರಗೋಡು ಜಿಲ್ಲೆಯ ಎಲ್ಲ ಜನಕೀಯ(ಜನಪರ)ಹೋಟೆಲ್ ಗಳಲ್ಲಿ ಆ.16 ವರೆಗೆ ಸ್ಪೆಷ್ಯಲ್ ಆಷಾಢ ಮಾಸದ ಗಂಜಿ ಉತ್ಸವ ನಡೆಯಲಿದೆ. ಆಯುರ್ವೇದ ವಿಧಾನದ ಹಸುರೆಲೆ ಔಷಧಗಳನ್ನು ಸೇರಿಸಿ ಆಷಾಡ ಮಾಸದ ಗಂಜಿ ತಯಾರಿಸಲಾಗುತ್ತದೆ.
ವಿದ್ಯಾನಗರದ ಕುಟುಂಬಶ್ರೀ ಜಿಲ್ಲಾ ಪಂಚಾಯತ್ ಕ್ಯಾಂಟೀನ್ ನಲ್ಲಿ 19ರಂದು ಬೆಳಗ್ಗೆ 10 ಗಂಟೆಗೆ ಜರುಗುವ ಸಮಾರಂಭದಲ್ಲಿ ಸ್ಥಳೀಯಾಡಳಿತ ಮತ್ತು ಅಬಕಾರಿ ಸಚಿವ ಎಂ.ವಿ.ಗೋವಿಂದನ್ ಮಾಸ್ಟರ್ ಉತ್ಸವಕ್ಕೆ ಚಾಲನೆ ನೀಡುವರು.

