HEALTH TIPS

ಡೆಹ್ರಾಡೂನ್‌ನಲ್ಲಿ ಪಾಚಿ, ಶಿಲೀಂಧ್ರಗಳ 'ಗಾರ್ಡನ್‌' ಉದ್ಘಾಟನೆ

            ಡೆಹ್ರಾಡೂನ್: ಪಾಚಿ, ಜರೀಗಿಡ (ಕಲ್ಲುಹೂವುಗಳು) ಹಾಗೂ ಶಿಲೀಂಧ್ರಗಳು ಸೇರಿದಂತೆ ಏಕಕೋಶೀಯ ಸಸ್ಯಗಳಿರುವ ದೇಶದ ಮೊದಲ ಉದ್ಯಾನವನ್ನು (ಕ್ರಿಪ್ಟೋಗ್ಯಾಮಿಕ್‌ ಗಾರ್ಡನ್‌) ಡೆಹ್ರಾಡೂನ್‌ ಜಿಲ್ಲೆಯ ಚಕರಾತಾ ಪಟ್ಟಣದಲ್ಲಿ ಭಾನುವಾರ ಉದ್ಘಾಟಿಸಲಾಯಿತು.

         ಪಟ್ಟಣದ ದೇವವನದಲ್ಲಿ 50 ಪ್ರಭೇದಗಳಿಗೆ ಸೇರಿದ ಇಂಥ ಸಸ್ಯಗಳನ್ನು ಬೆಳೆಸಲಾಗಿದೆ. 9 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿರುವ ಈ ಉದ್ಯಾನವನ್ನು ಸಾಮಾಜಿಕ ಕಾರ್ಯಕರ್ತ ಅನೂಪ್‌ ನೌತಿಯಾಲ್ ಉದ್ಘಾಟಿಸಿದರು.

           'ಸಸ್ಯಶಾಸ್ತ್ರದ ಪ್ರಕಾರ, ಪಾಚಿ, ಶಿಲೀಂಧ್ರ, ಜರೀಗಿಡಗಳು 'ಕ್ರಿಪ್ಟೋಗ್ಯಾಮೆ' ಪ್ರಭೇದಕ್ಕೆ ಸೇರಿದವುಗಳಾಗಿವೆ. ಇವು ನಾಳ ರಹಿತ ಸಸ್ಯಗಳಾಗಿದ್ದು, ಇವುಗಳು ಹೂವು ಅಥವಾ ಬೀಜಗಳ ಮೂಲಕ ಸಂತಾನೋತ್ಪತ್ತಿ ನಡೆಸುವುದಿಲ್ಲ. ಈ ಸಸ್ಯಗಳು ಕಾಂಡ, ಎಲೆ ಮತ್ತು ಬೇರಿನಂತಹ ಏಕಕೋಶಿಯ ರಚನೆಯನ್ನು ಹೊಂದಿರುತ್ತವೆ' ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಂಶೋಧನೆ) ಸಂಜೀವ್‌ ಚತುರ್ವೇದಿ ವಿವರಿಸಿದರು.

          'ದೇವವನದಲ್ಲಿ ಮಾಲಿನ್ಯದ ಪ್ರಮಾಣ ಕಡಿಮೆ. ಇಲ್ಲಿನ ತೇವಾಂಶ ಸಹ ಇಂಥ ಸಸ್ಯಗಳನ್ನು ಬೆಳೆಯಲು ಸೂಕ್ತವಾದುದು. ಹೀಗಾಗಿ ಈ ಉದ್ಯಾನದ ಮೂರು ಎಕರೆ ಪ್ರದೇಶದಲ್ಲಿ ಈ ಸಸ್ಯಗಳನ್ನು ಬೆಳೆಸಲಾಗಿದೆ' ಎಂದು ಹೇಳಿದರು.

          'ದೇವವನ ಪ್ರದೇಶದಲ್ಲಿ ದೇವದಾರು ಹಾಗೂ ಓಕ್‌ ಮರಗಳೇ ಹೆಚ್ಚಾಗಿರುವ ಅರಣ್ಯಗಳಿವೆ. ಇಂಥ ಪ್ರದೇಶಗಳು ಪಾಚಿ, ಶಿಲೀಂಧ್ರಗಳಿಗೆ ನೈಸರ್ಗಿಕ ಆಶ್ರಯ ತಾಣಗಳಾಗುತ್ತವೆ' ಎಂದೂ ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries