HEALTH TIPS

ಅಂಗಡಿಗಳನ್ನು ತೆರೆಯುವ ಬೇಡಿಕೆ: ವ್ಯಾಪಾರಿಗಳು ಬೇರೆ ಹಾದಿಯಲ್ಲಿ ಗಮಿಸಿದರೆ ಎದುರಾಗುವುದು ಸಂಕಷ್ಟಗಳ ಹೊಳೆ: ಪಿಣರಾಯಿ ವಿಜಯನ್

                                          

                 ನವದೆಹಲಿ: ವ್ಯಾಪಾರಿಗಳು ಅಂಗಡಿಗಳನ್ನು ಒತ್ತಾಯಪೂರ್ವಕ ತೆರೆಯಲು ಉತ್ಸುಕರಾದರೆ, ಅನುಭವಿಸುವ ಫಲ ಕಳವಳಕಾರಿಯಾಗಿರುತ್ತದೆ ಎಂಬದನ್ನು ಗಮನದಲ್ಲಿಡಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

                 ಸರ್ಕಾರ ಘೋಷಿಸಿದ ರಿಯಾಯಿತಿಗಾಗಿ ತಾವು ಕಾಯುವುದಿಲ್ಲ ಮತ್ತು ಗುರುವಾರವೂ ಸೇರಿದಂತೆ ತಮ್ಮ ಅಂಗಡಿಗಳನ್ನು ತೆರೆಯುತ್ತೇವೆ ಎಂಬ ವ್ಯಾಪಾರಿಗಳ ನಿಲುವಿಗೆ ಪಿಣರಾಯಿ ಪ್ರತಿಕ್ರಿಯಿಸುತ್ತಿದ್ದರು.

            ಅಂಗಡಿಗಳನ್ನು ತೆರೆಯಬೇಕೆಂದು ಎಲ್ಲರೂ ಬಯಸುತ್ತಾರೆ. ಅಂಗಡಿಗಳನ್ನು ಪ್ರತಿದಿನ ತೆರೆಯಲು ಅನುಮತಿಸುವುದಿಲ್ಲ. ಅವರ ಭಾವನೆಗಳನ್ನು ಅರ್ಥೈಸಿಕೊಳ್ಳುತ್ತೇನೆ. ಅದರ ನಿಲುವಿನೊಂದಿಗೆ ಕೈಜೋಡಿಸುವುದು  ಕಷ್ಟವೇನಲ್ಲ. ಆದರೆ ನೀವು ಬೇರೆ ಹಾದಿಯಲ್ಲಿ ಗಮಿಸಿದರೆ, ಫಲ ವಿಪರೀತ ಪರಿಣಾಮಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ಗ್ರಹಿಸಬೇಕು. ಅದರೊಂದಿಗೆ ಸಂಕಷ್ಟಗಳ ಮಹಾ ಹೊಳೆ ನಮ್ಮಿದಿರು ಭಯಗೊಳಿಸುತ್ತಿದೆ. ಎಲ್ಲವನ್ನೂ ಎದುರಿಸಿದಂತೆ ಕೊರೊನಾ ಸೋಂಕು ಸುಲಭದ ಹಾದಿಯಲ್ಲ.  ಅರ್ಥಮಾಡಿಕೊಳ್ಳುವುದು ಉತ್ತಮ ಮತ್ತು ಇದು  ಆಟವಲ್ಲ ಎಂದು ಮಾರ್ಮಿಕವಾಗಿ ನುಡಿದರು. 

             ಪರಿಸ್ಥಿತಿಗೆ ಅನುಗುಣವಾಗಿ ಗರಿಷ್ಠ ರಿಯಾಯಿತಿಗಳನ್ನು ನೀಡಲಾಗುತ್ತದೆ. ಈ ನಿರ್ಬಂಧಗಳನ್ನು ಮಾನವ ಜೀವ ಉಳಿಸಲು ಉದ್ದೇಶಿಸಲಾಗಿದೆ ಎಂದು ಸಿಎಂ ಹೇಳಿದರು. ಇದೇ ವೇಳೆ, ಅಂಗಡಿಗಳನ್ನು ತೆರೆಯಲು ಅವಕಾಶ ನೀಡಬೇಕೆಂದು ಸಂಸದ ಎ.ಎಂ.ಆರಿಫ್ ಮುಖ್ಯಮಂತ್ರಿಗೆ ಪತ್ರ ಕಳುಹಿಸಿದ್ದರು. ಅಂಗಡಿಗಳನ್ನು ದೀರ್ಘಕಾಲದವರೆಗೆ ಮುಚ್ಚುವುದರಿಂದ ತೊಂದರೆಗಳನ್ನು ಎದುರಿಸುತ್ತಿರುವ ವ್ಯಾಪಾರಿಗಳಿಗೆ ಸಹಾಯ ನೀಡಿದಂತಾಗುತ್ತದೆ. ನಿಯಮಗಳಿಗೆ ಅನುಸಾರವಾಗಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಬೇಕು ಎಂದು ಸಂಸದರು ಒತ್ತಾಯಿಸಿದರು.

                  ಬಾರ್ ಮತ್ತು ಬಿವರೇಜ್  ಅಂಗಡಿಗಳನ್ನು ತೆರೆದರೂ ಅಂಗಡಿಗಳನ್ನು ತೆರೆಯಲು ಅನುಮತಿಸದಿರುವ ಬಗ್ಗೆ ವ್ಯಾಪಾರಿಗಳಲ್ಲಿ ವ್ಯಾಪಕ ಪ್ರತಿಭಟನೆಗಳು ಹೆಚ್ಚುತ್ತಿವೆ. ಇತ್ತೀಚಿನ ದಿನಗಳಲ್ಲಿ ಕೋಝಿಕೋಡ್ ಮತ್ತು ಇತರ ಸ್ಥಳಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಅಂಗಡಿಗಳನ್ನು ಸಾಮಾನ್ಯವಾಗಿ ತೆರೆಯಲು ಅನುಮತಿಸುವ ಮೂಲಕ ಸರ್ಕಾರವು ದಟ್ಟಣೆಯನ್ನು ಕಡಿಮೆ ಮಾಡಬೇಕು ಎಂಬ ಅಭಿಪ್ರಾಯವನ್ನು ಆರೋಗ್ಯ ತಜ್ಞರು ಹಂಚಿಕೊಂಡಿದ್ದರು. ಏತನ್ಮಧ್ಯೆ, ಮುಖ್ಯಮಂತ್ರಿಯ ಹೇಳಿಕೆ ಮಹತ್ವಪಡೆದಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries