HEALTH TIPS

ನೋರೋವೈರಸ್‌ ಎಂದರೇನು? ಇದರ ಲಕ್ಷಣಗಳೇನು, ತಡೆಗಟ್ಟುವುದು ಹೇಗೆ?

                ಇಂಗ್ಲೆಂಡ್‌ನಲ್ಲಿ ನೋರೋವೈರಸ್‌ ಕಂಡು ಬಂದಿದ್ದು, ಇದರ ಬಗ್ಗೆ ಎಚ್ಚರವಹಿಸುವಂತೆ ಪಬ್ಲಿಕ್ ಹೆಲ್ತ್‌ ಇಂಗ್ಲೆಂಡ್‌ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದೆ. ಕಳೆದ 4-5 ವಾರಗಳಿಂದ ಈ ವೈರಸ್‌ ಹೆಚ್ಚಾಗಿ ಕಂಡು ಬಂದಿದ್ದು, ಬೇಸಿಗೆಯಲ್ಲಿ ಈ ವೈರಸ್‌ ಹೆಚ್ಚಾಗಿ ಹರಡುವುದು ಎಂಬುವುದಾಗಿ PHE(Public Health England)ಹೇಳಿದೆ.

            ಪ್ರೀಸ್ಕೂಲ್‌ ಹಾಗೂ ನರ್ಸರಿ ಮಕ್ಕಳ ಮೂಲಕ ಇದು ವೇಗವಾಗಿ ಹರಡುತ್ತಿದ್ದು ಅವರಿಂದಲೇ ಇತರ ವಯಸ್ಸಿನವರಿಗೂ ಹರಡುತ್ತಿದೆ. ಈ ನೋರೋವೈರಸ್‌ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮ ಅನುಸರಿಸುವಂತೆ PHE ತನ್ನ ನಾಗರಿಕರಿಗೆ ಸೂಚಿಸಿದೆ. ನೋರೋವೈರಸ್‌ ಎಂದರೇನು? ಇದು ಹೇಗೆ ಹರಡುತ್ತಿದೆ? ತಡೆಗಟ್ಟುವುದು ಹೇಗೆ?


                  ನೋರೋವೈರಸ್ ಎಂದರೇನು?

            ಇದು ತುಂಬಾ ಬೇಗನೆ ಹರಡುವ ಸೋಂಕು ಆಗಿದ್ದು ಇದು ತಾಗಿದರೆ ವಾಂತಿ-ಬೇಧಿ ಸಮಸ್ಯೆ ಕಂಡು ಬರುವುದು. ಇದು ಒಬ್ಬ ವ್ಯಕ್ತಿಗೆ ಬಂದರೆ ಕೆಲವೇ ದಿನಗಳಲ್ಲಿ ಆ ವ್ಯಕ್ತಿಯಿಂದ ಇತರ ಜನರಿಗೆ ಹರಡುವುದು. ಈ ಸೋಂಕು ತಗುಲಿ ವಾಂತಿ ಕಂಡು ಬಂದರೆ ಸ್ವಲ್ಪ ಅಪಾಯಕಾರಿ, ಕೂಡಲೇ ಚಿಕಿತ್ಸೆ ನೀಡಬೇಕಾಗುವುದು.

                    ಇದು ಹರಡುವುದು ಹೇಗೆ?

            ನೋರೋವೈರಸ್‌ ಪ್ರಮುಖವಾಗಿ ನೀರು ಮತ್ತು ಆಹಾರದ ಮೂಲಕ ಹರಡುತ್ತದೆ ಎಂದು ಸಿಡಿಸಿ ಹೇಳಿದೆ.
* ಸೋಂಕು ತಗುಲಿದ ವ್ಯಕ್ತಿ ಆಹಾರವನ್ನು ಬರಿಗೈಯಿಂದ ಮುಟ್ಟಿದಾಗ ಆ ಸೋಂಕು ಆಹಾರಕ್ಕೆ ಹರಡುವುದು, ಅವುಗಳನ್ನು ಬೇರೆಯವರು ತಿಂದಾಗ ಅವರಿಗೆ ಈ ಸೋಂಕು ಹರಡುವುದು.
* ಸೋಂಕಿತರು ವಾಂತಿ ಮಾಡಿದಾಗ ವೈರಸ್‌ನ ಚಿಕ್ಕ ಕಣ ಗಾಳಿಯಲ್ಲಿರುತ್ತದೆ, ನಂತರ ಅದು ಆಹಾರ ಅಥವಾ ನೀರಿನ ಮೇಲೆ ಕೂರುತ್ತದೆ.
* ಸೋಂಕಿತ ವ್ಯಕ್ತಿ ನೀರಿನಲ್ಲಿ ವಾಂತಿ ಮಾಡಿದಾಗ ಅಥವಾ ಮಲ ವಿಸರ್ಜಿಸಿದಾಗ ಆ ನೀರಿನಲ್ಲಿಯೂ ಇರುವುದು
* ನೀರಿಗೆ ಕ್ಲೋರಿನ್‌ ಹಾಕದೇ ಇದ್ದರೆ ಆ ನೀರಿನ ಮೂಲಕ ಕೂಡ ಹರಡುವುದು.

ನೋರೋವೈರಸ್ ಲಕ್ಷಣಗಳು

* ಬೇಧಿ
*ವಾಂತಿ
*ಹೊಟ್ಟೆ ನೋವು
ಇದರ ಜೊತೆಗೆ
*ಜ್ವರ
* ತಲೆನೋವು
*ಮೈಕೈ ನೋವು ಕಂಡು ಬರುವುದು.
ವೈರಸ್‌ ಸೋಂಕಿ 12-48 ಗಂಟೆಗಳ ಒಳಗಾಗಿ ರೋಗ ಲಕ್ಷಣಗಳು ಕಂಡು ಬರುವುದು, ಕೆಲವರು 1-3 ದಿನಗಲಲ್ಲಿ ಚೇತರಿಸಿದರೆ ಇನ್ನು ಕೆಲವರಿಗೆ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ನಿತ್ರಾಣವಿರುತ್ತದೆ.

ತಡೆಗಟ್ಟುವುದು ಹೇಗೆ

* ಆಹಾರ ಹಾಗೂ ನೀರಿನ ಸ್ವಚ್ಛತೆ ಕಡೆಗೆ ಗಮನ ಹರಿಸಬೇಕು
* ಬಿಸಿ -ಬಿಸಿಯಾದ ಆಹಾರ ಸೇವಿಸಿ
* ನಿಮಗೆ ಅನಾರೋಗ್ಯವಿದ್ದಾಗ ಬೇರೆಯವರಿಗೆ ಆಹಾರ ತಯಾರಿಸಬೇಡಿ ಅಥವಾ ಆರೈಕೆ ನಾಡಬೇಡಿ
* ನೆಲವನ್ನು ಡಿಸ್‌ಇನ್‌ಫೆಕ್ಟ್ ಬಳಸಿ ಸ್ವಚ್ಛವಾಗಿಡಿ
* ಬಟ್ಟೆಗಳು ಶುಭ್ರವಾಗಿರಲಿ.

ನೋರೋವೈರಸ್‌ಗೆ ಚಿಕಿತ್ಸೆ

* ಸಿಡಿಸಿ ಪ್ರಕಾರ ನೋರೋವೈರಸ್‌ಗೆ ಅಂತಲೇ ಪ್ರತ್ಯೇಕ ಚಿಕಿತ್ಸೆಯಿಲ್ಲ. ವಾಂತಿ-ಬೇಧಿಗೆ ನೀಡುವ ಚಿಕಿತ್ಸೆಯನ್ನೇ ನೀಡಲಾಗುವುದು.
* ಸೋಂಕಿತ ವ್ಯಕ್ತಿ ಸಾಕಷ್ಟು ನೀರು ಕುಡಿಯಬೇಕು ಇದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದನ್ನು ತಡೆಗಟ್ಟಬಹುದು.
* ತುಂಬಾ ನಿತ್ರಾಣದಲ್ಲಿರುವವರಿಗೆ ಗ್ಲೂಕೋಸ್ ಡ್ರಿಪ್ ನೀಡಲಾಗುವುದು.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries