ಕಾಸರಗೋಡು: ಜಿಲ್ಲೆಯ ಉಸ್ತುವಾರಿ ಹೊಂದಿರುವ ಬಂದರು ಮತ್ತು ಪುರಾತತ್ವ ಸಚಿವ ಅಹ್ಮದ್ ದೇವರ್ ಕೋವಿಲ್, ಜಿಲ್ಲೆಯ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಅವಲೋಕನ ನಡೆಸಿದ್ದು, ಸ್ಥಳೀಯಾಡಳಿತಗಳು ಬಲವಾದ ಕ್ರಮ ಕೈಗೊಳ್ಳಲು ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರ ಸಭೆಯನ್ನು ಶೀಘ್ರದಲ್ಲೇ ಕರೆಯಲಾಗುವುದು ಎಂದು ಹೇಳಿದರು.
ಆನ್‍ಲೈನ್ ಡಿಜಿಟಲ್ ಕಲಿಕೆಗಾಗಿ ಡಿಜಿಟಲ್ ಕಲಿಕೆಯ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಲು ಸಚಿವರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು. ಜುಲೈ 31 ರೊಳಗೆ ಎಲ್ಲಾ ವಿದ್ಯಾರ್ಥಿಗಳಿಗೆ ಡಿಜಿಟಲ್ ಕಲಿಕಾ ಸೌಲಭ್ಯವನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಸಚಿವರು ಹೇಳಿದರು. ಪಿಟಿಎ ಮತ್ತು ಸಂಘ ಸಂಸ್ಥೆಗಳ ಸಹಕಾರವನ್ನು ಪಡೆಯಲು ಸಚಿವರು ಸೂಚಿಸಿದರು.
ಡಿಜಿಟಲ್ ಕಲಿಕಾ ಸೌಲಭ್ಯವನ್ನು ಮೌಲ್ಯಮಾಪನ ಮಾಡಲು ಆನ್‍ಲೈನ್ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ಸಚಿವರು ವಹಿಸಿದ್ದರು.
ಸಹಕಾರಿ ಬ್ಯಾಂಕುಗಳ ಸಹಾಯದಿಂದ ಡಿಜಿಟಲ್ ಕಲಿಕಾ ಸಲಕರಣೆಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಹೇಳಿದರು. ಶಿಕ್ಷಣ ಸಬಲೀಕರಣ ನಿಧಿಯನ್ನು ಬಳಸಿಕೊಳ್ಳಬೇಕು. ಜಿಲ್ಲೆಯಲ್ಲಿ ಮೊಬೈಲ್ ನೆಟ್‍ವರ್ಕ್-ಸೇವಾ ಪೂರೈಕೆದಾರರ ಸಭೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ತಿಳಿಸಿದ್ದಾರೆ. ಬುಡಕಟ್ಟು ಪ್ರದೇಶಗಳಲ್ಲಿ ಡಿಜಿಟಲ್ ಸೇವೆಯನ್ನು ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ.
ಡಿಜಿಟಲ್ ಕಲಿಕಾ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ ಎಂದು ಡಿಡಿಇಕೆವಿ ಪುಷ್ಪಾ ಸಭೆಯಲ್ಲಿ ಹೇಳಿದರು.
-




