ಕಾಸರಗೋಡು: ಕರಾವಳಿ ಪ್ರದೇಶಗಳ ಅಭಿವೃದ್ಧಿ ನಡೆಸುವ ವೇಳೆ ಪರಂಪರಾಗತ ಮೀನುಗಾರರ ಅನುಭವಗಳನ್ನೂ ಪರಿಶೀಲಿಸಲಾಗುವುದು ಎಂದು ಸಚಿವ ಸಜಿ ಚೆರಿಯಾನ್ ಅವರು ತಿಳಿಸಿದರು.
ಜಿಲ್ಲಾ ಪ್ರವಾಸ ಅಂಗವಾಗಿ ಅಜಾನೂರು ಶ್ರೀ ಕುರುಂಬಾ ಭಗವತಿ ದೇವಾಲಯದ ಸಭಾಂಗಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಆರೋಗ್ಯ ವಲಯದ ನಂತರ ರಾಜ್ಯ ಸರ್ಕಾರ ಹೆಚ್ಚಿನ ಮೊತ್ತವನ್ನು ಕರಾವಳಿ ವಲಯಕ್ಕೆ ವೆಚ್ಚಮಾಡುತ್ತಿರುವುದಾಗಿ ತಿಳಿಸಿದರು. ಶಾಸಕ ಇ.ಚಂದ್ರ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ಸಿ.ಎಚ್.ಕುಂಞಂಬು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಅಜಾನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಶೋಭಾ, ಉಪಾಧ್ಯಕ್ಷ ಕೆ.ಸಬೀಷ್ ಮೊದಲಾದವರು ಉಪಸ್ಥಿತರಿದ್ದರು.




