ತಿರುವನಂತಪುರಂ: ಕೇರಳದಲ್ಲಿ ಇಂದು 17,106 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ಮಲಪ್ಪುರಂ 2558, ಕೋಝಿಕ್ಕೋಡ್ 2236, ತ್ರಿಶೂರ್ 2027, ಎರ್ನಾಕುಳಂ 1957, ಪಾಲಕ್ಕಾಡ್ 1624, ಕೊಲ್ಲಂ 1126, ಕೊಟ್ಟಾಯಂ 1040, ಕಣ್ಣೂರು 919, ಆಲಪ್ಪುಳ 870, ತಿರುವನಂತಪುರ 844, ವಯನಾಡ್ 648, ಪತ್ತನಂತಿಟ್ಟ 511, ಇಡುಕ್ಕಿ 460 ಮತ್ತು ಕಾಸರಗೋಡು 283 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 96,481 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಪರೀಕ್ಷಾ ಧನಾತ್ಮಕ ದರ ಶೇ.17.73 ಆಗಿದೆ. ವಾಡಿಕೆಯ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನಾಟ್, ಟ್ರೂನಾಟ್, ಪಿಒಸಿಟಿ, ಪಿಸಿಆರ್ ಆರ್ಟಿ ಲ್ಯಾಂಪ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಇಲ್ಲಿಯವರೆಗೆ ಒಟ್ಟು 3,01,70,011 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಒಟ್ಟು ಸಾವಿನ ಸಂಖ್ಯೆಯನ್ನು 19,428 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಬಾಧಿಸಿದವರಲ್ಲಿ 53 ಮಂದಿ ಹೊರ ರಾಜ್ಯದಿಂದ ಬಂದÀವರು. 16,136 ಮಂದಿ ಜನರುÀ ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 838 ಮಂದಿಯ ಸಂಪರ್ಕ ಮೂಲಗಳು ಸ್ಪಷ್ಟವಾಗಿಲ್ಲ. ಮಲಪ್ಪುರಂ 2491, ಕೋಝಿಕ್ಕೋಡ್ 2197, ತ್ರಿಶೂರ್ 2011, ಎರ್ನಾಕುಳಂ 1936, ಪಾಲಕ್ಕಾಡ್ 1031, ಕೊಲ್ಲಂ 1116, ಕೊಟ್ಟಾಯಂ 982, ಕಣ್ಣೂರು 891, ಆಲಪ್ಪುಳ 853, ತಿರುವನಂತಪುರ 770, ವಯನಾಡ್ 638, ಪತ್ತನಂತಿಟ್ಟ 488, ಇಡುಕ್ಕಿ 452 ಮತ್ತು ಕಾಸರಗೋಡು 280 ಎಂಬಂತೆ ಸಂಪರ್ಕದಿಂದ ಸೋಂಕಿಗೊಳಗಾಗಿದ್ದಾರೆ.
ಇಂದು 79 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ. ಕಣ್ಣೂರು 15, ಪಾಲಕ್ಕಾಡ್ 12, ವಯನಾಡ್ 10, ಕೊಲ್ಲಂ, ಪತ್ತನಂತಿಟ್ಟ 8, ಮಲಪ್ಪುರಂ, ತ್ರಿಶೂರ್ 7, ಕಾಸರಗೋಡು 4, ತಿರುವನಂತಪುರ, ಇಡುಕ್ಕಿ, ಕೋಝಿಕೋಡ್ ತಲಾ 2, ಕೊಟ್ಟಾಯಂ ಮತ್ತು ಎರ್ನಾಕುಳಂ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 20,846 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 902, ಕೊಲ್ಲಂ 1157, ಪತ್ತನಂತಿಟ್ಟ 485, ಅಲಪ್ಪುಳ 1471, ಕೊಟ್ಟಾಯಂ 1027, ಇಡುಕ್ಕಿ 621, ಎರ್ನಾಕುಳಂ 2327, ತ್ರಿಶೂರ್ 2433, ಪಾಲಕ್ಕಾಡ್ 2211, ಮಲಪ್ಪುರಂ 3577, ಕೋಝಿಕ್ಕೋಡ್ 2324, ವಯನಾಡ್ 709, ಕಣ್ಣೂರು 1099 ಮತ್ತು ಕಾಸರಗೋಡು 503 ಗುಣಮುಖರಾಗಿದ್ದಾರೆ. ಇದರೊಂದಿಗೆ, 1,78,462 ಮಂದಿ ಜನರಿಗೆ ರೋಗ ಪತ್ತೆಯಾಗಿದೆ ಮತ್ತು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 36,05,480 ಮಂದಿ ಜನರನ್ನು ಇಲ್ಲಿಯವರೆಗೆ ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 4,92,339 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಈ ಪೈಕಿ 4,65,079 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು 27,260 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 1901 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸ್ಥಳೀಯಾಡಳಿತ ಸಂಸ್ಥೆಗಳ ಸಾಪ್ತಾಹಿಕ ಸೋಂಕು ಜನಸಂಖ್ಯೆ ಅನುಪಾತ (WIPR) ಆಧಾರದ ಮೇಲೆ ವರ್ಗೀಕರಿಸಲಾಗಿದೆ. WIPR 74 ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ 414 ವಾರ್ಡ್‍ಗಳಲ್ಲಿ ಟಿಪಿಆರ್ 8ಕ್ಕಿಂತ ಹೆಚ್ಚಿದೆ. ಇಲ್ಲಿ ಕಠಿಣ ನಿಯಂತ್ರಣ ಇರುತ್ತದೆ.




