HEALTH TIPS

1921 ರ ಹಿಂದೂ ನರಮೇಧ; 'ತರ್ಪಣಂ' ಕೊಲೆಯಾದವರ ಮೋಕ್ಷಕ್ಕಾಗಿ ಅರ್ಪಣೆಯೊಂದಿಗೆ ಸಂಪನ್ನ

                             

             ಕೋಯಿಕ್ಕೋಡ್: 1921 ಮಲಬಾರ್ ಹಿಂದೂ ನರಮೇಧದಲ್ಲಿ ಕೊಲ್ಲಲ್ಪಟ್ಟವರ ಮೋಕ್ಷಪ್ರಾಪ್ತಿಗಾಗಿ ಕರ್ಕಟಕ ಅಮಾವಾಸ್ಯೆಯಾದ ನಿನ್ನೆಯ ದಿನ ಕೇರಳದಾತ್ಯಂತ ವಿಶೇಷ ತರ್ಪಣಗಳು ನಡೆದಿದ್ದು 'ತರ್ಪಣಂ'ನಲ್ಲಿ ವಿಶೇಷವಾಗಿ ನರಮೇಧಗಳಿಂದ ದಿಕ್ಕೆಟ್ಟ ಆತ್ಮಗಳ ಆತ್ಮಶಾಂತಿಗೆ ಅರ್ಪಿಸಲಾಗಿದೆ. ಕೋಯಿಕ್ಕೋಡಿನ ಕಡಲ ಕಿನಾರೆಯಲ್ಲಿ ನಡೆದ ತರ್ಪಣಂ ನಲ್ಲಿ ಈ ಆಶಯದ ಮೇಲೆ ಸೇವೆ ಸಂದಾಯಗೊಂಡಿತು. 1921 ರ ಮಲಬಾರ್ ದಂಗೆಯ  100 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹಿಂದೂಗಳು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.

                ನೂರಾರು ಬಡ ಜನರನ್ನು ವ್ಯರ್ಥವಾಗಿ ಹತ್ಯೆಗೈದು ವಂಶನಾಶಕ್ಕೆ ಕಾರಣವಾದ ಹುಸಿ ಹೋರಾಟಗಾರರ ಹೆಸರಲ್ಲಿ ಇಂದು ವೈಭವೀಕರಣ ನಡೆಯುತ್ತಿದ್ದು, ಇದರ ವಿರುದ್ದ ಜಾಗೃತಿ ಮತ್ತು ಅಂತವರಿಂದ ಸಮಾಜಕ್ಕೆ ಕೆಡುಕಾಗದಿರಲಿ ಎಂಬ ಕಲ್ಪನೆಯೊಂದಿಗೆ ರಕ್ಷಣೆಯ ಗೋಡೆಗಳಾಗಿ ಈ ಸಂಕಲ್ಪ ನಡೆಸಲಾಗಿದೆ. ಪೂರ್ವಜರು ತಮ್ಮ ಮನೆಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ಹಾಗೂ ಮಲಬಾರಿನಲ್ಲಿ ಕೊಲ್ಲಲ್ಪಟ್ಟವರ ಶಾಂತಿಗಾಗಿ ತರ್ಪಣ ನೀಡಬೇಕೆಂದು ಕರೆ ನೀಡಲಾಗಿತ್ತು.

     ಈ ಕರೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸ್ವೀಕರಿಸಿದ್ದು ವಿಶೇಷವಾಗಿತ್ತು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries