ತಿರುವನಂತಪುರಂ: ರಾಜ್ಯದಲ್ಲಿ 19,49,640 ಓಣಂ ಕಿಟ್‍ಗಳನ್ನು ವಿತರಿಸಲಾಗಿದೆ ಎಂದು ಆಹಾರ ಸಚಿವ ಜಿಆರ್ ಅನಿಲ್ ಹೇಳಿರುವರು. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ನೇತೃತ್ವದಲ್ಲಿ ಓಣಂ ಕಿಟ್ ವಿತರಣೆ ಭರದಿಂದ ಸಾಗಿದೆ ಎಂದು ಸಚಿವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಮಲಪ್ಪುರಂ ಜಿಲ್ಲೆಯಲ್ಲಿ ಹೆಚ್ಚಿನ ಕಿಟ್‍ಗಳನ್ನು ವಿತರಿಸಲಾಗಿದೆ ಎಂದು ಅವರು ಹೇಳಿದರು.
239812 ಕಿಟ್‍ಗಳನ್ನು ಗುರುವಾರ ತನಕ ಮಲಪ್ಪುರಂ ಜಿಲ್ಲೆಯಲ್ಲಿ ವಿತರಿಸಲಾಗಿದೆ. ತಿರುವನಂತಪುರ -220991, ತ್ರಿಶೂರ್ -194291, ಆಲಪ್ಪುಳ -137662, ಎರ್ನಾಕುಳಂ -159631, ಇಡುಕ್ಕಿ -93931, ಕಣ್ಣೂರು -98986, ಕಾಸರಗೋಡು -76501, ಕೊಲ್ಲಂ -130092, ಕೊಟ್ಟಾಯಂ -97460, ಕೋಳಿಕ್ಕೋಡ್ -16688, ಪಾಲಕ್ಕಾಡ್ -165358, ಪತ್ತನಂತಿಟ್ಟ -81692, ವಯನಾಡ್- 81692 ರಷ್ಟು ಕಿಟ್ ಗಳನ್ನು ವಿತರಿಸಲಾಗಿದ್ದು, ಓಣಂಗೆ ಮುಂಚಿತವಾಗಿ ಉಳಿದ ಕಿಟ್‍ಗಳ ವಿತರಣೆಯನ್ನು ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.
ಬುಡಕಟ್ಟು ಪ್ರದೇಶಗಳಲ್ಲಿರುವವರಿಗೆ ನೇರವಾಗಿ ಓಣಂ ಕಿಟ್‍ಗಳನ್ನು ತಲುಪಿಸಲಾಗುವುದು ಎಂದು ಸಚಿವ ಅನಿಲ್ ಹೇಳಿದರು. ಕಿಟ್ ನ್ನು ಆಗಸ್ಟ್ 15 ರಂದು ಬೆಳಿಗ್ಗೆ 11 ಗಂಟೆಗೆ ಪುತ್ಥಳಿ ಆದಿವಾಸಿ ಕಾಲೋನಿ, ವಿಠಾರ ಪಂಚಾಯತ್, ತಿರುವನಂತಪುರದÀಲ್ಲಿ ವಿತರಿಸಲಾಗುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಸಚಿವ ರಾಧಾಕೃಷ್ಣನ್ ಕೂಡ ಕಿಟ್ ವಿತರಣೆಯಲ್ಲಿ ಭಾಗವಹಿಸಲಿದ್ದಾರೆ. ಈ ತಿಂಗಳು ಅಕ್ಕಿ ಖರೀದಿಸದ ಆದಿವಾಸಿಗಳಿಗೂ ಇದನ್ನು ವಿತರಿಸಲಾಗುವುದು ಎಂದು ಸಚಿವರು ಹೇಳಿದರು.
ಸನ್ಯಾಸಿನಿಲಯಗಳು ಮತ್ತು ದೇವಸ್ಥಾನಗಳ ನಿವಾಸಿಗಳಿಗೆ ಓಣಕಿಟ್‍ಗಳನ್ನು ನೇರವಾಗಿ ವಿತರಿಸಲಾಗುವುದು. 12,000 ಅರ್ಹರಿಗೆ ಕಾರ್ಡ್ ವಿತರಿಸುವ ಪ್ರಕ್ರಿಯೆ ಆರಂಭವಾಗಿದೆ. ಎ.ಎ.ವೈ ವರ್ಗದ ಕಾರ್ಡ್‍ಗಳ ವಿತರಣೆ ಆಗಸ್ಟ್ 20 ರಂದು ಕೊನೆಗೊಳ್ಳುತ್ತದೆ. ಈ ವರ್ಗದಲ್ಲಿರುವವರು ಅರ್ಹ ಪಡಿತರವನ್ನು ಸೆಪ್ಟೆಂಬರ್ 1 ರಿಂದ ಪಡೆಯುತ್ತಾರೆ.
ಸಪ್ಲೈಕೋ ಉದ್ಯೋಗಿಗಳ ಬೋನಸ್, ಹಬ್ಬದ ಭತ್ತೆ ಮತ್ತು ಹಬ್ಬದ ಮುಂಗಡಗಳ ಕುರಿತು ವಿವಿಧ ಸಂಘಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದಲ್ಲದೇ, 750 ರೂಗಳ ಉಚಿತ ವೋಚರ್ ನ್ನು ಸಹ ಉದ್ಯೋಗಿಗಳಿಗೆ ನೀಡಲಾಗುವುದು ಎಂದು ಸಚಿವರು ಮಾಹಿತಿ ನೀಡಿರುವರು.





