HEALTH TIPS

ತ್ವರಿತ ನ್ಯಾಯಾಲಯಗಳ ಅನುದಾನವನ್ನು 2 ವರ್ಷಗಳಿಗೆ ವಿಸ್ತರಿಸಲು ಸಂಪುಟ ಅನುಮೋದನೆ

            ನವದೆಹಲಿದೇಶದಲ್ಲಿ ವಿವಿಧ ಪ್ರಕರಣಗಳ ವಿಚಾರಣೆಗಾಗಿ ಆರಂಭಗೊಂಡಿರುವ ವಿಶೇಷ ತ್ವರಿತ ನ್ಯಾಯಾಲಯಗಳಿಗಾಗಿ ಕೇಂದ್ರ ಪ್ರಾಯೋಜಿತ ಯೋಜನೆಯನ್ನು ಇನ್ನೂ ಎರಡು ವರ್ಷಗಳವರೆಗೆ ಮುಂದುವರಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

          ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿರುವ ಕೇಂದ್ರ ಸಚಿವ ಸಂಪುಟ 1023 ವಿಶೇಷ ತ್ವರಿತ ನ್ಯಾಯಾಲಯಗಳನ್ನು ಮುಂದುವರಿಸಲು ಅನುಮೋದನೆ ನೀಡಿದೆ. ಇವುಗಳಲ್ಲಿ 389 ಪೋಕ್ಸೋ ನ್ಯಾಯಾಲಯವಿದೆ. ಇವುಗಳಿಗೆ 2021ರ ಏ.1ರಿಂದ 2023ರ ಮಾ. 31ರರವರೆಗೆ ಕೇಂದ್ರ ಪ್ರಾಯೋಜಿತ ಯೋಜನೆಯಡಿ 1572.86 ಕೋಟಿ ರೂ. (ಕೇಂದ್ರದ ಪಾಲು ಶೇ. ರೂ .971.70 ಕೋಟಿ ಮತ್ತು ರಾಜ್ಯ ಪಾಲು 601.16 ಕೋಟಿ ರೂ) ನೆರವು ದೊರೆಯಲಿದೆ. ಇವುಗಳಿಗೆ ಅನುದಾನ ನಿರ್ಭಯಾ ನಿಧಿಯಿಂದ ದೊರೆಯಲಿದೆ ಎಂದರು.

           ಕೆಂದ್ರ ಸರ್ಕಾರ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಯಾವಾಗಲೂ ಹೆಚ್ಚಿನ ಮಹತ್ವ ನೀಡಿದೆ. ಹೆಣ್ಣು ಮಗುವಿನ ಸಬಲೀಕರಣದ ಕಡೆಗೆ, ಸರ್ಕಾರವು ಈಗಾಗಲೇ 'ಬೇಟಿಬಚಾವೋ ಬೇಟಿಪಡಾವೋ' ಮೊದಲಾದ ಹಲವಾರು ಕಾರ್ಯಕ್ರಮಗಳನ್ನು ಆರಂಭಿಸಿದೆ.

            ಹೆಚ್ಚು ಕಠಿಣವಾದ ನಿಬಂಧನೆಗಳನ್ನು ತರಲು ಮತ್ತು ಇಂತಹ ಪ್ರಕರಣಗಳ ತ್ವರಿತ ವಿಚಾರಣೆ ಮತ್ತು ವಿಲೇವಾರಿಗೆ ಕೇಂದ್ರ ಸರ್ಕಾರ ಕ್ರಿಮಿನಲ್ ಕಾನೂನು(ತಿದ್ದುಪಡಿ) ಕಾಯ್ದೆ, 2018 ಅನ್ನು ಜಾರಿಗೆ ತಂದಿದೆ ಮತ್ತು ಅತ್ಯಾಚಾರದ ಅಪರಾಧಿಗಳಿಗೆ ಮರಣದಂಡನೆ ಸೇರಿದಂತೆ ಕಠಿಣ ಶಿಕ್ಷೆಯನ್ನು ಒದಗಿಸಲು ನಿರ್ಧರಿಸಿತು. ಇದು ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ಕಾರಣವಾಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries