ಕಾಸರಗೋಡು: ಕೋವಿಡ್ ದ್ವಿತೀಯ ಅಲೆ ಆರಂಭಗೊಮಡ ನಂತರ ಕಾಸರಗೋಡು ಜಿಲ್ಲೆಯಲ್ಲಿ ಪುನರಾಂಭಿಸಿರುವ ರಾಜ್ಯ ಮಹಿಳಾ ಆಯೋಗ ಅದಾಲತ್ ನಲ್ಲಿ 43 ದೂರುಗಳನ್ನು ಪರಿಶೀಲಿಸಲಾಗಿದೆ. 13 ದೂರುಗಳಿಗೆ ಪರಿಹಾರ ಒದಗಿಸಲಾಗಿದೆ. ಮುದಿನ ಕ್ರಮಗಳಿಗಾಗಿ ವರದಿ ಆಗ್ರಹಿಸಲಾಗಿದ್ದು, ಒಂದು ದೂರನ್ನು ಪೆÇಲೀಸರಿಗೆ, ಒದು ದೂರನ್ನು ಜಿಲ್ಲಾ ಶಿಕ್ಷಣ ಉಪನಿರ್ದೆಶಕಿ ಅವರಿಗೆ ಹಸ್ತಾಂತರಿಸಲಾಗಿದೆ. ಉಳಿದ 28 ದೂರುಗಳನ್ನು ಮುಂದಿನ ಅದಾಲತ್ ನಲ್ಲಿ ಪರಿಶೀಲಿಸುವುದಾಗಿ ತಿಳಿಸಲಾಗಿದೆ.
ಮಂಜೇಶ್ವರದ ಶಾಲೆಯೊಮದರ ಆನ್ ಲೈನ್ ತರಗತಿ ಸಂಬಂಧ ಶಿಕ್ಷಕಿಯೊಬ್ಬರು ಮತ್ತೊಬ್ಬ ಶಿಕ್ಷಕಿ ಬಗ್ಗೆ ನೀಡಿದ್ದ ದೂರನ್ನು ಅದಾಲತ್ ನಲ್ಲಿ ಪರಿಶೀಲಿಸಲಾಯಿತು. ಈ ಘಟನೆಗೆ ಸಂಬಂಧಿಸಿ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅವರ ವರದಿ ಕೋರಲಾಗಿದೆ. ಮನೆಯಲ್ಲಿ ದೌರ್ಜನ್ಯ, ನೌಕರಿ ಕೇಂದ್ರಗಳಲ್ಲಿ ಸುರಕ್ಷತೆಯ ಕೊರತೆ, ನೆರೆಮನೆಯವರೊಂದಿಗಿನ ತಗಾದೆ ಇತ್ಯಾದಿ ದೂರುಗಳನ್ನು ಪರಿಶೀಲಿಸಲಾಗಿತ್ತು.
ಪರಿಹಾರ ಬಯಸಿ ಲಭಿಸುವ ಎಲ್ಲ ದೂರುಗಳಲ್ಲೂ ನೀತಿ ಲಭ್ಯತೆಗೆ ಯತ್ನಿಸಲಾಗುವುದು ಎಂದು ಆಯೋಗ ಸದಸ್ಯೆ ನ್ಯಾಯವಾದಿ ಷಾಹಿದಾ ಕಮಾಲ್ ತಿಳಿಸಿದರು. ಆಯೋಗದ ಪಾನೆಲ್ ನ್ಯಾಯವಾದಿಗಳಾದ ರೇಣುಕಾ ತಂಗಚ್ಚಿ, ಎ.ಪಿ.ಉಷಾ, ಫ್ಯಾಮಿಲಿ ಕೌನ್ಸಿಲರ್, ಪೆÇಲೀಸ್ ಇನ್ಸ್ ಪೆಕ್ಟರ್ ಸಿ.ಭಾನುಮತಿ, ಸಿವಿಲ್ ಪೆÇಲೀಸ್ ಆಫೀಸರ್ ಷೀಲಾ ಮೊದಲಾದವರು ಅದಾಲತ್ ಕ್ರಮಗಳನ್ನು ನಿಯಂತ್ರಿಸಿದರು.





