HEALTH TIPS

ಕೇರಳದಿಂದ ಕರ್ನಾಟಕಕ್ಕೆ ಪ್ರಯಾಣಿಸಲು ಋಣಾತ್ಮಕ ಪ್ರಮಾಣಪತ್ರ ಕಡ್ಡಾಯ; ನಿರ್ಬಂಧಗಳನ್ನು ಕಠಿಣಗೊಳಿಸಿದ ಕರ್ನಾಟಕ ಸರ್ಕಾರ

               ಬೆಂಗಳೂರು: ಕೇರಳದಲ್ಲಿ ಹೆಚ್ಚಳಗೊಳ್ಳುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಕರ್ನಾಟಕವು ಕೇರಳ ಹಾಗೂ ಮಹಾರಾಷ್ಟ್ರಗಳ ಗಡಿಗಲಲ್ಲಿ ನಿಯಂತ್ರಣವನ್ನು ಬಿಗಿಗೊಳಿಸಿದೆ.  ಕೇರಳ - ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಪ್ರವೇಶಿಸಲು 72 ಗಂಟೆಗಳ ಮೊದಲು ಪರಿಶೀಲನೆ ನಡೆಸಿದ ಆರ್‍ಟಿಪಿಸಿಆರ್ ನಕಾರಾತ್ಮಕ ಪ್ರಮಾಣಪತ್ರ ಕಡ್ಡಾಯವಾಗಿದೆ. ಈ ಹಿಂದೆ ಒಂದೇ ಡೋಸ್ ಲಸಿಕೆ ಪಡೆದವರನ್ನು ಸಹ ಪರಿಗಣಿಸಲಾಗಿತ್ತು. ಪರಿಷ್ಕøತ ನಿಯಮಗಳು ಇಂದು ಜಾರಿಗೆ ಬಂದಿವೆ.

               ಕರ್ನಾಟಕ ಸರ್ಕಾರವು ಕೋವಿಡ್ ಪರೀಕ್ಷೆಯ ಫಲಿತಾಂಶವಲ್ಲದೆ ಒಂದಾದರೂ ಡೋಸ್ ಲಸಿಕೆ ಹಾಕಿಸಿಕೊಂಡವರಿಗೆ ರಾಜ್ಯಕ್ಕೆ ಪ್ರವೇಶಿಸಲು ಅನುಮತಿ ನೀಡಲು ನಿರ್ಧರಿಸಿತ್ತು. ಆದಾಗ್ಯೂ, ಕೇರಳದಲ್ಲಿ ಸೋಂಕಿನ ಭಾರೀ ಹೆಚ್ಚಳದ ಕಾರಣ ನಿರ್ಬಂಧಗಳನ್ನು ಮತ್ತೆ ಕಠಿಣಗೊಳಿಸಿದೆ. 

             ಕೇರಳ ಹಾಗೂ ಮಹಾರಾಷ್ಟ್ರದ ವ್ಯಕ್ತಿಗಳು ಕರ್ನಾಟಕಕ್ಕೆ ಪ್ರವೇಶಿಸಲು  72 ಗಂಟೆಗಳ ಒಳಗೆ ನಡೆಸಿದ ಕೋವಿಡ್ ನಕಾರಾತ್ಮಕ ಪ್ರಮಾಣಪತ್ರವನ್ನು ಪಡೆಯುವುವುದು ಕಡ್ಡಾಯವಾಗಿದೆ. ಕಂಡಕ್ಟರ್‍ಗಳು ಬಸ್‍ನಲ್ಲಿ ಬರುವವರ ಪ್ರಮಾಣಪತ್ರವನ್ನು ಪರಿಶೀಲಿಸಬೇಕು. ಪ್ರಮಾಣಪತ್ರವು ರೈಲು, ವಿಮಾನ  ಪ್ರಯಾಣಿಕರಿಗೂ ಅನ್ವಯಿಸುತ್ತದೆ. ಕೇರಳ-ಮಹಾರಾಷ್ಟ್ರ ಗಡಿಯಲ್ಲಿ ಕಠಿಣ ತಪಾಸಣೆ ನಡೆಸಲಾಗುವುದು. ಪ್ರತಿದಿನ ಶಿಕ್ಷಣಕ್ಕಾಗಿ ಮತ್ತು ಕೆಲಸಕ್ಕಾಗಿ ಕರ್ನಾಟಕಕ್ಕೆ ಹೋಗುವವರಿಗೆ, 15 ದಿನಗಳಿಗೊಮ್ಮೆ ಕೋವಿಡ್ ಋಣಾತ್ಮಕ ಪ್ರಮಾಣಪತ್ರ ಬೇಕಾಗುತ್ತದೆ. 

           ತುರ್ತು ಆಸ್ಪತ್ರೆಯ ಅಗತ್ಯಗಳು, ಮರಣ ಮೊದಲಾದ ಅತ್ಯಗತ್ಯ ತೆರಳಬೇಕಾದವರ ಗಂಟಲ ದ್ರವ ಪರೀಕ್ಷೆಯನ್ನು ಗಡಿಯಲ್ಲಿ ಮಾಡಲಾಗುತ್ತದೆ. ಆರೋಗ್ಯ ಕಾರ್ಯಕರ್ತರಿಗೆ ಮತ್ತು ಎರಡು ವರ್ಷದೊಳಗಿನವರಿಗೆ ವಿನಾಯಿತಿ ಲಭ್ಯವಿದೆ.

          ಈ ಹಿನ್ನೆಲೆಯಲ್ಲಿ ಕೇರಳ ಕರ್ನಾಟಕ ಗಡಿ ಪ್ರದೇಶಗಳಾದ ತಲಪ್ಪಾಡಿ, ಅಡ್ಕಸ್ಥಳ, ಕೊಟ್ಯಾಡಿ, ಮುಗುಳಿ, ಬೆರಿಪದವು, ಆನೆಕಲ್ಲು ಮೊದಲಾದೆಡೆ ನಾಳೆಯಿಂದಷ್ಟೇ ಈ ನಿಯಂತ್ರಣ ಜಾರಿಗೆ ಬರಲಿದೆ. ಶನಿವಾರ ಮತ್ತು ಇಂದು ಕೇರಳದಲ್ಲಿ ವಾರಾಂತ್ಯ ಲಾಕ್ ಡೌನ್ ಇರುವುದರಿಂದ ಸ್ವಾಭಾವಿಕವಾಗಿ ಸಂಚಾರದಲ್ಲಿ ನಿಯಂತ್ರಣವಿದ್ದು, ನಾಳೆಯಿಂದ ಗಡಿಗಳಲ್ಲಿ ಮತ್ತೆ ನಿಯಂತ್ರಣಗಳು ಬಿಗಿಗೊಳ್ಳುವ ಸಾಧ್ಯತೆಗಳಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries