HEALTH TIPS

ವಿರೋಧ ಪಕ್ಷದ ಸಂಸದರಿಂದ ತೀವ್ರ ಗದ್ದಲ: ನಿದ್ರೆಯಿಲ್ಲದ ರಾತ್ರಿ ಕಳೆದೆ; ರಾಜ್ಯಸಭೆಯಲ್ಲಿ ಸಭಾಪತಿ ವೆಂಕಯ್ಯ ನಾಯ್ಡು ಭಾವುಕ!

           ನವದೆಹಲಿ: ಸದನದಲ್ಲಿ ವಿರೋಧ ಪಕ್ಷದ ಸಂಸದರು ಮಂಗಳವಾರ ನಡೆಸಿದ ಗದ್ದಲದ ಹಾಗೂ ಅಶಿಸ್ತಿನ ವರ್ತನೆ ವಿರುದ್ಧ ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಬುಧವಾರ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

         ಸದನದಲ್ಲಿ ವಿರೋಧ ಪಕ್ಷದ ಸಂಸದರಿಂದ ನಿನ್ನೆ ನಡೆದ ಗದ್ದಲದ ಬಗ್ಗೆ ಇಂದು ಮಾತನಾಡುತ್ತಾ ವೆಂಕಯ್ಯ ನಾಯ್ಡು ಅವರು ಭಾವುಕರಾದರು.

         ಕೆಲವು ಸದಸ್ಯರು ಮೇಜಿನ ಮೇಲೆ ಏರಿದಾಗ ಅಧಿಕಾರಿಗಳು ಮತ್ತು ಸದನದ ವರದಿಗಾರರು ಕುಳಿತಿದ್ದರು. ಮತ್ತೊಬ್ಬ ಸಂಸದರು ಅಧ್ಯಕ್ಷರ ಮೇಲೆ ಅಧಿಕೃತ ಕಡತವೊಂದನ್ನು ಎಸೆದಿದ್ದರು. ವರದಿಗಾರರು ಕುಳಿತುಕೊಳ್ಳುವ ಜಾಗವನ್ನು ದೇವಾಲಯದ ಗರ್ಭಗುಡಿ ಎಂದು ಪರಿಗಣಿಸಲಾಗುತ್ತದೆ. ಕೆಲವರ ಈ ವರ್ತನೆಯಿಂದ ಈ ಮನೆಯ ಎಲ್ಲಾ ಪಾವಿತ್ರ್ಯತೆಯು ನಾಶವಾಯಿತು. ವಿರೋಧ ಪಕ್ಷದ ಸಂಸದರ ಈ ವರ್ಥನೆ ಖಂಡಿಸಲು ನನ್ನ ಬಳಿ ಪದಗಳಿಲ್ಲ. ಕಳೆದ ದಿನ ನಿದ್ರೆಯಿಲ್ಲದ ರಾತ್ರಿ ಕಳೆದಿದ್ದೇನೆಂದು ಭಾವುಕರಾದರು.

               ಬಳಿಕ ಕೆಲ ಕಾಲ ಮೌನರಾದ ಸಭಾಪತಿಗಳು, ನಂತರ ಮಾತನಾಡಿ, ಈ ಬಾರಿಯ ಅಧಿವೇಶನವನ್ನು ಇಷ್ಟು ಕೆಳಮಟ್ಟಕ್ಕೆ ಇಳಿಸಲು ಕಾರಣ, ಪ್ರಚೋದನೆಯನ್ನು ಕಂಡುಹಿಡಿಯಲು ನಾನು ಹೆಣಗಾಡುತ್ತಿದ್ದೇನೆಂದು ಹೇಳಿದರು. ಪ್ರಜಾಪ್ರಭುತ್ವದ ದೇವಸ್ಥಾನದಲ್ಲಿ ಇಂತಹ ಕೃತ್ಯಗಳು ನಡೆದಿದ್ದು, ಸಭಾಪತಿಯಾಗಿ ಇದರ ಪರಿಣಾಮಗಳನ್ನು ಊಹಿಸಲು ನನಗೆ ಭಯವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

            ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಬಳಿ ಆಕ್ಷೇಪಣೆಗಳಿದ್ದರೆ ಆ ಬಗ್ಗೆ ಸದನದಲ್ಲಿ ಚರ್ಚೆ ನಡೆಸಬಹುದು. ಪ್ರತಿಭಟಿಸಬಹುದು ಅಥವಾ ಅದರ ವಿರುದ್ಧ ಮತ ಚಲಾಯಿಸಬಹುದು. ಆದರೆ, ಈ ಬಗ್ಗೆ ಅಂತಿಮವಾಗಿ ಸರ್ಕಾರನೇ ನಿರ್ಧಾರ ಕೈಗೊಳ್ಳಬೇಕು. ಇದನ್ನು ಮಾಡಿ, ಇನದ್ನು ಮಾಡಬೇಡಿ ಎಂದು ನೀವು ಸರ್ಕಾರವನ್ನು ಒತ್ತಾಯಿಸಲು ಸಾಧ್ಯವಿಲ್ಲ. ದಾಖಲೆಗಳೊಂದಿಗೆ ಚರ್ಚೆ ನಡೆಸಲು ಸದಸ್ಯರಿದೆ ನಿನ್ನೆ ಸುವರ್ಣಾವಕಾಶಗಳಿತ್ತು. ಆದರೆ, ಕಲಾಪ ಸುಗಮವಾಗಿ ನಡೆಯುವಂತೆ ಬಿಡದಿರುವುದೇ ಅವರ ಏಕೈಕ ಉದ್ದೇಶವಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

            ಪೆಗಾಸಸ್ ಬೇಹುಗಾರಿಕೆ ಮತ್ತು ಕೃಷಿ ಕಾಯ್ದೆಗಳ ಸಂಬಂಧ ಚರ್ಚೆಗೆ ಅವಕಾಶಕ್ಕೆ ಒತ್ತಾಯಿಸಿ ಕಾಂಗ್ರೆಸ್ ಸದಸ್ಯ ಪ್ರತಾಪ್ ಸಿಂಗ್ ಬಜ್ವಾ, ಸದನದ ಪ್ರಧಾನ ಕಾರ್ಯದರ್ಶಿಗಳ ಮೇಜು ಹತ್ತಿ ಕೋಲಾಹಲವೆಬ್ಬಿಸಿದ ಘಟನೆ ನಿನ್ನೆ ರಾಜ್ಯಸಭೆಯಲ್ಲಿ ನಡೆದಿತ್ತು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಗಿತ್ತು.

            ಬಜ್ವಾ ಕೃಷಿ ಮಸೂದೆ ಚರ್ಚೆಗೆ ಆಗ್ರಹಿಸಿ ಮೇಜು ಹತ್ತಿ ಕಾಗದಪತ್ರ ಎಸೆದರು. ಆಪ್ ಸದಸ್ಯ ಸಂಜಯ ಸಿಂಗ್ ಸೇರಿ ಕೆಲವರು ಮೇಜಿನ ಮೇಲೆ ಕುಳಿತಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries