HEALTH TIPS

ಸಮರಸ ಸಂವಾದ: ಚೌಕಾಶಿಯಿಲ್ಲ; ಚೌಕಿಯಿಂದ ರಂಗಕ್ಕೆ, ಸಮರ್ಥ ನಿರ್ದೇಶನಗಳೊಂದಿಗೆ: ಅತಿಥಿ: ಗುರು ಸಬ್ಬಣಕೋಡಿ ರಾಮ ಭಟ್


            ಕರಾವಳಿ ಕರ್ನಾಟಕದ ಹೆಮ್ಮೆಯ ಕಲಾ ಪ್ರಕಾರವಾದ ಯಕ್ಷಗಾನದ ತೆಂಕುತಿಟ್ಟು ವ್ಯಾಪ್ತಿಯಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಕೆಗೆ ರೆಪರ್ಟರಿ ರೀತಿಯಲ್ಲಿ ಅಥವಾ ಒಂದೆಡೆ ಕಲಾಶಾಲೆಯ ರೀತಿಯಲ್ಲಿ ಕಲಿಕೆಗೆ ವರ್ತಮಾನದಲ್ಲಿ ಅವಕಾಶಗಳ ಕೊರತೆ ಧಾರಾಳವಾಗಿದೆ. ನಾಡಿನ ಉದ್ದಗಲ ಅಲ್ಲಲ್ಲಿ ಹಲವು ಉತ್ಸಾಹಿ ಕಲಾವಿದರು ತರಗತಿಗಳನ್ನು ನಿಯಮಿತವಾಗಿ ನಡೆಸುತ್ತಿದ್ದರೂ ಅದೊಂದು ಸ್ವರೂಪದ ರೀತಿಯಲ್ಲಿ ಬೆಳೆದಿಲ್ಲ.
             ಆದರೆ ಅಂತಹದೊಂದು ಏಕೈಕ ಕೇಂದ್ರವಿದೆ ಎನ್ನುವುದಾದರೆ ಅದು ಕಾಸರಗೋಡು ಜಿಲ್ಲೆಯ ಎಣ್ಮಕಜೆ ಗ್ರಾಮ ಪಂಚಾಯತಿಯ ಪೆರ್ಲದಲ್ಲಿರುವ ಪಡ್ರೆಚಂದು ಸ್ಮಾರಕ ಯಕ್ಷಗಾನ ಕೇಂದ್ರ ಎಂಬುದು ಸಮಧಾನಕರ ಮತ್ತು ಕುತೂಹಲಕರ ವಿಚಾರ.
            ಹಲವು ಮೇಳಗಳಲ್ಲಿ ಕೆಲವಷ್ಟು ಕಾಲ ಕಲಾವಿದರಾಗಿ ರಂಗದಲ್ಲಿ ಮೆರೆದ ಶ್ರೀಸಬ್ಬಣಕೋಡಿ ರಾಮ ಭಟ್ ಅವರು ಏಕಲವ್ಯನಂತೆ ಛಲದಿಂದ, ಪರಶುರಾಮನ ಹಠದಂತೆ, ಶ್ರೀರಾಮಚಂದ್ರನ ಸತ್ಯನಿಷ್ಠೆಯಲ್ಲಿ, ಶ್ರೀಕೃಷ್ಣನ ಮುತ್ಸದ್ದಿತನದಂತೆ ಕಟ್ಟಿ ಬೆಳೆಸಿದ ಈ ಕೇಂದ್ರದ ಕಳೆದ ಒಂದೂವರೆ ದಶಕಗಳಿಂದ ತೆಂಕುತಿಟ್ಟಿನ ವಿಶ್ವ ವಿದ್ಯಾನಿಲಯವಾಗಿ ಗಣನೀಯ ಕೊಡುಗೆ ನೀಡುತ್ತಿದೆ. ಬಹುಷಃ ಯಾವುದೇ ರಾಜಾಶ್ರಯಗಳಿಲ್ಲದೆ, ದಾನಿಗಳ, ಕಲಾಪ್ರೇಮಿಗಳ ನೆರವಿನೊಂದಿಗೆ ಕಡೆದು ನಿಲ್ಲಿಸಿದ ಪೆರ್ಲದ ಕಲಾ ದೇಗುಲ ಮೂಡಿಸಿರುವ ಸಾಂಸ್ಕøತಿಕ ಪ್ರೇರಣೆ ಕನ್ನಡ ನಾಡು ನುಡಿಗೆ ವರ್ತಮಾನದಲ್ಲಿ ಕಾಸರಗೋಡಿನ ಮಹತ್ತರ ಕೊಡುಗೆ.
              ಸಮರಸ ಸುದ್ದಿಯ ನಲ್ಮೆಯ ವೀಕ್ಷಕರಿಗೆ ಗುರು ಸಬ್ಬಣಕೋಡಿ ರಾಮ ಭಟ್ ಅವರ ಬದುಕು ಸಾಧನೆಗಳ ಪರಿಚಯ ಮಾಡಿಕೊಡುತ್ತಿದ್ದು, ಕೇಂದ್ರದ ಬೆಳವಣಿಗೆಗೆ ಸಹೃದಯರ ನೆರವು, ಬೆಂಬಲ ಮತ್ತು ಅಂತರಂಗದ ಪ್ರೀತಿ ಬೇಕಿದೆ. ವೀಕ್ಷಿಸಿ......ಜೊತೆಗೆ ಬೆಳೆಯೋಣ...........ಸಾಂಸ್ಕøತಿಕ ಗಟ್ಟಿಗೊಳ್ಳುವಿಕೆಯೊಂದಿಗೆ.  





Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries