HEALTH TIPS

ಸಂಸತ್​​ ಬಿಕ್ಕಟ್ಟು ನೀಗಿಸಲು ಸರ್ಕಾರ, ವಿಪಕ್ಷಗಳಿಗೆ ಆಗ್ರಹ

           ನವದೆಹಲಿ : ಸಂಸತ್ತಿನಲ್ಲಿ ಉಂಟಾಗಿರುವ ಕಹಿ ವಾತಾವರಣವನ್ನು ಸರ್ಕಾರ ಮತ್ತು ವಿರೋಧ ಪಕ್ಷಗಳು ಒಟ್ಟಾಗಿ ಪರಿಹರಿಸಿಕೊಳ್ಳುವಂತೆ ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಮಂಗಳವಾರ ಆಗ್ರಹಿಸಿದ್ದಾರೆ. ಈ ಬಗ್ಗೆ ಇಂದು ರಾಜ್ಯಸಭೆಯ ಕಲಾಪವನ್ನು ಮೊದಲ ಬಾರಿಗೆ ಮುಂದೂಡಿದ ನಂತರ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ನಾಯ್ಡು ಚರ್ಚಿಸಿದರು ಎಂದು ತಿಳಿದುಬಂದಿದೆ.

           ಈ ಬಗ್ಗೆ ಸೋಮವಾರ ಸಂಜೆ, ರಕ್ಷಣಾ ಸಚಿವ ರಾಜನಾಥ್​ ಸಿಂಗ್, ಗೃಹ ಸಚಿವ ಅಮಿತ್​ ಷಾ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್​ ಜೋಶಿ, ರಾಜ್ಯಸಭೆಯ ನಾಯಕ ಪಿಯೂಶ್​ ಗೋಯಲ್​ ಅವರುಗಳೊಂದಿಗೆ ಕೂಡ ಸಭೆ ನಡೆಸಿ ನಾಯ್ಡು ಅವರು ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.

         ಜುಲೈ 19 ರಂದು ಕಲಾಪಗಳು ಆರಂಭವಾದಾಗಿನಿಂದ ಕಳೆದ ಎರಡು ವಾರಗಳಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಕಲಾಪಗಳು ಸುಸೂತ್ರವಾಗಿ ನಡೆಯುತ್ತಿಲ್ಲ. ಈ ಕಾರಣಕ್ಕೆ ಸರ್ಕಾರ ಮತ್ತು ವಿಪಕ್ಷಗಳು ಪರಸ್ಪರ ಮಾತನಾಡಿ, ಸೌಹಾರ್ದಯುತ ಪರಿಹಾರವನ್ನು ಹುಡುಕಬೇಕು ಎಂದು ನಾಯ್ಡು ಒತ್ತಾಯಿಸಿದ್ದಾರೆ ಎನ್ನಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries