HEALTH TIPS

ಇನ್ನುಮುಂದೆ ವಾಟ್ಸಾಪ್ ನಿಂದಲೇ ಕೊರೊನಾ ಲಸಿಕೆ ಅಪಾಯಿಂಟ್ಮೆಂಟ್ ಬುಕ್ ಮಾಡಬಹುದು!

            ನವದೆಹಲಿಮೈ ಗವ್ ಕೊರೊನಾ ಸಹಾಯವಾಣಿ(MyGov Corona Helpdesk)ಯ ವಾಟ್ಸಾಪ್ ಗುಂಪಿನ ಸಹಾಯದಿಂದ ಇನ್ನುಮುಂದೆ ವಾಟ್ಸಾಪ್ ಬಳಕೆದಾರರು ತಮ್ಮ ಹತ್ತಿರದ ಲಸಿಕಾ ಕೇಂದ್ರಗಳ ಮಾಹಿತಿ ಪಡೆಯಬಹುದು ಮತ್ತುಆಅ ಕೇಂದ್ರದಲ್ಲಿ ಲಸಿಕೆಯನ್ನು ಬುಕ್ ಮಾಡಬಹುದು.

             ಅಗಸ್ಟ್ 5 ರಂದು ಮೈ ಗವ್ ಕೊರೊನಾ ಸಹಾಯವಾಣಿ ವಾಟ್ಸಾಪ್ ಗ್ರೂಪಿನ ಮುಖಾಂತರ ಬಳಕೆದಾರರು ತಮ್ಮ ಲಸಿಕೆ ಪ್ರಮಾಣಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳುವ ಸವಲತ್ತನ್ನು ಜಾರಿಗೆ ತಂದಿತ್ತು. ಇದುವರೆಗೂ ಒಟ್ಟು 32 ಲಕ್ಷ ಮಂದಿ ಈ ಸವಲತ್ತನ್ನು ಬಳಸಿಕೊಂಡು ವ್ಯಾಕ್ಸಿನ್ ಸರ್ಟಿಫಿಕೆಟ್ ಅನ್ನು ಡೌನ್ ಲೋಡ್ ಮಾಡಿಕೊಂಡಿದ್ದರು. ಇದೀಗ ಮತ್ತೊಂದು ಹೊಸ ಸವಲತ್ತನ್ನು ವಾಟ್ಸಾಪ್ ಬಳಕೆದಾರರಿಗೆ ನೀಡಲು ಮೈ ಗವ್ ಕೊರೊನಾ ಸಹಾಯವಾಣಿ ಮುಂದಾಗಿದೆ.
                ನಾಗರಿಕರು ಕೊರೊನಾ ಸಂಬಂಧಿ ಮಾಹಿತಿಯನ್ನು ಪಡೆದುಕೊಳ್ಳಲು ಮೈ ಗವ್ ಕೊರೊನಾ ಸಹಾಯವಾಣಿ ಅಧಿಕೃತ ಮೂಲವಾಗಿದೆ.

              ಮೈ ಗವ್ ಕೊರೊನಾ ಸಹಾಯವಾಣಿ ಸೇವೆಯನ್ನು ಪಡೆದುಕೊಳ್ಳಲು ವಾಟ್ಸಾಪ್ ಬಳಕೆದಾರರು ಮಾಡಬೇಕಿರುವುದಿಷ್ಟೇ.
               +91 9013151515 ಈ ವಾಟ್ಸಾಪ್ ನಂಬರನ್ನು ನಿಮ್ಮ ಮೊಬೈಲಿನಲ್ಲಿ ಸೇವ್ ಮಾಡಿಕೊಳ್ಳಿ. ಲಸಿಕೆ ಬುಕ್ ಮಾಡಲು ಈ ಸಂಖ್ಯೆಗೆ Book Slot ಎಂದು ಟೈಪ್ ಮಾಡಿ ಕಳಿಸಿ. ಆಗ ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಕಳಿಸಲ್ಪಡುತ್ತದೆ. ಅದನ್ನು ನಮೂದಿಸಿದರೆ ನಂತರ ನಿಮಗೆ ಬೇಕಾದ ದಿನಾಂಕ ಮತ್ತು ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries