ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ಇಂದು ಕೊರೋನಾ ಪರಿಶೀಲನಾ ಸಭೆ ನಡೆಯಲಿದೆ. ಹೆಚ್ಚುತ್ತಿರುವ ಸೋಂಕಿನ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಹೊಸ ನಿಯಮಾವಳಿಗಳ ವಿವಾದದ ನಡುವೆ ಈ ಸಭೆ ಆಯೋಜನೆಗೊಂಡಿದೆ. ಸಭೆಯಲ್ಲಿ ಹೊಸ ನಿಯಂತ್ರಣಗಳ ಚರ್ಚೆ ನಡೆಯಲಿದ್ದು, ನಿರ್ಬಂಧಗಳಲ್ಲಿ ಬದಲಾಗುವ ಸಾಧ್ಯತೆಯಿಲ್ಲ ಎನ್ನಲಾಗಿದ್ದೆ.
ಹೊಸ ನಿರ್ಬಂಧಗಳಲ್ಲಿ ಅಂಗಡಿ-ಮುಗ್ಗಟ್ಟುಗಳಿಗೆ ತೆರಳುವ ಗ್ರಾಹಕರು ಲಸಿಕೆ ಮತ್ತು ಆರ್‌ಟಿಪಿಸಿಆರ್ ಋಣಾತ್ಮಕ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ತೋರಿಸಬೇಕು ಎಂದೆನ್ನುತ್ತದೆ. ಇದು ಎಷ್ಟು ಕಟ್ಟುನಿಟ್ಟಾಗಿರಬೇಕು ಮತ್ತು ಮುಂದಿನ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. ಸಭೆಯಲ್ಲಿ ಪ್ರಸ್ತುತ ಕೊರೋನಾ ಪರಿಸ್ಥಿತಿಯನ್ನೂ ಅವಲೋಕನ ಮಾಡಲಾಗುತ್ತದೆ.




