ತಿರುವನಂತಪುರಂ: ಓಣಂ ಹಬ್ಬದ ಹಿನ್ನೆಲೆಯಲ್ಲಿ ಉದ್ಯೋಗ ಖಾತ್ರಿ ಕಾರ್ಮಿಕರಿಗೆ ರಾಜ್ಯ ಸರ್ಕಾರ ಹಬ್ಬದ ವಿಶೇಷ ಭತ್ತೆ ಘೋಷಿಸಿದೆ. ಹಬ್ಬದ ಉಡುಗೊರೆಯಾಗಿ ಒಂದು ಸಾವಿರ ರೂ.ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಇದು 75 ಕೆಲಸದ ದಿನಗಳನ್ನು ಪೂರೈಸಿದವರಿಗೆ ಮಾತ್ರ ಲಭ್ಯವಾಗಲಿದೆ.
ಗುರುವಾರವಷ್ಟೇ ಸರ್ಕಾರಿ ನೌಕರರಿಗೆ ಓಣಂ ಬೋನಸ್ ಘೋಷಿಸಲಾಗಿತ್ತು. ಓಣಂ ಬೋನಸ್ 4,000 ರೂ.ಲಭಿಸಲಿದೆ. ಬೋನಸ್‍ಗೆ ಅರ್ಹತೆ ಇಲ್ಲದವರಿಗೆ ರೂ 2750 ರ ವಿಶೇಷ ಹಬ್ಬದ ಉಡುಗೊರೆಯನ್ನು ನೀಡಲಾಗುತ್ತದೆ. ಎಲ್ಲಾ ಸರ್ಕಾರಿ ಉದ್ಯೋಗಿಗಳಿಗೆ 15,000 ರೂ.ಗಳ ಓಣಂ ಮುಂಗಡವನ್ನು ನೀಡಲಾಗುತ್ತದೆ.
ರಾಜ್ಯದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟಿನ ಹೊರತಾಗಿಯೂ, ಕಳೆದ ವರ್ಷದಂತೆಯೇ ಸರ್ಕಾರಿ ನೌಕರರಿಗೆ ಬೋನಸ್ ಮತ್ತು ಹಬ್ಬದ ಭತ್ಯೆಗಳನ್ನು ನೀಡಲಾಗುತ್ತಿದೆ.





