ತಿರುವನಂತಪುರಂ: ಡ್ರೋನ್ ತಪಾಸಣೆ ಮತ್ತು ಸಂಶೋಧನೆಗಾಗಿ ಕೇರಳ ಪೋಲೀಸ್ ನೇತೃತ್ವದಲ್ಲಿ ವಿಶೇಷ ವ್ಯವಸ್ಥೆಯನ್ನು ಸ್ಥಾಪಿಸಲಾಗುತ್ತಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕೇರಳ ಪೋಲೀಸರು ಸ್ಥಾಪಿಸಿರುವ ಡ್ರೋನ್ ಫೆÇೀರೆನ್ಸಿಕ್ ಲ್ಯಾಬ್ ಮತ್ತು ಸಂಶೋಧನಾ ಕೇಂದ್ರದ ಉದ್ಘಾಟನೆಯು ಇಂದು ನಡೆಯಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪೆರೂರ್ಕಡ ಎಸ್ ಎ ಪಿ ಪೆರೇಡ್ ಮೈದಾನದಲ್ಲಿ ಸಮಾರಂಭ ನಡೆಯಲಿದೆ. ಭಾರತದಲ್ಲಿ ಪೋಲೀಸರ ನೇತೃತ್ವದಲ್ಲಿ ಇಂತಹ ವ್ಯವಸ್ಥೆಯನ್ನು ಸ್ಥಾಪಿಸಿದ್ದು ಇದೇ ಮೊದಲು.
ವಿಧಿವಿಜ್ಞಾನ ಪ್ರಯೋಗಾಲಯದ ಚಟುವಟಿಕೆಗಳಲ್ಲಿ ವಿವಿಧ ವಿಧದ ಡ್ರೋನ್‍ಗಳ ನಿರ್ಮಾಣ ವೈಶಿಷ್ಟ್ಯಗಳನ್ನು ನಿರ್ಧರಿಸಲು ವಿಧಿವಿಜ್ಞಾನ ಪರೀಕ್ಷೆ, ಸಾಧನದ ಮೆಮೊರಿ ಸಾಮಥ್ರ್ಯ, ಸಾಫ್ಟ್‍ವೇರ್ ಮತ್ತು ಹಾರ್ಡ್‍ವೇರ್ ಮಾಹಿತಿಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಕಾರ್ಯಾಚರಣೆಯ ಇತಿಹಾಸವನ್ನು ವಿಶ್ಲೇಷಿಸುವುದು ಸೇರಿವೆ. ಪೋಲೀಸ್ ಪಡೆಯ ವಿವಿಧ ಅಗತ್ಯಗಳನ್ನು ಪೂರೈಸಲು ಡ್ರೋನ್ ಸಂಶೋಧನಾ ಕೇಂದ್ರದಲ್ಲಿ ಹೊಸ ರೀತಿಯ ಡ್ರೋನ್ ಗಳನ್ನು ನಿರ್ಮಿಸಲಾಗುವುದು.
ಉದ್ಘಾಟನೆಯ ಬಳಿಕ, ಎಸ್ ಎ ಪಿ ಮೈದಾನದಲ್ಲಿ ಡ್ರೋನ್‍ಗಳ ಪ್ರದರ್ಶನ ಮತ್ತು ಏರ್ ಶೋ ನಡೆಯಲಿದೆ. ಪ್ರದರ್ಶನವು ಸಂಜೆ 4.30 ರವರೆಗೆ ನಡೆಯುತ್ತದೆ.


