ಕಾಸರಗೋಡು: ಮೀನುಗಾರರ ಬಗ್ಗೆ ಸರ್ಕಾರ ತೋರುವ ಅವಗಣನೆ ಕೊನೆಗೊಳಿಸುವಂತೆ ಆಗ್ರಹಿಸಿ ಕೇರಳ ಪ್ರದೇಶ ಮೀನು ಕಾರ್ಮಿಕರ ಸಂಘ್(ಬಿಎಂಎಸ್)ಕಾಸರಗೋಡು ಜಿಲ್ಲಾ ಘಟಕ ವತಿಯಿಂದ ಪಂಜಿನ ಮೆರವಣಿಗೆಯ ಪ್ರತಿಭಟನೆ ನಡೆಯಿತು.
ಸಂಘಟನೆ ರಾಜ್ಯಸಮಿತಿ ಉಪಾಧ್ಯಕ್ಷ ಪಿ. ಮುರಳೀಧರನ್ ಉದ್ಘಾಟಿಸಿದರು. ಭಾರತೀಯ ಮತ್ಸ್ಯ ಕಾರ್ಮಿಕ ಸಂಘಟನೆ ಜಿಲ್ಲಾಧ್ಯಕ್ಷ ಶರತ್ ಕಡಪ್ಪುರಂ ಅಧ್ಯಕ್ಷತೆ ವಹಿಸಿದ್ದರು. ಇತ್ತೀಚೆಗೆ ಕಸಬಾ ಕಡಪ್ಪುರದಲ್ಲಿ ದೋಣಿ ಅಪಘಾತದಲ್ಲಿ ಮೃತಪಟ್ಟ ಮೂರು ಮಂದಿ ಮೀನುಕಾರ್ಮಿಕರ ಕುಟುಂಬಕ್ಕೆ ಸರ್ಕಾರ ಸೂಕ್ತ ಪುನರ್ವಸತಿ ಕಲ್ಪಿಸದಿರುವುದನ್ನು ಖಂಡಿಸಿ ಸಂಘಟನೆ ವತಿಯಿಂದ ಪ್ರತಿಭಟನಾ ಜ್ವಾಲೆ ಆಯೋಜಿಸಲಾಗಿತ್ತು. ಉಪಾಧ್ಯಕ್ಷ ಕೆ.ಎ ಶ್ರೀನಿವಾಸನ್, ಕಾರ್ಯದರ್ಶಿ ಪಿ.ದಿನೇಶ್, ನಗರಸಭಾ ಸದಸ್ಯರಾದ ಉಮಾ ಕಡಪ್ಪುರಂ, ರಜನಿ ಕಡಪ್ಪುರಂ, ಅಜಿತ್ ಕುಮಾರ್, ವಲಯ ಕಾರ್ಯದರ್ಶಿ ರಿಜೇಶ್, ಬಾಲಕೃಷ್ಣ ನೆಲ್ಲಿಕುನ್ನು, ಶಿವಪ್ರಸಾದ್, ರಮೇಶ್ ಕಡಪ್ಪುರ ಉಪಸ್ಥಿತರಿದ್ದರು.





