HEALTH TIPS

ಅಂಗಡಿಗಳಿಗೆ ಹೋಗಲು ಲಸಿಕೆ ಪ್ರಮಾಣಪತ್ರ; ಸರ್ಕಾರದ ನಿಯಮಾವಳಿಗಳ ವಿರುದ್ಧ ಹೈಕೋರ್ಟ್‍ನಲ್ಲಿ ಅರ್ಜಿ

                         

          ಕೊಚ್ಚಿ: ಅಂಗಡಿ-ಮುಗ್ಗಟ್ಟುಗಳಿಗೆ ತೆರಳಲು ಗ್ರಾಹಕರು ಲಸಿಕೆ ಹಾಕಿಸಿದ ಪ್ರಮಾಣಪತ್ರದ ಅವಶ್ಯಕತೆ ಸೇರಿದಂತೆ ರಾಜ್ಯ ಸರ್ಕಾರದ ಹೊಸ ನಿಯಮಾವಳಿಗಳ ವಿರುದ್ಧ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಚಾಲಕುಡಿ ಮೂಲದ ಪೌಲಿ ಎಂಬವರು, ಡ್ರಗ್ಸ್ ಅಥವಾ ಔಷಧದ ಅಲರ್ಜಿ ಇರುವವರು ಪರೀಕ್ಷಾ ಡೋಸ್ ತೆಗೆದುಕೊಳ್ಳಲು ಮತ್ತು ಲಸಿಕೆ ಪಡೆಯಲು ಸಾಧ್ಯವಾಗದ ಪರಿಸ್ಥಿತಿಯನ್ನು ಉಲ್ಲೇಖಿಸಿ ಹೈಕೋರ್ಟ್ ಮೊರೆ ಹೋಗಿರುವರು. 

         ಅಲರ್ಜಿ ಇರುವವರು ಯಾವುದೇ ಅಲೋಪತಿ ಔಷಧಿಗಳನ್ನೂ ಬಳಸುವ ಮೊದಲು ಪರೀಕ್ಷಾ ಪ್ರಮಾಣ(ಟೆಸ್ಟ್ ಡೋಸ್) ತೆಗೆದುಕೊಳ್ಳಬೇಕು. ಕೋವಿಡ್ ಲಸಿಕೆಯ ಟೆಸ್ಟ್ ಡೋಸ್ ಲಭ್ಯವಿದೆಯೇ ಎಂದು ತಿಳಿಯಲು ವಿವಿಧ ಆಸ್ಪತ್ರೆಗಳನ್ನು ಸಂಪರ್ಕಿಸಲಾಗಿತ್ತು. ಆದರೆ ಈ ನಿಟ್ಟಿನಲ್ಲಿ ಯಾವುದೇ ನಿರ್ದಿಷ್ಟ ಮಾರ್ಗಸೂಚಿಗಳನ್ನು ಯಾರೂ ನೀಡಿಲ್ಲ. ಇದನ್ನು ತೋರಿಸುವಂತೆ ಡಿಎಂಒಗೆ ದೂರು ನೀಡಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿಲ್ಲ. ಅಲರ್ಜಿ ಇರುವವರಿಗೆ ಲಸಿಕೆ ಹಾಕಲಾಗುವುದಿಲ್ಲ ಎಂದು ಆಸ್ಪತ್ರೆಗಳು ಹೇಳುತ್ತವೆ.

         ಸರ್ಕಾರದ ಹೊಸ ಮಾರ್ಗಸೂಚಿಗಳ ಪ್ರಕಾರ, ಲಸಿಕೆ ಹಾಕಿ ಎರಡು ವಾರಗಳ ಬಳಿಕ ಹಾಕಿಸಿಕೊಂಡವರು ಮಾತ್ರ ಅಂಗಡಿಗೆ ಅಥವಾ ಬೇರೆ ಯಾವುದೇ ಉದ್ದೇಶಕ್ಕಾಗಿ ಹೊರಗೆ ಹೋಗಬಹುದು. 72 ಗಂಟೆಗಳಲ್ಲಿ ತೆಗೆದುಕೊಂಡ ಆರ್‍ಟಿಪಿಸಿಆರ್ ನೆಗೆಟಿವ್ ಪ್ರಮಾಣಪತ್ರ ಹೊಂದಿರುವವರಿಗೆ ಮತ್ತು ಕೊರೋನಾ ಬಾಧಿಸಿ, ಚಿಕಿತ್ಸೆಪಡೆದು ಗುಣಮುಖರಾದ ಬಳಿಕ ಒಂದು ತಿಂಗಳು ಪೂರ್ಣಗೊಂಡವರಿಗೆ ವಿನಾಯಿತಿಗಳು ಲಭ್ಯವಿದೆ. ಅರ್ಜಿದಾರರು ಪ್ರತಿ ದಿನ ಆರ್ಟಿಪಿಸಿಆರ್  ತೆಗೆದುಕೊಳ್ಳುವುದು ಅಪ್ರಾಯೋಗಿಕ ಮತ್ತು ಸರ್ಕಾರದ ಆದೇಶವನ್ನು ಹಿಂಪಡೆಯಬೇಕು ಎಂದು ಪ್ರತಿಪಾದಿಸುತ್ತಾರೆ. ರಾಜ್ಯ ಸರ್ಕಾರದ ಹೊಸ ಅನ್‍ಲಾಕ್ ಕೊರೋನಾ ನಿಯಮಗಳು ಅಸಂವಿಧಾನಿಕ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

           ಸಮುದಾಯದಲ್ಲಿ ಅಲರ್ಜಿ ಸಮಸ್ಯೆಗಳಿರುವ ಅನೇಕ ಜನರಿದ್ದಾರೆ. ಅವರಿಗೆ ಹೇಗೆ ಲಸಿಕೆ ಹಾಕಲಾಗುವುದೆಂಬ ಬಗ್ಗೆ ಸರ್ಕಾರವು ಹೇಳಬೇಕೆಂದು ಅರ್ಜಿಯಲ್ಲಿ ತಿಳಿಸಲಾಗಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries