HEALTH TIPS

ಮಕ್ಕಳಿಗೆ ಸುರಕ್ಷಿತ ಆನ್‌ಲೈನ್‌ ಪರಿಸರ: ಯುನಿಸೆಫ್, ಫೇಸ್‌ಬುಕ್‌ನಿಂದ ಕಾರ್ಯಕ್ರಮ

              ನವದೆಹಲಿ: ಮಕ್ಕಳ ವಿರುದ್ಧ ನಡೆಯುವ ದೌರ್ಜನ್ಯ ತಡೆಯಲು ಯುನಿಸೆಫ್‌ ಇಂಡಿಯಾ ಹಾಗೂ ಫೇಸ್‌ಬುಕ್‌ ಕೈಜೋಡಿಸಿವೆ. ಅದರಲ್ಲೂ, ಆನ್‌ಲೈನ್‌ ವೇದಿಕೆಯು ಮಕ್ಕಳಿಗೆ ಸುರಕ್ಷಿತವಾಗಿರಬೇಕು ಎಂಬುದಕ್ಕೆ ಒತ್ತು ನೀಡಲಾಗಿದ್ದು, ಒಂದು ವರ್ಷ ಅವಧಿಯ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿವೆ.

            ವರ್ಚುವಲ್‌ ವಿಧಾನದ ಮೂಲಕ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಸ್ಥಾ ಸಕ್ಸೇನಾ ಖಟ್ವಾನಿ, ಫೇಸ್‌ಬುಕ್‌ನ ಪ್ರೋಗಾಂ ಆಯಂಡ್‌ ಔಟ್‌ರೀಚ್‌ ವಿಭಾಗದ ಮುಖಸ್ಥ ಮಧು ಸಿರೋಹಿ, ಯುನಿಸೆಫ್‌ ಇಂಡಿಯಾದ ಪ್ರತಿನಿಧಿ ಯಸುಮಸಾ ಕಿಮುರಾ ಉಪಸ್ಥಿತರಿದ್ದರು.

          'ಈ ವಿಶೇಷ ಕಾರ್ಯಕ್ರಮಕ್ಕೆ ಆ. 9ರಂದು ಚಾಲನೆ ನೀಡಲಾಗಿದೆ. ಮಕ್ಕಳಿಗಾಗಿ ಸುರಕ್ಷಿತವಾದ ಆನ್‌ಲೈನ್‌ ಹಾಗೂ ಆಫ್‌ಲೈನ್ ಪರಿಸರ ನಿರ್ಮಿಸಲು ಈ ಸಹಭಾಗಿತ್ವ ಶ್ರಮಿಸುವುದು. ಡಿಜಿಟಲ್‌ ಮಾಧ್ಯಮದ ಮೂಲಕ ಅವರ ಕಲಿಕೆ ಸುಲಭವಾಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ' ಎಂದು ಯುನಿಸೆಫ್‌ ಪ್ರಕಟಣೆಯಲ್ಲಿ ತಿಳಿಸಿದೆ.

            'ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಅರಿವು ಹೆಚ್ಚಿಸುವುದು. ಮಕ್ಕಳು, ಕುಟುಂಬಗಳು ಹಾಗೂ ಸಮುದಾಯಗಳ ಮೇಲೆ ಇದರ ಪರಿಣಾಮ ಕುರಿತು ಜಾಗೃತಿ ಮೂಡಿಸುವುದು, ದೌರ್ಜನ್ಯ ತಡೆಯಲು ಹಾಗೂ ಅದಕ್ಕೆ ಪ್ರತಿಕ್ರಿಯಿಸಲು ಬೇಕಾದ ಕೌಶಲಗಳನ್ನು ಕಲಿಸುವುದು ಕಾರ್ಯಕ್ರಮದ ಉದ್ದೇಶ' ಎಂದೂ ತಿಳಿಸಿದೆ.

            'ಸಾಮಾಜಿಕ ಮಾಧ್ಯಮಗಳ ಮೂಲಕ ದೇಶದಾದ್ಯಂತ ನಡೆಯುವ ಈ ಕಾರ್ಯಕ್ರಮದಲ್ಲಿ ಒಂದು ಲಕ್ಷ ಶಾಲಾ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ' ಎಂದು ಯುನಿಸೆಫ್‌ ಇಂಡಿಯಾ ತಿಳಿಸಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries