HEALTH TIPS

ಉದ್ಯಮಗಳ ಜಿಎಸ್ ಟಿ ರಿಟರ್ನ್ಸ್ ಗೆ ಕಡ್ಡಾಯ ಸಿಎ ಆಡಿಟ್ ಬದಲು ಸ್ವಯಂ ಪ್ರಮಾಣೀಕರಿಸಿ ಸಲ್ಲಿಸಲು ಅವಕಾಶ

            ನವದೆಹಲಿಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆಯನ್ನು ಈಗ ಮತ್ತಷ್ಟು ಸರಳೀಕರಣಗೊಳಿಸಲಾಗಿದ್ದು, 5 ಕೋಟಿಗಿಂತಲೂ ಹೆಚ್ಚಿನ ವಹಿವಾಟು ಹೊಂದಿರುವ ತೆರಿಗೆ ಪಾವತಿದಾರರಿಗೆ ರಿಟರ್ನ್ಸ್ ಸಲ್ಲಿಕೆಯ ವಿಧಾನದಲ್ಲಿ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ.

          ಈ ವಿಭಾಗಕ್ಕೆ ಈ ವರೆಗೂ ಇದ್ದ ಕಡ್ಡಾಯ ಆಡಿಟ್ ಪ್ರಮಾಣಪತ್ರದ ಬದಲಾಗಿ ಸ್ವಯಂ ಪ್ರಮಾಣೀಕರಿಸಿ ರಿಟರ್ನ್ಸ್ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ ಎಂದು ಸಿಬಿಐಸಿ ಹೇಳಿದೆ.

          2 ಕೋಟಿಗಿಂತ ಹೆಚ್ಚಿನ ವಹಿವಾಟು ನಡೆಸುವ ಉದ್ಯಮಗಳನ್ನು ಹೊರತುಪಡಿಸಿ ವಾರ್ಷಿಕ ಜಿಎಸ್ ಟಿ ಸಲ್ಲಿಕೆ- 2020-21 ನೇ ಸಾಲಿನ ಜಿಎಸ್ ಟಿಆರ್ 9/9A ಅಡಿಯಲ್ಲಿ ನೋಂದಾಯಿತ ಉದ್ಯಮಗಳಿಗೆ ಜಿಎಸ್ ಟಿ ರಿಟರ್ನ್ಸ್ ಸಲ್ಲಿಸುವುದು ಕಡ್ಡಾಯವಾಗಿದ್ದು ಇದರ ಹೊರತಾಗಿ 5 ಕೋಟಿಗಿಂತಲೂ ಹೆಚ್ಚು ವಹಿವಾಟು ನಡೆಸುವ ತೆರಿಗೆ ಪಾವತಿದಾರರಿಗೆ ಜಿಎಸ್ ಟಿಆರ್-9ಸಿ ಫಾರ್ಮ್ ನಲ್ಲಿ ರಿಕನ್ಸಿಲಿಯೇಷನ್ ಸ್ಟೇಟ್ಮೆಂಟ್ ಸಲ್ಲಿಸುವುದು ಕಡ್ಡಾಯವಾಗಿದೆ.

            ರಿಕನ್ಸಿಲಿಯೇಷನ್ ಸ್ಟೇಟ್ಮೆಂಟ್ ಈ ವರೆಗೂ ಲೆಕ್ಕಪರಿಶೋಧಕರಿಂದ ಪ್ರಮಾಣಪತ್ರ ಪಡೆಯಬೇಕಿತ್ತು. ಆದರೆ ಈಗ ಅದಕ್ಕೆ ವಿನಾಯಿತಿ ನೀಡಲಾಗಿದ್ದು, ಸ್ವಯಂ ಪ್ರಮಾಣೀಕರಿಸಿ ಸಲ್ಲಿಸಲು ಅವಕಾಶ ನೀಡಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries