ತಿರುವನಂತಪುರಂ: ಕೇರಳದಲ್ಲಿ ಕೊರೋನಾ ಹರಡುವಿಕೆಯು ವ್ಯಾಪಕವಾಗಿ ಮುಂದುವರಿದಿದ್ದರೂ, ಈ ಬಾರಿ ಓಣಂ ಮಾರುಕಟ್ಟೆಯು ಮಿಲ್ಮಾದಿಂದ ಧೂಳೀಪಟವಾಯಿತು. ಮಿಲ್ಮಾ ರಚನೆಯ ನಂತರ ಕೇರಳದಲ್ಲಿ ಇಷ್ಟೊಂದು ಹಾಲು ಮತ್ತು ಮೊಸರು ಮಾರಾಟವಾಗುತ್ತಿರುವುದು ಇದೇ ಮೊದಲು. ಕೇರಳೀಯರು 36 ಲಕ್ಷ ಲೀಟರ್ ಹಾಲನ್ನು ತಿರುವೋಣಂ ಬಳಕೆಗಾಗಿ ಮತ್ತು ದೈನಂದಿನ ಬಳಕೆಗೆ ವಿಕ್ರಯಗೊಂಡಿದೆ. ಕಳೆದ ವರ್ಷ ಇದು 31 ಲಕ್ಷ ಲೀಟರ್ ಆಗಿತ್ತು.
ಮೊಸರಿನ ಮಾರಾಟದಲ್ಲಿಯೂ ಗಣನೀಯ ಏರಿಕೆ ಕಂಡುಬಂದಿದೆ. ಮಿಲ್ಮಾ ತಿರುವೋಣಂಗಾಗಿ ಕೇರಳದಲ್ಲಿ 3.60 ಲಕ್ಷ ಕೆಜಿ ಮೊಸರನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದು 3 ಲಕ್ಷ ಲೀಟರ್ ಆಗಿತ್ತು. ಕೇರಳದಲ್ಲಿ ದಿನನಿತ್ಯದ ಹಾಲಿನ ಉತ್ಪಾದನೆಯು 15 ಲಕ್ಷ ಲೀಟರ್‍ಗಳಷ್ಟಿರುವಾಗ, ಮಿಲ್ಮಾ ಸಾಕಷ್ಟು ಯೋಜನೆಯೊಂದಿಗೆ ಬೇಡಿಕೆಯನ್ನು ಪೂರೈಸಿದೆ.
ಕೇರಳೀಯರು ತಿರುವನಂತಪುರಂನಲ್ಲಿ 9.86 ಲಕ್ಷ ಲೀಟರ್ ಹಾಲು ಮತ್ತು 73,000 ಕೆಜಿ ಮೊಸರು, ಎರ್ನಾಕುಳಂ ನಲ್ಲಿ 12.8 ಲಕ್ಷ ಲೀಟರ್ ಹಾಲು ಮತ್ತು 95,000 ಕೆಜಿ ಮೊಸರನ್ನು ಓಣಂ ದಿನದಂದು ಖರೀದಿಸಿದರು. ಕೇರಳದಲ್ಲಿ ಮಾತ್ರವಲ್ಲದೆ ನೆರೆಯ ರಾಜ್ಯಗಳಲ್ಲಿಯೂ ಹಾಲು ಮಾರಾಟ ದಾಖಲಾಗಿದೆ. ಮಿಲ್ಮಾ ಕರ್ನಾಟಕದಲ್ಲಿ 10 ಲಕ್ಷ ಲೀಟರ್ ಹಾಲು ಮತ್ತು ತಮಿಳುನಾಡಿನಲ್ಲಿ 1.5 ಲಕ್ಷ ಲೀಟರ್ ಹಾಲು ಮಾರಾಟ ಮಾಡಿದೆ.


