HEALTH TIPS

ವಿನಾಶಕಾರಿ, ಭಯೋತ್ಪಾದಕ ಶಕ್ತಿಗಳು ಕೆಲಕಾಲ ಪ್ರಾಬಲ್ಯ ಸಾಧಿಸಬಹುದು, ಆದರೆ ಅವುಗಳ ಅಸ್ತಿತ್ವ ಶಾಶ್ವತವಲ್ಲ: ಪ್ರಧಾನಿ ಮೋದಿ

               ಸೋಮನಾಥ: ಭಯೋತ್ಪಾದನೆಯ ಮೂಲಕ ಸಾಮ್ರಾಜ್ಯ ಸ್ಥಾಪಿಸುವ ಸಿದ್ಧಾಂತವನ್ನು ಅನುಸರಿಸುವ ವಿನಾಶಕಾರಿ ಶಕ್ತಿಗಳು ಮತ್ತು ಜನರು ಕೆಲ ಸಮಯದವರೆಗೆ ಮಾತ್ರ ಪ್ರಾಬಲ್ಯ ಸಾಧಿಸಬಹುದು. ಆದರೆ ಮಾನವೀಯತೆಯನ್ನು ಶಾಶ್ವತವಾಗಿ ನಿಗ್ರಹಿಸಲು ಸಾಧ್ಯವಿಲ್ಲದ ಕಾರಣ ಅವರ ಅಸ್ತಿತ್ವ ಶಾಶ್ವತವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

            ಗುಜರಾತಿನ ಪ್ರಸಿದ್ಧ ಸೋಮನಾಥ ದೇವಾಲಯದ ಕೆಲವು ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, "ಸೋಮನಾಥ ದೇವಸ್ಥಾನವು ಹಲವು ಬಾರಿ ನಾಶವಾಯಿತು, ವಿಗ್ರಹಗಳನ್ನು ಅನೇಕ ಬಾರಿ ಅಪವಿತ್ರಗೊಳಿಸಲಾಯಿತು ಮತ್ತು ಅದರ ಅಸ್ತಿತ್ವವನ್ನು ಅಳಿಸಲು ಪ್ರಯತ್ನಿಸಲಾಯಿತು. ಆದರೆ ಪ್ರತಿ ವಿನಾಶಕಾರಿ ದಾಳಿಯ ನಂತರ ಅದು ಮತ್ತೆ ಸಂಪೂರ್ಣ ವೈಭವವನ್ನು ಪಡೆಯಿತು. ಇದು ನಮಗೆ ಆತ್ಮವಿಶ್ವಾಸವನ್ನು ನೀಡುತ್ತದೆ" ಎಂದರು.

           "ವಿನಾಶಕ್ಕಾಗಿ ಶ್ರಮಿಸುವ ಶಕ್ತಿಗಳು ಮತ್ತು ಭಯೋತ್ಪಾದನೆಯಿಂದ ಸಾಮ್ರಾಜ್ಯ ಸ್ಥಾಪಿಸುವ ಸಿದ್ಧಾಂತವನ್ನು ಅನುಸರಿಸುವವರು ಸ್ವಲ್ಪ ಸಮಯದವರೆಗೆ ಪ್ರಾಬಲ್ಯ ಸಾಧಿಸಬಹುದು. ಆದರೆ ಅವರ ಅಸ್ತಿತ್ವವು ಶಾಶ್ವತವಾಗಿರುವುದಿಲ್ಲ. ಏಕೆಂದರೆ ಅವರು ಮಾನವೀಯತೆಯನ್ನು ಶಾಶ್ವತವಾಗಿ ಹತ್ತಿಕ್ಕಲು ಸಾಧ್ಯವಿಲ್ಲ" ಎಂದು ಪ್ರಧಾನಿ ಹೇಳಿದರು.

           ಹಿಂದೆ ಸೋಮನಾಥ ದೇವಸ್ಥಾನವನ್ನು ನಾಶಪಡಿಸಿದಾಗ ಇದು ನಿಜವಾಗಿತ್ತು ಮತ್ತು ಅದು ಇಂದಿಗೂ ಸತ್ಯವಾಗಿದೆ ಎಂದು ಪ್ರಧಾನಿ ಹೇಳಿದರು.

           ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ಹಿನ್ನೆಲೆಯಲ್ಲಿ ಪ್ರಧಾನಿ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries