HEALTH TIPS

ಕೇರಳದಲ್ಲಿ ಶಾಲೆಗಳು ಶೀಘ್ರ ಆರಂಭವಾಗುವುದೇ?: ರಾಜ್ಯಗಳಿಗೆ ನಿರ್ಧರಿಸುವ ಹಕ್ಕು ನೀಡಿದ ಕೇಂದ್ರ

                                

                ನವದೆಹಲಿ: ಸ್ಥಳೀಯ ನಿಯಮಗಳ ಪ್ರಕಾರ ಶಾಲೆಗಳು ಮತ್ತು ಕೋಚಿಂಗ್ ಕೇಂದ್ರಗಳನ್ನು ತೆರೆಯಬಹುದು ಎಂದು ಕೇಂದ್ರ ಹೇಳಿದೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಲೋಕಸಭೆಗೆ ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಿರುವರು.

                   ಸ್ಥಳೀಯ ನಿಯಂತ್ರಣಗಳನ್ನು ಪರಿಗಣಿಸಿ ಶಾಲೆಗಳನ್ನು ತೆರೆಯಲು ಅಗತ್ಯ ನಿರ್ಧಾರ ತೆಗೆದುಕೊಳ್ಳುವುದಾಗಿ ರಾಜ್ಯ ಸರ್ಕಾರಗಳು ಈ ಹಿಂದೆ ಹೇಳಿದ್ದವು ಎಂದು ಅವರು ಹೇಳಿದರು. ಕೇರಳವನ್ನು ಒಳಗೊಂಡಂತೆ ಹಲವು ರಾಜ್ಯಗಳು ಶಾಲೆಗಳನ್ನು ತೆರೆಯುವ ಕುರಿತು ಚರ್ಚೆಗಳನ್ನು ಆರಂಭಿಸಿರುವ ಪರಿಸ್ಥಿತಿಯ ಬಗ್ಗೆ ಕೇಂದ್ರವು ತನ್ನ ನಿಲುವನ್ನು ಸ್ಪಷ್ಟಪಡಿಸಿತು. 

                 ರಾಜ್ಯ ಶಿಕ್ಷಣ ಸಚಿವ ವಿ.ಶಿವಂ ಕುಟ್ಟಿ ಅವರು ವಿಧಾನಸಭೆಯಲ್ಲಿ ನಿಲುವು ಈ ಬಗ್ಗೆ ತೆಗೆದುಕೊಂಡಿದ್ದರು. "ಶಾಲೆಗಳನ್ನು ಹಂತ ಹಂತವಾಗಿ ತೆರೆಯಲು ಸರ್ಕಾರ ಯೋಚಿಸುತ್ತಿದೆ. ಶಾಲೆಗಳನ್ನು ತೆರೆಯಲು ಕೇಂದ್ರ ಸರ್ಕಾರ ಮತ್ತು ಕೋವಿಡ್ ನಿಯಂತ್ರಣ ಪ್ರಾಧಿಕಾರದ ಅನುಮೋದನೆಯ ಅಗತ್ಯವಿದೆ ಎಮದು ಶಿವಂ ಕುಟ್ಟಿ ಇತ್ತೀಚೆಗೆ ತಿಳಿಸಿದ್ದರು.

                   ಆನ್‍ಲೈನ್ ಶಿಕ್ಷಣ ವ್ಯವಸ್ಥೆ ಶಾಶ್ವತವಲ್ಲ ಎಂದು ಸಚಿವರು ವಿಧಾನಸಭೆಗೆ ತಿಳಿಸಿದ್ದರು. ಆನ್‍ಲೈನ್ ಶಿಕ್ಷಣ ವ್ಯವಸ್ಥೆಯನ್ನು ಮುಂದುವರಿಸುವುದು ಮಕ್ಕಳಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಆನ್ ಲೈನ್ ಅಧ್ಯಯನದಲ್ಲಿ ಉಲ್ಲೇಖಿಸಿರುವಂತೆ 36ಶೇ. ವಿದ್ಯಾರ್ಥಿಗಳು ಆನ್‍ಲೈನ್ ತರಗತಿಗಳಿಂದ  ತಲೆನೋವು ಅನುಭವಿಸುತ್ತಿದ್ದಾರೆ.  ಶೇ .88 ರಷ್ಟು ಮಕ್ಕಳು ಕಣ್ಣಿನ ಸಮಸ್ಯೆಗಳು ಮತ್ತು ಶೇ .28 ರಷ್ಟು ಮಕ್ಕಳು ಕುತ್ತಿಗೆ ನೋವನ್ನು ಅನುಭವಿಸುತ್ತಿದ್ದಾರೆ ಎಂದು ವರದಿಯಾಗಿದೆ. ಇಂತಹ ಸವಾಲುಗಳನ್ನು ಪರಿಹರಿಸಲು ಮಕ್ಕಳು ಮತ್ತು ಪೋಷಕರು ಹೆಚ್ಚು ಸಂವಹನ ನಡೆಸಬೇಕು ಎಂದು ಶಿಕ್ಷಣ ಸಚಿವ ವಿ.ಶಿವಂ ಕುಟ್ಟಿ ವಿಧಾನಸಭೆಗೆ ಹೇಳಿದರು. ಪೋಷಕರು ತಮ್ಮ ಮಕ್ಕಳಿಗೆ ಅಗತ್ಯವಿರುವ ವ್ಯಾಯಾಮ ಮತ್ತು ಆರೈಕೆಯನ್ನು ನೀಡುವಂತೆ ನೋಡಿಕೊಳ್ಳಬೇಕು ಎoದು ಸಚಿವರು ತಿಳಿಸಿದ್ದಾರೆ. 


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries