HEALTH TIPS

ಸಂಡೇ ಟಾಕ್: ಇದು ಚಹಾದ ಬಗೆಗಿನ ಪ್ರೀತಿ: ಅಷ್ಟೆ!:ಶುಂಠಿ ಚಹಾದಂತೆ ಬೆಳ್ಳುಳ್ಳಿ ಚಹಾವು ಉಪಯುಕ್ತ

                                             

                ನಾವು ಹಲವು ಸಂದರ್ಭಗಳಲ್ಲಿ ಮಾತು ಮಾತಿಗೂ ಹಾಗೊಂದು ಇದೆಯಾ?....ಹೀಗೂ ಉಂಟೆ ಎಂದೆಲ್ಲ ಬಹಿರಂಗವಾಗಿ ಅಥವಾ ಅಂತರಂಗದೊಳಗೆ ಕೇಳುತ್ತಲೇ ಇರುತ್ತೇವೆ. ಬಹುಷಃ ಮನಸ್ಸಿನ ಕ್ರಿಯಾತ್ಮಕತೆ, ಬುದ್ದಿಮತ್ತೆಯ ಸಂಕೇತವೂ ಇದಿರಬಹುದು. ಆದರೆ ಕೆಲವೊಮ್ಮೆ ಹಲವು ಸುಲಲಿತ ವಿಷಯಗಳು ನಮ್ಮ ಗಮನಕ್ಕೆ ಬರುವುದು ನಿಧಾನವಾಗಿ ಮತ್ತು ಬೇಕೆಂದಾಗ ಆಗಿರುವುದಿಲ್ಲ. ಪ್ರಶ್ನಿಸುವ, ಮನಸ್ಸಿಗೆ ಪ್ರಶ್ನಾರ್ಹವಾಗಿ ಕಾಣಿಸುವ ವಿಷಯಗಳಿಗೆ ಪರದೆ ಬಿದ್ದರೆ ಅಂತಹ ಮರೆಯನ್ನು ಸರಿಸುವ ಗುಣ ಮಾನವ ಮನಸ್ಸುಗಳಿಗೆ ಸಹಜವಾಗಿದೆ ಇದೆ ಎನ್ನುವುದು ಮನಃಶಾಸ್ತ್ರ ಹೇಳುತ್ತದೆ. ಆದರೆ ಅದೂ ಕೆಲವೊಮ್ಮೆ ಮಾಯದಿದ್ದಾಗ ಅಥವಾ ಹಾಗೆಂದು ನಾವು ಭಾವಿಸಿದಾಗ ಬೇರೊಂದು ಕೃತಕತೆಯ ಗುರಾಣಿ ಬೇಕೇಬೇಕು.


            ಉದಾಹರಣೆಗೆ ಕೇರಳದಲ್ಲಿ ಕೋವಿಡ್ ಅನಿಯಂತ್ರಿತ ಹರಡುವಿಕೆಯ ಕಾರಣ ಕರ್ನಾಟಕ ಸರ್ಕಾರ ಕೇರಳದ ಗಡಿಗಳನ್ನು ನಿಬಂಧನೆಗಳೊಂದಿಗೆ ಮುಚ್ಚಿಬಿಟ್ಟಿದೆ. ಮುಖ್ಯವಾಗಿ ಗಡಿನಾಡು ಕಾಸರಗೋಡಿನ ಮಂದಿಗೆ ಇದರಿಂದ ಬಹಳಷ್ಟು ತೊಂದರೆಗಳಾಗುತ್ತಿವೆ. ಆದರೆ ಯಾವ ಆಧಾರದಲ್ಲಿ ಇಂತಹದೊಂದು ಕಾನೂನು ಜಾರಿಯಾಗಿದೆ ಎಂಬ ಬಗ್ಗೆ ಯಾರಿಗೂ ಸ್ಪಷ್ಟ ಉತ್ತರಗಳೇ ಇಲ್ಲ. ಒಂದೆಡೆ ಕೇಂದ್ರ ಸರ್ಕಾರವು ದೇಶಗಳೊಳಗಿನ ಸಂಚಾರಕ್ಕೆ ನಿಬಂಧನೆಗಳು ಸಲ್ಲದೆಂದು ಹೇಳಿದ್ದರೂ ಗಡಿ ನಿಯಂತ್ರ  ಮುಂದುವರಿದಿದೆ. ಈಗ ಕಾಸರಗೋಡಿನ ಬಡಪಾಯಿ ಜನರಿಗೆ ನಾವು ಭಾರತದೊಳಗಿಲ್ಲವೇ ಎಂಬ ಸಂಶಯ ಮನಸ್ಸಿನೊಳಗೆ ಕಂಡುಬರುತ್ತಿದೆ. ಹಲವರು ಈಗಾಗಲೇ ಭಾರತದ ಭೂಪಟ, ಸರ್ಕಾರದ ಸುತ್ತೋಲೆಗಳನ್ನು ತಲಾಶೆಮಾಡಿ ನಿಖರತೆಯನ್ನು ಪರೀಕ್ಷಿಸಿದರೆಂದೂ ತಿಳಿಯಲಾಗಿದೆ. ಏನು ಕಥೆಯೋ ಗೊತ್ತಿಲ್ಲ. ಇಂತಹ ಸವಾಲುಗಳಿಂದ ತಲೆ ಚಿಟ್ಟು ಹಿಡಿದಂತಾಗುತ್ತದೆ. ಬನ್ನಿ ಒಂದಷ್ಟು ಚಹಾ ಸೇವಿಸಿ ಆಲೋಚಿಸೋಣ...ಏನಂತೀರಿ?    

              ಈಗ ಬೆಳ್ಳುಳ್ಳಿ  ಚಹಾ ಉಂಟು ಮಾರಾಯರೆ..................

                 ಅನೇಕ ಜನರು ಯಾವುದೇ ರೀತಿಯ ಚಹಾವನ್ನು ಪ್ರಯೋಗಿಸಲು ಹಿಂಜರಿಯುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಬೆಳ್ಳುಳ್ಳಿ ಚಹಾ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ನಿಮಗೆ ಹೇಳಿದರೆ, ಬಹುಶಃ ನಿಮ್ಮ ಪ್ರತಿಕ್ರಿಯೆ ಸ್ವಲ್ಪ ಭಿನ್ನವಾಗಿರುತ್ತದೆ.

             ಇಂತಹ ಪರಿಸ್ಥಿತಿಯಲ್ಲಿ, ಶುಂಠಿ ಚಹಾದಂತೆಯೇ ಬೆಳ್ಳುಳ್ಳಿ ಚಹಾವು ಉಪಯುಕ್ತ ಮತ್ತು ರುಚಿಕರವಾಗಿದೆ ಎಂದು ತಿಳಿಯುವುದು ಮುಖ್ಯವಾಗಿದೆ. ಬೆಳ್ಳುಳ್ಳಿ ಚಹಾ ಮಾಡುವುದು ಹೇಗೆ ಮತ್ತು ಅದರ ಪ್ರಯೋಜನಗಳೇನು ಎಂದು ತಿಳಿಯಿರಿ.

                      ಬೆಳ್ಳುಳ್ಳಿ ಚಹಾದ ಪ್ರಯೋಜನಗಳು:

1) ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ವಿರುದ್ಧ ಹೋರಾಡಲು ಬೆಳ್ಳುಳ್ಳಿ ತುಂಬಾ ಉಪಯುಕ್ತವಾಗಿದೆ. ಹಾಗಾಗಿ ಇದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ನಿಂಬೆ ಮತ್ತು ಜೇನುತುಪ್ಪವನ್ನು ಬೆಳ್ಳುಳ್ಳಿ ಚಹಾಕ್ಕೆ ಸೇರಿಸುವುದರಿಂದ ಅದರ ಗುಣಮಟ್ಟ ಹೆಚ್ಚುತ್ತದೆ.

             2) ಬೆಳ್ಳುಳ್ಳಿ ಚಹಾವನ್ನು ಚಳಿಗಾಲದಲ್ಲಿ ಕುಡಿಯಲು ಶಿಫಾರಸು ಮಾಡಲಾಗಿದ್ದು ಅದರ ವೈರಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಚಹಾ ಚಯಾಪಚಯ, ರೋಗನಿರೋಧಕ ಶಕ್ತಿ ಮತ್ತು ಉತ್ತಮ ಆರೋಗ್ಯಕ್ಕೆ ಒಳ್ಳೆಯದು. ಈ ಚಹಾವು ಹೃದ್ರೋಗಕ್ಕೂ ತುಂಬಾ ಪ್ರಯೋಜನಕಾರಿ.

3) ಬೆಳ್ಳುಳ್ಳಿ ಚಹಾದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಮತ್ತು ಹೃದಯದ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

                          ಹೇಗಪ್ಪಾ ಮಾಡೋದು?:

         ಈ ಚಹಾವನ್ನು ಮಾಡಲು, ಒಂದು ಪಾತ್ರೆಯಲ್ಲಿ ನೀರನ್ನು ಸುರಿಯಿರಿ ಮತ್ತು ಅದು ಕುದಿಯಲು ಪ್ರಾರಂಭಿಸಿದಾಗ, ಅದರಲ್ಲಿ ಚಹಾ ಎಲೆಗಳನ್ನು ಸೇರಿಸಿ. ನಂತರ ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಸೇರಿಸಿ ಮತ್ತು ಕೆಲವು ಸೆಕೆಂಡುಗಳ ಕಾಲ ಕುದಿಸಿ.

        ಬಳಿಕ ಸ್ವಲ್ಪ ಏಲಕ್ಕಿ ಪುಡಿ ಮತ್ತು ಲವಂಗ ಸೇರಿಸಿ. ಅದು ಚೆನ್ನಾಗಿ ಕುದಿಯುವಾಗ ಗ್ಯಾಸ್ ಆಫ್ ಮಾಡಿ, ಫಿಲ್ಟರ್ ಮಾಡಿ ಮತ್ತು ಕುಡಿಯಿರಿ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries