ಮಂಜೇಶ್ವರ: ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ದಿನವಾದ ಆಗಸ್ಟ್ 15. ರಂದು ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಯ ಹೃದಯದಲ್ಲಿ ದೇಶಭಕ್ತಿಯನ್ನು ಪ್ರೇರೇಪಿಸುವ ಪ್ರಯತ್ನದ ಫಲವಾಗಿ 'ಜೆ'ೈ ಎಂಬ ತುಳು ಕಿರುಚಿತ್ರ ಬಿಡುಗಡೆಯಾಗಲಿದೆ. ಮೀಂಜ ಗ್ರಾಮದ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡ ದೇವಾನಂದ ಕಾಡೂರು ಅವರು ರಚಿಸಿ ಮೆಲ್ವಿನ್ ಡಿಎಸ್‍ಪಿ ಅವರು ಹಾಡಿದ ಸುಂದರ ಹಾಡನ್ನು ಒಳಗೊಂಡಿರುವ ತುಳು ಕಿರುಚಿತ್ರ ಆಗಸ್ಟ್ 15 ರಂದು ಬೆಳಗ್ಗೆ 9 ಗಂಟೆಗೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ.
ಭಾರತ ಸೇನೆಯ ನಿವೃತ್ತ ಕಮಾಂಡೋ ಶ್ಯಾಮರಾಜ್ ಇ ವಿ ಅವರ ಆಪ್ತ ಸಲಹೆಯ ದೃಶ್ಯಾವಳಿಯನ್ನು ಕಿರುಚಿತ್ರ ಒಳಗೊಂಡಿದೆ. ನಾಯಕನಾಗಿ ವಿನೋದ್ ರಾವ್, ನಾಯಕಿಯಾಗಿ ಕುಮಾರಿ ವೀಣಾ ಆಚಾರ್ಯ ಅಭಿನಯಿಸಿದ್ದಾರೆ. ಹೃಶಿಕೇಶ್ ಆಚಾರ್ಯ, ಕಿಶನ್ ರೈ, ಸೌಮ್ಯ ಪ್ರಕಾಶ್, ಜಯಪ್ರಶಾಂತ್ ಪಾಲೆಂಗ್ರಿ, ಶಂಕರನಾರಾಯಣ ಭಟ್, ಅಭಿಷೇಕ ರಾವ್, ಲಾವಣ್ಯ ರಾವ್ ಅಭಿನಯಿಸಿರುತ್ತಾರೆ. ಯೋಗೀಶ್ ರಾವ್ ಚಿಗುರುಪಾದೆ ಇವರು ಉತ್ತಮವಾದ ಸಂದೇಶವನ್ನು ರಚಿಸಿರುತ್ತಾರೆ. ವಿಘ್ನೇಶ್ ರಾವ್ ಅವರ ಕಥೆ ಹೃಶಿಕೇಷ್ ಆಚಾರ್ಯ ಅವರ ಸಂಭಾಷಣೆ ರಂಜಿತ್ ಕುಮಾರ್ ಜೋಡುಕಲ್ಲು ಅವರ ಕಲಾತ್ಮಕ ನಿರ್ವಹಣೆ ಮೆಲ್ವಿನ್ ಡಿಎಸ್‍ಪಿ ಅವರ ಹಿನ್ನೆಲೆ ಸಂಗೀತ ಹಾಗೂ ಪ್ರವೀಣ್ ಕುಮಾರ್ ಅವರ ಸಹ ನಿರ್ದೇಶನವಿದೆ. ಈ ಕಿರುಚಿತ್ರವು ಕೃಷ್ಣ ಶರ್ಮ ಕೆ ಅವರ ಸಂಕಲನ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದಿದೆ.





